ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567898182Next >

ನಃ

ನಮ್ಮನ್ನು (ಸ ಸರ್ವಜಗತಾಂ ಗುರುರ್ಗಿರಿಸುತಾಪತಿಃ ಪಾತು ನಃ: ೪. ೨೭)

ನ ದೇವಚರಿತಂ ಚರೇತ್

ದೇವರ ನಡೆಯಂತೆ ನಡೆದುಕೊಳ್ಳಲಾಗದು (ನ ದೇವಚರಿತಂ ಚರೇತ್ ಎನಿಸಿದೈ ತ್ರಿಲೋಕೇಶ್ವರಾ: ಆದಿಪು, ೧೩. ೮೪)

ನ ಹಿಂಸ್ಯಾತ್ ಸರ್ವಭೂತಾನಿ

ಎಲ್ಲ ಪ್ರಾಣಿಗಳಲ್ಲಿಯೂ ಹಿಂಸೆ ಕೂಡದು (ನ ಹಿಂಸ್ಯಾತ್ ಸರ್ವಭೂತಾನಿ ಎಂದು ಅಕಳಂಕತರ್ಕಪ್ರತಿಷ್ಠಾನಿಶ್ಚಯ ಜೈನಸಿದ್ಧಾಂತವಾದಿಗಳುಂ: ಪಂಚತಂತ್ರ, ೧೧೭ ವ)

ನಕುಲ

ಮುಂಗುಸಿ (ತನ್ನ ಮನೆಯೊಳ್ ಮಾರ್ಮನುಷ್ಯರಿಲ್ಲದ ಕಾರಣದಿಂ ತಾಂ ನಡಪಿದೊಂದು ನಕುಲನಂ ತೊಟಿಲ ಸಮೀಪದೊಳ್ .. .. ಕಟ್ಟಿ ಪೋದಂ: ಪಂಚತಂತ್ರ, ೨೫೭ ವ); ಪಂಚಪಾಂಡವರಲ್ಲೊಬ್ಬ (ನಕುಲಂ ಕುಂತಶಸ್ತ್ರದೊಳತಿಪ್ರವೀಣನುಮಾಗಿ: ಪಂಪಭಾ, ೨. ೩೬ ವ)

ನಕುಳ

ನಕುಲ, ಮುಂಗುಸಿ (ಶಾರ್ದೂಲ ವರಾಹ ಗೋಲಾಂಗೂಲ ನಕುಳಂಗಳಂ ನೋಡುತ್ತಮವರ್ಕೆ ಭಕ್ಷ್ಯಾಪೂಪಗಳಂ ತಿರಿಸಿ ನೀಡುತ್ತಮಿರ್ದ: ಆದಿಪು, ೫. ೨ ವ) ನಕ್ಕಿಸು ನೆಕ್ಕಿಸು (ಸುರಭಿಯಿಂ ನಕ್ಕಿಸೆ ದೇಹಮನೆಲ್ವಂ ಉರ್ಚಿ ಕುಡೆ ಕಯ್ದುವಾದವು ಆ ಗೊರವನೆಲ್ವು ಗಡ: ಸಮಯಪ, ೧೦. ೧೪೨)

ನಕ್ಕು

ನೆಕ್ಕು, ನಾಲಗೆಯಿಂದ ರುಚಿನೋಡು (ಎನಿತಾನುಂ ಅಂಬುನಿಧಿಗಳಂ ಅನೇಕ ನಾಕಂಗಳಲ್ಲಿ ಕುಡಿದುಂ ಪೋಯ್ತಿಲ್ಲೆನಗೆ ನರಭೋಗಮೆಂಬೀ ಪನಿಪುಲ್ಲಂ ನಕ್ಕೆ ತೃಷ್ಣೆ ಪೇೞ್ ಪೋದಪುದೇ: ಆದಿಪು, ೯. ೫೭)

ನಕ್ತಂಚರ

ರಾತ್ರಿಯಲ್ಲಿ ಚರಿಸುವುದು, ರಾಕ್ಷಸ (ಆ ಪುರವರೇಣ್ಯಂ ಧಿಷ್ಣ್ಯಮಾಗಿಯುಂ ನಕ್ತಂಚರಯುಕ್ತಮಲ್ತು ಅಗಣ್ಯ ಪುಣ್ಯಜನಮಯಮಾಗಿಯುಂ ವಿಬುಧರಹಿತಮಲ್ತು: ಶಾಂತೀಶ್ವಪು, ೧. ೧೩೨ ವ)

ನಕ್ತಂಚರಿ

ರಾಕ್ಷಸಿ (ನಕ್ತಂಚರೀಮುಖದೊಳ್ ತೂಂತುವುದು ಆಂತರಂ ದಶಮುಖೋತ್ಖಾತಾಸಿ ಧಾರಾಮುಖಂ: ಪಂಪರಾ, ೧೦. ೨೨೩)

ನಕ್ತಮಾಲ

ಹುಲಿಗಿಲು ಮರ (ನಾಗ ನಕ್ತಮಾಲವನದ ಪೂಗವನ ತಮಾಲವನದ ಲೀಲೆ ಕರಮೆ ಕಣ್ಗೆವರ್ಕು: ಅಜಿತಪು, ೧. ೮)

ನಕ್ರ

ಮೊಸಳೆ (ಕ್ಷಣರುಗ್ಮಾಲಾಮಯ ಅಬ್ದಕ್ಕೆಣೆಯೆನಿಸೆ ಚಳತ್ಕಾಂತಿಯುಕ್ತಾಂತರಂಗೋಲ್ಬಣೆ ನಕ್ರ ಆರೂಢೆ .. .. ಆ ಮಹಾಮನಸೀ ಯಕ್ಷಿಣಿಯೆಂದುಂ ಮಾೞ್ಕೆ ಶಾಂತೀಶ್ವರಚರಿತಕೃತಿಶ್ರೀಗೆ ಸೌಭಾಗ್ಯದೊಳ್ಪಂ: ಶಾಂತೀಶ್ವಪು, ೧. ೧೦)

ನಕ್ಷತ್ರ

ಹುಟ್ಟಿದ ನಕ್ಷತ್ರ (ಶುಭತಿಥಿ ಶುಭನಕ್ಷತ್ರಂ ಶುಭವಾರಂ ಶುಭಮುಹೂರ್ತಮೆನೆ ಗಣಕಂ ಇಳಾಪ್ರಭುವೊಗೆದಂ ಉದಿತಕಾಯಪ್ರಭೆಯೊಗೆದಿರೆ ದಳಿತಶತ್ರುಗೋತ್ರಂ ಪುತ್ರಂ: ಪಂಪಭಾ, ೧. ೧೨೭)

ನಕ್ಷತ್ರಪಾಠಕ

ಜ್ಯೋತಿಷಿ (ಕ್ಷಿತೀಶಂ ನಕ್ಷತ್ರಪಾಠಕಪ್ರಕರನಿರೂಪಿತ ಶುಭಲಗ್ನದೊಳ್ .. .. ವಿವಾಹಂ ಮಾಡಿ: ಕರ್ಣನೇಮಿ, ೩. ೧೯೫ ವ)

ನಕ್ಷತ್ರಮಾಲೆ

ನಕ್ಷತ್ರಸಮೂಹ (ನಕ್ಷತ್ರಮಾಲೆಯನೋಲಗಿಸುವಂತೆ ಮುಕ್ತಾಫಲನೂಪುರಮಂ ತುಡಿಸಿಯುಂ: ಪಂಪರಾ, ೫. ೪೨ ವ)

ನಕ್ಷತ್ರಮಾಳಾ

ಇಪ್ಪತ್ತೇಳು ಎಳೆಗಳ ಮುತ್ತಿನ ಕಂಠೀಹಾರ (ಅರ್ಧಹಾರ ರಶ್ಮಿಕಳಾಪ ನಕ್ಷತ್ರಮಾಳಾ ಅರ್ಧಗುಚ್ಛ ಮಾಣವಕ ಅರ್ಧಮಾಣವಕಗಲೆಂಬ ಪನ್ನೊಂದು ನಾನಾರತ್ನದ ಸುವರ್ಣಪದಕವಿರಚನಾದಿ ಭೇದದಿಂ: ಆದಿಪು, ೮. ೫೪ ವ)

ನಕ್ಷತ್ರಮಾಳಾ

ಇಪ್ಪತ್ತೇಳು ಎಳೆಗಳ ಮುತ್ತಿನ ಕಂಠೀಹಾರ (ಅರ್ಧಹಾರ ರಶ್ಮಿಕಳಾಪ ನಕ್ಷತ್ರಮಾಳಾ ಅರ್ಧಗುಚ್ಛ ಮಾಣವಕ ಅರ್ಧಮಾಣವಕಗಲೆಂಬ ಪನ್ನೊಂದು ನಾನಾರತ್ನದ ಸುವರ್ಣಪದಕವಿರಚನಾದಿ ಭೇದದಿಂ: ಆದಿಪು, ೮. ೫೪ ವ)

ನಖ

ಉಗುರು (ತಳಮಿವು ತಳಿರಿವು ಬೆರಲಿವು ಕಳಿಕೆಗಳಿವು ನಖಮಿವು ಅಲರಿವು ಎಂದಱಯದೆ ಕೋಮಳೆ ಪೂಗೊಯ್ವೆಡೆಯೊಳ್ ಪಳಪಳಿಸಿದಳ್ ಅತಿಮುಗ್ಧೆ ಮಾವಿನೊಳ್ ಮತ್ತೊರ್ವಳ್: ಶಾಂತೀಶ್ವಪು, ೧೦. ೧೨೬)

ನಖಂಪಚ

ಉಗುರು ಬೆಚ್ಚಗಿನ (ಮದನದವಾಗ್ನಿತಪ್ತೆಯರ ಸುಯ್ಯ ನಖಂಪಚಮಾಗಿ ಬರ್ಪ ತಣ್ಗದಿರನೆಲರ್ಚಿ: ಅನಂತಪು, ೭. ೮೧)

ನಖಪದ

ಉಗುರಿನ ಗೀರುಗಾಯ (ಮದಯುತಂ ಅನ್ಯವಧೂನಿವಹದ ಮೆಯ್ಯೊಳ್ .. .. ವಿರಚಿಸುವಂ ನಖಪದಮಂ: ಪಾರ್ಶ್ವನಾಪು, ೩. ೭೫)

ನಖಮಯೂಖ

ಉಗುರಿನ ಕಾಂತಿ (ಪುಟ್ಟಿದಂ ಅಖಿಳ ಕ್ಷ್ಮಾಪಾಲಮೌಳಿ ಮಣಿರಂಜಿತ ಕಿರಣಾಪಾಳಿತ ನಖಮಯೂಖರಂಜಿತ ಚರಣಂ: ಪಂಪಭಾ, ೧. ೧೮)

ನಖಮಾಂಸ ಪ್ರೀತಿ

ಉಗುರು ಮಾಂಸಗಳ ನಡುವಿರುವಂತಹ ಎಂದರೆ ಅನ್ಯೋನ್ಯ ಪ್ರೀತಿ (ಆತನೊಡವೋಯ್ತು ಪಗೆ ನಿಮಗೆ ಆತನಿಂ ಅಗ್ಗಳದ ಮಗನೆನಾಂ ನಖಮಾಂಸಪ್ರೀತಿಯೊಳೆ ನೆಗೆೞ್ವೆಂ: ಪಂಪಭಾ, ೧೪. ೭)
< previous1234567898182Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App