ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456789165166Next >

ಪಂಕ

ಕೆಸರು (ಕುಂಕುಮ ಪಂಕ ಪಂಕಿಳಸಾರ ಘನಸಾರ ಸಾರೀಭೂತ ಶಾರದೇಂದು: ಪಾರ್ಶ್ವನಾಪು, ೩. ೩೨ ವ); ಲೇಪನದ್ರವ್ಯ

ಪಂಕಜ

ಕೆಸರಿನಲ್ಲಿ ಹುಟ್ಟಿದುದು, ತಾವರೆ (ಪಂಕಜಮುಂ ಸುಹೃದ್ವನಪಂಕಜಮುಂ ಮುಗಿವನ್ನಂ .. .. ಕುರುಕುಲಾರ್ಕನುಂ ಅರ್ಕನುಂ ಅಸ್ತಮೆಯ್ದಿದರ್: ಗದಾಯು, ೯. ೩೫)

ಪಂಕಜನೇತ್ರೆ

ಕಮಲದಂತೆ ಕಣ್ಣುಳ್ಳವಳು (ಪಂಕಜನೇತ್ರೆ ಹಂಸಗಮನಾನ್ವಿತೆ .. .. ಭ್ರಮರಜಾಳಮನೇೞಸಿ ಪೋಗಲೀಗುಮೇ: ಪಾರ್ಶ್ವನಾಪು, ೧೦. ೫೧)

ಪಂಕಜವಕ್ತ್ರ

ತಾವರೆಯಂತಹ ಮುಖ[ವುಳ್ಳವನು] (ಸಾಲಪ್ರಾಂಶು ವಿಶಾಲ ಲೋಲನಯನಂ ಪ್ರೋದ್ಯತ್ ವೃಷಸ್ಕಂಧಂ ಉನ್ಮೀಲತ್ ಪಂಕಜವಕ್ತ್ರಂ ಆಯತ ಸಮಗ್ರ ಉರಸ್ಸ್ಥಳಂ: ಪಂಪಭಾ, ೧. ೬೮)

ಪಂಕಜವಿಷ್ಟರ

ಕಮಲದ ಆಸನವುಳ್ಳವನು, ಬ್ರಹ್ಮ (ಪಂಕಜವಿಷ್ಟರಂ .. .. ಹರಂ ಭವಹರಂ ಮಾಣಿಕ್ಯದೇವಂ ದೇವನಾಗಿರೆ ಜಯಂ ಭದ್ರಂ ಶುಭಂ ಮಂಗಳಂ: ಆದಿಪು, ೧೬. ೬)

ಪಂಕಜಾಕರ

ಕಮಲಗಳ ಆವಾಸ, ಕೊಳ (ಮರುತ್ಪಥದಲ್ಲಿ ಪಂಕಜಾಕರದೆಡೆಯಲ್ಲಿ ತಳ್ತ ತಿಳಿಜೊನ್ನಮಂ ಅಂಚೆಗಳ್ .. .. ಒಸೆದು ಈಂಟಲ್: ರಾಜಶೇವಿ, ೧೩. ೪೩)

ಪಂಕಪ್ರಭೆ

[ಜೈನ] ಏಳರಲ್ಲಿ ನಾಲ್ಕನೆಯ ನರಕ, (ಪಂಕಪ್ರಭೆಯೊಳ್ ದಶಬ್ಧ್ಯುಪಮೆಯಿಂ ದುಃಖಾಗ್ನಿಯೊಳ್ ಬೆಂದು: ಆದಿಪು, ೫. ೪)

ಪಂಕಭಾಗ

[ಜೈನ] ರತ್ನಪ್ರಭೆ ಎಂಬ ನರಕದ ಮೂರು ಭಾಗಗಳಲ್ಲಿ ಒಂದು (ರತ್ನಪ್ರಭೆಯೆಂಬ ಪೃಥ್ವಿ .. .. ಪೃಥ್ವಿ ವಜ್ರಖರ ಪಂಕಜಲಬಹುಳಭಗದಿಂ ತ್ರಿವಿಧಮಕ್ಕುಂ .. .. ಪಂಕಭಾಗಂ ಎಣ್ಬತ್ತನಾಲ್ಕುಸಾಸಿರ ಯೋಜನಂ: ಸುಕುಮಾಚ, ೧೧. ೪೧ ವ)

ಪಂಕರುಹ

ಪಂಕಜ (ತಂದಳ್ ಇಂತಿದಂ ದೇವರ ಪಾದಪಂಕರುಹದಲ್ಲಿಗೆ ಕನ್ಯೆಯದೊಂದು ಭಕ್ತಿಯಿಂ: ಕಾದಂಬ, ೧. ೫೨)

ಪಂಕಿಲ

ಕೆಸರಿನಿಂದ ಕೂಡಿದ (ಪಂಕುಲಮಾಗಿ ಗೋಕುಲದ ಗೋಮಯದಿಂ ನಡೆಗೊಳ್ವ ಘಾತದಿಂ ಕದಡಾಗಿ .. .. ತೋಱೆ: ಲೀಲಾವತಿ, ೫. ೮೪)

ಪಂಕಿಳ

ಕೆಸರು (ಜಾಱ ಜವದಿಂ ಕೈಯೂಱ ಬೀಳ್ದೇಳ್ದು ಪಂಕಿಳಮಾದ ಅಂಶುಕಮಂ ಪೊನಲ್ವರಿವ ನೀರೊಳ್ ಕರ್ಚಿ: ರಾಜಶೇವಿ, ೮. ೧೨೪)

ಪಂಕಿಳಸಾರ

(ಕುಂಕುಮ ಪಂಕ ಪಂಕಿಳಸಾರ ಘನಸಾರ ಸಾರೀಭೂತ ಶಾರದೇಂದು: ಪಾರ್ಶ್ವನಾಪು, ೩. ೩೨ ವ)

ಪಂಕೇಜಗರ್ಭಾತ್ಮಜ

[ಪಂಕೇಜಗರ್ಭ+ಆತ್ಮಜ = ಬ್ರಹ್ಮನ ಮಗ] ನಾರದ (ಎಮ್ಮನ್ವಯಕ್ಷ್ಮಾಪರ್ ಆವ ವಿಳಾಸಂಗೊಳ್ ಇರ್ಪರ್ ಏದೊರೆತು ತಾಂ ಎಮ್ಮಯ್ಯನೈಶ್ವರ್ಯಂ ಇಂತು ಇವನೆಲ್ಲಂ ತಿಳಿವಂತುಟಾಗಿ ಬೆಸಸಿಂ ಪಂಕೇಜಗರ್ಭಾತ್ಮಜಾ: ಪಂಪಭಾ, ೬. ೧೫)

ಪಂಕೇಜಪತ್ರಾಂಬು

[ಪಂಕೇಜ+ಪತ್ರ+ಅಂಬು] ತಾವರೆಯ ಎಲೆಯ ಮೇಲಿನ ನೀರು (ಅರ್ಕಂ ಅಳುರ್ಕೆಗೆಟ್ಟು ನಭದಿಂ ತೂಳ್ದಂ ಸುರುಳ್ದಪ್ಪಿದಳ್ ಮೃಡನಂ ಗೌರಿ ಸಮಸ್ತಂ ಈ ತ್ರಿಭುವನಂ ಪಂಕೇಜಪತ್ರಾಂಬುವೋಲ್ ನಡುಗಿತ್ತು: ಪಂಪಭಾ, ೧೦. ೨೬)

ಪಂಕೇಜಪತ್ರೇಕ್ಷಣೆ

ತಾವರೆಯ ದಳದಂತೆ ಕಣ್ಣುಳ್ಳವಳು (ಮಹಾಪ್ರಳಯ ಉಲ್ಕೋಪಮ ಮತ್ ಗದಾಹತಿಯಿಂ ಅತ್ಯುಗ್ರ ಆಜಿಯೊಳ್ ಮುನ್ನಂ ಈ ಖಳ ದುಶ್ಶಾಸನನಂ ಪೊರಳ್ಚಿ ಬಸಿಱಂ ಪೋೞಕ್ಕಿ ಬಂಬಲ್ಗರುಳುಗಳಂ ಆನಲ್ತೆ ವಿಳಾಸದಿಂ ಮುಡಿಯಿಪೆಂ ಪಂಕೇಜಪತ್ರೇಕ್ಷಣೇ: ಪಂಪಭಾ, ೭. ೧೨)

ಪಂಕೇಜವಕ್ತ್ರೆ

ಕಮಲಮುಖಿ (ಅಂತೆ ಬಂದು ಪಂಕೇಜವಕ್ತ್ರೆ ಮತ್ಸ್ಯಸುತನಂ ನುಡಿದಳ್: ಪಂಪಭಾ, ೮. ೯೭)

ಪಂಕೇರುಹನಾಭ

ಬ್ರಹ್ಮ (ದ್ವಾರಾವತೀಪುರಕ್ಕೆ ಚರರಂ ತಡವಿಲ್ಲದೆ ಬೇಗಮಟ್ಟಿ ಪಂಕೇರುಹನಾಭನಂ ಬರಿಸಿ: ಪಂಪಭಾ, ೬. ೨೧)

ಪಕ್ಕ

[ಪಕ್ಷ] ಬದಿ, ಮಗ್ಗುಲು (ಎರಡು ಪಕ್ಕದೆ .. .. ಚಾಮರಮಂ ಚೆನ್ನೆಯರಿಕ್ಕೆ: ಪಂಪರಾ, ೨. ೧೧); ರೆಕ್ಕೆ (ಪಕ್ಕವೇನುಡಿದಿತ್ತೋ ಪಿಡಿದು ಅನ್ಯಶಾರಿಕೆ ರತವ್ಯಾಪಾರದೊಳ್ ಪೊಯ್ದಳೋ: ಲೀಲಾವತಿ, ೬. ೯೩)

ಪಕ್ಕಗೂಡಾಗು

ಮಗ್ಗುಲು ಮೇಲಾಗು (ಎಡಬಲದೊಳಗೆ ಆಂ ಬೀೞುತುಂ ಪಕ್ಕಗೂಡಾಗಿ ಒಱಗುತ್ತುಂ ಪೋಗಿ: ಕಾದಂಸಂ, ೧. ೬೦)

ಪಕ್ಕಜಲ್ಲಿ

ಎಡಬಲದ ಇಳಿಬಿಟ್ಟ ತೊಂಗಲು (ಪಸುರಂಗಿಗೆ ಪೀಲಿಯ ಪಕ್ಕಜಲ್ಲಿ ಗೇಣಳವಡೆ ತೊಟ್ಟ ಪೊಂಬುಲಿಯ ಸಮ್ಮದ ಚಲ್ಲಣಮೊಪ್ಪೆ: ಶಬರಶಂ, ೩. ೧೬)
< previous123456789165166Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App