ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567894849Next >

ದಕ್ಕಣ

ಸಾಹಸ, ಛಲ (ಸಮಕಟ್ಟಿಕೊಂಡು ಸಾಧಿಸುವ ದಕ್ಕಣಂ ಸರಿಗೆವಾಳಮೆನಿಪ್ಪ ನೆಗರ್ತೆ ಕೂಡೆ ಮಾಡಿಸಿದಂ ಅದೊಂದು ನಂದನಮಂ: ವರ್ಧಮಾಪು, ೨. ೧೩)

ದಕ್ಕಾಲಿ

ನೋಡಲಾರದ ಕಣ್ಣು (ವಿಪ್ರಳಾಪಂಗೆಯ್ಯುತ್ತಂ ಮುಂದೆಲ್ಲಮಿರ್ದು ಕಣ್ಗಳ್ ದಕ್ಕಾಲಿಬಿರ್ದು: ಹರಿವಂಶ, ೧೪. ೪೭ ವ)

ದಕ್ಕು

ದಸಿ, ಮುಳ್ಳಿನಂಥ ಕತ್ತಿ (ಪುಸಿ ನಸುವಂಚನೆ ನೋರ್ಪು ಅಸಿದು ಅಗಲಿತು ತಕ್ಕು ದಕ್ಕು ಪಗೆ ಕೆಯ್ಬಗೆ ಕೆಯ್ ಕುಸುರಿ ನುಸುಳೆಂಬ ಕೇಣದ ಕುಸುರಿಯಂ ಅಱದು ಇಱದು ಮೆಱೆದು ಉಱೆದೆ ಅರೆಬರ್: ಪಂಪಭಾ, ೧೦. ೮೧)

ದಕ್ಕುಂದಲೆ

ಶೂಲದ ಮೇಲಣ ತಲೆ (ಅಲ್ಲಿ ಗುಡಿಗಟ್ಟಿದ ಸೀರೆಯಂತೆ ದಕ್ಕುಂದಲೆಗೆ ವಂದರುಂ ಮೆಚ್ಚುಕಯ್ವರಂತೆ ತೂಗುವ ತೂಗುಂದಲೆಗಳುಮಂನಱಸಿ ಕಾಣದೆ: ಹರಿವಂಶ, ೨. ೧೧ ವ)

ದಕ್ಕುಂದಲೆವರಿ

ಗರ್ವದಿಂದ ಮುಂದೆ ನುಗ್ಗು (ಉರ್ಕಿಂ ಸೊಕ್ಕಿ ದಕ್ಕುಂದಲೆವರಿದಪ್ಪರ್ ಕರಂ ನಂದಿದಪ್ಪರ್: ಅನಂತಪು, ೧೩. ೧೬)

ದಕ್ಷ

ಸಮರ್ಥ (ಶ್ರೀರಮಣೀ ರಮಣಾಂಗರಿನಾರೀ ವೈಧವ್ಯದಿವ್ಯದೀಕ್ಷಾದಕ್ಷಂಗಾರೆಣೆ: ಪಂಪರಾ, ೭. ೧)

ದಕ್ಷತೆ

ಸಾಮರ್ಥ್ಯ (ಪ್ರವಚನ ಪರಿಪಠನಕ್ಷಮತೆ ವಾಣಿಯಂ ತೀರ್ಥಯಾನ ದಕ್ಷತೆ ಪದಮಂ ಕಿವಿಯಂ ಜಿನವರ ಚರಿತಶ್ರವಣಪಟುತೆ ಪಿಂಗದನ್ನಂ ಆರ್ಜಿಪೆನಱನಂ: ಚಂದ್ರಪ್ರಪು, ೪. ೧೭)

ದಕ್ಷಾಧ್ವರಧ್ವಂಸಕ

ದಕ್ಷನ ಯಜ್ಞವನ್ನು ಹಾಳುಮಾಡಿದವನು, ಶಿವ (ಇದು ಕೈಲಾಸಂ ಭವಾನೀಧವನ ನೆಲೆ ಮನೋಜಾತನಂ ಬೂದಿಮಾಡಿತ್ತಿದಱೊಳ್ ದಕ್ಷಾಧ್ವರಧ್ವಂಸಕನ ನೊಸಲ ಕಣ್: ಪಂಪಭಾ, ೭. ೭೪)

ದಕ್ಷಿಣ

ಬಲಗಡೆ (ಉನ್ನಮಿತ ದಕ್ಷಿಣಚರಣನುಂ ಅತಿಸ್ಪಷ್ಟ ವರ್ಣಸಂಸ್ಕಾರಮಪ್ಪ ಕೃತಜಯಶಬ್ದನುಂ ಆಗಿ: ಕಾದಂಸಂ, ೧. ೨೦ ವ)

ದಕ್ಷಿಣದಿಕ್ಪಾಲ

ದಕ್ಷಿಣದ ಅಧಿಪತಿ, ಯಮ (ಅನ್ಯದುರ್ಧರ ನಿಜಧನುರ್ದಂಡಮಂ ತದ್ಧ್ವಜಿನಿಗೆ ಕೋಪಕುಟಿಲ ದಕ್ಷಿಣದಿಕ್ಪಾಲ ಭ್ರುಕುಟೀವಿಭ್ರಮಮಂ ಮಾಡಲ್ಪಡದೆಯುಂ: ಆದಿಪು, ೧೪. ೧೦೩ ವ)

ದಕ್ಷಿಣವರ್ತನ

ಬಲಕ್ಕೆ ತಿರುಗುವುದು (ದಕ್ಷಿಣವರ್ತನದಿಂದೆ ಪಜ್ಜಳಿಸುತಿರ್ದುದು ವಹ್ನಿಸಮಸ್ತಂ: ಚಂದ್ರಪ್ರಪು, ೩. ೯೪)

ದಕ್ಷಿಣವಿಷಾಣ

ಬಲಭಾಗದ ದಂತ (ನಿಜಭುಜವಿಜಯಲಕ್ಷ್ಮೀ ಪರಿರಂಭಣಪ್ರಕಟನದಕ್ಷದಕ್ಷಿಣವಿಷಾಣವಿನ್ಯಸ್ತಹಸ್ತನುಂ: ಆದಿಪು, ೧೪. ೯೦ ವ)

ದಕ್ಷಿಣಹಸ್ತ

ಬಲಗೈ (ಅಂತಕಾರಾದಿ ಹಕಾರಾಂತ ಸ್ವರವ್ಯಂಜನ ಭೇದಭಿನ್ನ ಶುದ್ಧಾಕ್ಷರಂಗಳುಮಂ ಆಯೋಗವಾಹಕ ಚತುಷ್ಕಮುಮಂ ಸಂಯೋಗಾಕ್ಷರಂಗಳುಮಂ ಬ್ರಹ್ಮಿಗೆ ದಕ್ಷಿಣಹಸ್ತದೊಳ್ ಉಪದೇಶಂಗೆಯ್ದು: ಆದಿಪು, ೮. ೫೯ ವ)

ದಕ್ಷಿಣಾಕಾಲ

ದಾನ ಕೊಡುವ ವೇಳೆ (ಮೂವತ್ತೆರಡು ದಿವಸದೊಳ್ ಕ್ರತುವಂ ನಿರ್ವರ್ತಿಸಿ ಮಹಾದಾನಂಗೆಯ್ದು ದಕ್ಷಿಣಾಕಾಲದೊಳ್: ಪಂಪಭಾ, ೬. ೩೮ ವ)

ದಕ್ಷಿಣಾಕ್ಷಿಸ್ಪಂದ

ಬಲಗಣ್ಣ ಅದುರುವಿಕೆ (ಅರಿಮಕುಟರತ್ನಮಂ ನಿಜಚರಣಕ್ಕರ್ಘ್ಯಪ್ರದೀಪಮಾಗಿರ್ಪುದನಾ ಭರತೇಶ್ವರಂಗೆ ಸೂಚಿಸಿದತ್ತು ದಕ್ಷಿಣಾಕ್ಷಿಸ್ಪಂದಂ: ಆದಿಪು, ೧೧. ೧೨)

ದಕ್ಷಿಣಾಕ್ಷಿಸ್ಪಂದನ

ಬಲಗಣ್ಣ ಅದುರುವಿಕೆ (ಅಂತು ದಕ್ಷಿಣಾಕ್ಷಿಸ್ಪಂದನದೊಳಂ ಸೂಚಿಸುವ ಶುಭಸೂಚನೆಯೊಳಂ ನಾರಾಯಣಂ ಉದಾತ್ತನಾರಾಯಣನ ಬರವನಱದು: ಪಂಪಭಾ, ೩. ೩೩ ವ)

ದಕ್ಷಿಣಾಗ್ನಿ

ಅಗ್ನಿತ್ರಯದಲ್ಲಿ ಒಂದು (ತೀರ್ಥಕರಗಣಧರಾನಗಾರ ಕೇವಳಿಗಳ್ ಪರಿನಿರ್ವಾಣಕ್ಷೇತ್ರದೊಳ್ ಶರೀರಸಂಸ್ಕಾರಾದಿ ಗಾರ್ಹಪತ್ಯ ದಕ್ಷಿಣಾಗ್ನಿ ಆಹವನೀಯಮೆಂಬ ಪೆಸರಂ ಪಡದಂ: ಆದಿಪು, ೧೫. ೧೬ ವ)

ದಕ್ಷಿಣಾಪಥ

ವಿಂಧ್ಯಪರ್ವತದ ದಕ್ಷಿಣಕ್ಕಿರುವ ಭೂಭಾಗ (ದಕ್ಷಿಣಾಪಥದಿನೊರ್ವಳ್ ಕನ್ನೆ ಚಂಡಾಲೆ ದರ್ಶನತಾತ್ಪರ್ಯದೆ ರಾಜಕೀರಸಹಿತಂ ಬಂದಿರ್ದಪಳ್ ಬಾಗಿಲೊಳ್: ಕಾದಂಬ, ೧. ೨೨)

ದಕ್ಷಿಣಾಭಿಮುಖ

ದಕ್ಷಿಣಕ್ಕೆ ಎದುರಾದ (ದಕ್ಷಿಣಾಭಿಮುಖನಾಗಿ ನಿತ್ಯಪ್ರಯಾಣಂಗಳಿಂ ಬಂದು: ಆದಿಪು, ೧೩. ೭೭ ವ)

ದಕ್ಷಿಣಾವರ್ತ

ಬಲಭಾಗವಾಗಿ ಸುತ್ತು, ಪ್ರದಕ್ಷಿಣೆ (ಹೋಮಾನಳನಂ ಮದುವಕ್ಕಳ್ ಮಿಸುಪ ಲಾಜೆಯಿಂ ಪೂಜಿಸಿದರ್: ಜಗನ್ನಾವಿ, ೧೦. ೧೩೩)
< previous1234567894849Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App