ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ದಧಿಮುಖ

[ಜೈನ] ಒಂದು ಪರ್ವತ, ಇಂಥ ಹದಿನಾರು ಪರ್ವತಗಳಿರುವುವೆಂದು ಪುರಾಣಗಳ ಹೇಳಿಕೆ (ನಂದೀಶ್ವರವರದ್ವೀಪಂ ಅದಱ ನಾಲ್ಕುಂ ದೆಶೆಯೊಳ್ ನಾಲ್ಕು ಅಂಜನಪರ್ವತಂಗಳುಂ ಅವಱ ನಾಲ್ಕುಂ ದೆಶೆಯೊಳ್ ಸಮಚತುರಸ್ರಂಗಳಪ್ಪ ದಿವ್ಯಸರೋವರಂಗಳ್ ಪದಿನಾಱಪ್ಪುವು ಅದಱ ನಡುವೆ ದಧಿಮುಖಶಿಖರಿಗಳುಂ: ಸುಕುಮಾಚ, ೧೧. ೫೦ ವ)

ದನಗಾಹಿ

ಗೋಪಾಲ (ಗೋವಳಿಗರ ಪಳ್ಳಿಯೊಳ್ ನೆಲಸಿದಾ ದನಗಾಹಿಯೆನಿಪ್ಪ ಕೃಷ್ಣನೇಂ ತಳಿಗೆಯೊಳಿಟ್ಟು ಸಂಹರಿಸನೇ: ಜಗನ್ನಾವಿ, ೧೮. ೮೪)

ದನಿ

[ಧ್ವನಿ] ಸಪ್ಪುಳ (ರುಂಜೆಯ ದನಿ ದಿಕ್ಪಾಲರನಂಜಿಸೆ ತಳ್ತೊಗೆದ ಕಾಳೆಯ ದನಿ ದಿಕ್ಕುಂಜರನಂ ಬೆದಱಸೆ: ಪಂಪರಾ, ೪. ೫೬)

ದನಿಜೋದೀರಿತ

[ಜೈನ] ರಾಕ್ಷಸರಿಂ ಉಂಟಾದ ದುಃಖ (ಶಾರೀರ ಮಾನಸ ಕ್ಷೇತ್ರಜ ಪರಸ್ಪರೋದೀರಿತ ದನುಜೋದೀರಿತಗಳೆಂಬ ಅಯ್ದುಂ ತೆಱದ ದುಃಖಂಗಳೊಳಿರ್ದು: ಆದಿಪು, ೫. ೮೮ ವ)

ದನುಜ

ದನು ಎಂಬುವವನ ವಂಶದ ರಾಕ್ಷಸ (ಸುರ ದನುಜ ಭುಜಗ ವಿದ್ಯಾಧರ ನರ ಸಂಕುಲದೊಳ್ ಆರನಾದೊಡಂ ಏನೋ ಗರಮುಟ್ಟೆ ಕೊಲ್ಗುಂ ಇದು ನಿಜವಿರೋಧಿಯಂ ಧುರದೊಳ್ ಎಂದು ಶಕ್ತಿಯನಿತ್ತಂ: ಪಂಪಭಾ, ೧. ೧೦೩)

ದನುಜವಿರೋಧಿ

ರಾಕ್ಷಸವೈರಿ, ಕೃಷ್ಣ (ವಿಷ್ಣು ನಾರಾಯಣಂ ದನುಜಾರಾತಿ ಮುಕುಂದಂ ಅರ್ಬದಿಶಯನಂ ಗೀವರ್ಧನಂ: ಅಭಿಧಾವ, ೧. ೧. ೨೦)

ದನುಜಾರಾತಿಜಾತಾಧಿವಾಸ

ಮೇರುಪರ್ವತ (ನಿಜವಾಹಂ ಧರ್ಮಗೇಹಂ ನಿಜಧನು ದನುಜಾರಾತಿಜಾತಾಧಿವಾಸಂ ನಿಜರೂಪಂ ವಿಶ್ವರೂಪಂ: ರಾಜಶೇವಿ, ೧. ೨)

ದನುಜಾರಿ

ದನುಜವಿರೋಧಿ (ಆ ದನುಜಾರಿಯಂ ಆತ್ಮಗರ್ಭದೊಳ್ ಧರಿಯಿಸಿ ನಿಂದಳ್: ಜಗನ್ನಾವಿ, ೨. ೯೬)

ದನುತನಯ

ರಾಕ್ಷಸಪುತ್ರ (ತಲೆಯ ನೆಲೆಗೆ ಲೋಕಾಂತರಕೆ ಎಡೆಯಿಲ್ಲ ಎನಿಸೆ ಪೆರ್ಚಿದಂ ದನುತನಯಂ: ಪಂಪಭಾ, ೧೨. ೧೧)

ದಂಪತಿ

ಗಂಡಹೆಂಡಿರು (ಮನ್ಮಥಕ್ರೀಡೆಗೆ ನೋಡೆ ನಾಡೆ ಗುಱಯಪ್ಪುವು ದಂಪತಿ ಭೋಗಭೂಮಿಯೊಳ್: ಆದಿಪು, ೫. ೪೧)

ದಪ್ಪ

[ದರ್ಪ] ಗರ್ವ (ಪೊಂಬೆಟ್ಟಮಂ ನೂಂಕಲುಂ ಪೆಡೆಯಂ ತೊಟ್ಟನೆ ಮೆಟ್ಟಿ ಬಾಸುಗಿಯಂ ಆದಂ ಸೀೞಲುಂ ಪೊತ್ತು ಬಾನೆಡೆಯಂ ಬೇಗದಿನೆತ್ತಲುಂ ಬಗೆದನಾಗಳ್ ದಪ್ಪದಿಂ ದಪ್ಪಗಂ: ಕಬ್ಬಿಗಕಾ, ೧೧೯)

ದಪ್ಪಗ

[ದರ್ಪಕ] ಮನ್ಮಥ(ಪೊಂಬೆಟ್ಟಮಂ ನೂಂಕಲುಂ ಪೆಡೆಯಂ ತೊಟ್ಟನೆ ಮೆಟ್ಟಿ ಬಾಸುಗಿಯಂ ಆದಂ ಸೀೞಲುಂ ಪೊತ್ತು ಬಾನೆಡೆಯಂ ಬೇಗದಿನೆತ್ತಲುಂ ಬಗೆದನಾಗಳ್ ದಪ್ಪದಿಂ ದಪ್ಪಗಂ: ಕಬ್ಬಿಗಕಾ, ೧೧೯)

ದಬ್ಬಣ

ದಪ್ಪನಾದ ಸೂಜಿ (ಕಬ್ಬುನದ ದಬ್ಬಣಂಗಳಂ ದಬ್ಬುಕದ ಡಂಗೆಗಳಿಂ ಬೆರಲ್ಗಳೊಳಡಂಗೆ ಬೆಟ್ಟುವುದುಂ ಪಲ್ಗಳಂ ನುರ್ಗ್ಗುಗಟ್ಟುವುದುಂ: ಸುಕುಮಾಚ, ೧೧. ೪೭ ವ)

ದಬ್ಬುಕ

ಕಲ್ಲು ಸೀಳುವ ಚಾಣ (ಕರ್ಬೊನ್ನ ದಬ್ಬುಕಂಗಳಿಂ ತಲೆಯ ಸಿಪ್ಪು ಬಿಚ್ಚತ ಬಿರಿದು ಶತಖಂಡಂಗಳಪ್ಪಿನಮೆತ್ತಿ ಪೊಯ್ಯೆಯುಂ: ವರ್ಧಮಾಪು, ೫. ೩೪ ವ); ಹಾರೆ (ಮೂಳೆಯಂ ದಬ್ಬುಕದಿಂದೆ ನುಗ್ಗುನುಱಯಪ್ಪಿನೆಗಂ ಬಿಡೆ ಬೀಸಿ ಪೊಯ್ದು: ಸುಕುಮಾಚ, ೭. ೬)

ದಂಭೋಳಿ

ಸಿಡಿಲು (ಅಭ್ರರವಂ ಜ್ಯಾರವಂ ಎಯ್ದೆ ಸಂಚಳಿಪ ಮಿಂಚು ಉಗ್ರಾಸಿ ದಂಭೋಳಿ: ಪಾರ್ಶ್ವನಾಪು, ೮. ೧೬); ವಜ್ರಾಯುಧ (ಊರ್ಮಿಮಾಲಾಜೃಂಭ ದಂಭೋಳಿ ಹಸ್ತಾಹತಚಕಿತಗತ ಕ್ಷ್ಮಾಧ್ರ ವಿಸ್ತಾರ: ರಾಜಶೇವಿ, ೧. ೯೦)

ದಂಭೋಳಿಹಸ್ತ

ದಂಭೋಳಿಯನ್ನು ಹಿಡಿದವನು, ಇಂದ್ರ (ಜೃಂಭತ್ ದಂಭೋಳಿಹಸ್ತಾಹತ ಚಕಿತಗತ ಕ್ಷ್ಮಾಧ್ರವಿಸ್ಫಾರವಿದ್ಯುತ್ಸಂಭಿನ್ನಂ: ರಾಜಶೇವಿ, ೧. ೯೦)

ದಮ

ಇಂದ್ರಿಯ ನಿಗ್ರಹ (ನಿಲ್ಲಲೊಲ್ಲದೆ ವೈರಾಗ್ಯಮೆ ಕುಲವೞಯೆಂಬಂತೆ ತಂದೆಯಿಂ ಮುನ್ನಂ ನಿರ್ಮಲ ಜಿನದೀಕ್ಷೆಗವರ್ ಪೂಣ್ದು ಅಲಂಘ್ಯ ದಮಮಂ ಧರಿತ್ರಿಯಿಂ ಪೊಗೞಸಿದರ್: ಶಾಂತಿಪು, ೯. ೫೩)

ದಮಿತಾರಿ

ಅರಿಗಳನ್ನು ದಮನಮಾಡಿದವನು (ತೇಜಂ ಇಲ್ಲಾದೊಡಂ ಸೂೞಂ ಮಾಡಿದನೊಳ್ ಕಾದಲೆವೇೞ್ಕುಂ ಎಂದು ದಮಿತಾರಿ ಕೈವೀಸೆ: ಶಾಂತಿಪು, ೪. ೭ ವ)

ದಮ್ಮ

ದ್ರಮ್ಮ, ಒಂದು ನಾಣ್ಯ (ಎನಗುಡಲಿಲ್ಲ ಏನುಮೊಂದು ದಮ್ಮಕ್ಕಾದೊಡಂ ಸೀರೆಯಂ ಕೊಂಡೀಯಿಂ: ವಡ್ಡಾರಾ, ಪು. ೭೭, ಸಾ. ೧೧); ಧರ್ಮ (ಮನೆವಾೞದಮ್ಮಮವೆಲ್ಲಮಂ ನೀನೆ ಬಲ್ಲೆಯೆಂದೊಡೆ: ಪಂಚತಂತ್ರ, ೧೯೯ ವ)

ದಮ್ಮಾಣಿ

[ಧರ್ಮಪಾನೀಯ] ಧರ್ಮಾರ್ಥ ವಾಗಿ ಪ್ರಯಾಣಿಕರಿಗೆ ಕೊಡುವ ನೀರು (ಪೂರ್ವಪದಾಂತ್ಯಕ್ಕೆ ದೀರ್ಘಂ ಉತ್ತರಪದದಾದಿಗೆ ಲೋಪಮುಂ ಆಗಿ ಧರ್ಮಪಾನೀಯಕ್ಕೆ ದಮ್ಮಾಣಿಯಮೆಂದಾಯ್ತು: ಶಬ್ದಮದ, ೩೦೮ ಪ್ರ)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App