ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

ಫಣ

ಹಾವಿನ ಹೆಡೆ (ಶೇಷಂ ಫಣಂ ಬಳ್ಕಿಸುರ್ಕಿದಪಂ ಸೀರೆಯ ಸಿಂಬಿವೊಲ್ ಖಳನೃಪಾಲಾಕ್ಷೌಹಿಣೀ ಭರದಿಂ: ಜಗನ್ನಾವಿ, ೧. ೩೦)

ಫಣಭೃತ್

(ಉರಗಂ ಭೋಗಿ ಸರಿಸರಪಂ ಫಣಿ .. . ಫಣಭೃತ್ .. .. ಸರ್ಪಂ: ಅಭಿಧಾವ, ೧. ೩. ೭)

ಫಣಮಣಿ

ಹಾವಿನ ಹೆಡೆಯ ಮಣಿ (ಚೂಡಾಮಣಿಗೆಱಗೆ ಚಕ್ರಿಪದದೊಳ್ ಫಣಮಣಿ ಪುನರುಕ್ತಿ ಪಾಂಡ್ಯಪತಿಗಾಯ್ತಾಗಳ್: ಶಾಂತಿಪು, ೧೧. ೪)

ಫಣಾಗಣಮಣಿಕಿರಣ

ಹೆಡೆಗಳ ಸಮೂಹದ ರತ್ನದ ಕಾಂತಿ (ಆಗಳ್ ಅನಂತಂ ಅನಂತ ಫಣಾಗಣಮಣಿಕಿರಣಮೆಸೆಯೆ ದುಗ್ಧಾರ್ಣವದೊಳ್ ರಾಗದಿನಿರ್ಪಂತಿರ್ದಂ ಭೋಗಿ ತೞತ್ತೞಸಿ ಬೆಳಗೆ ಕೆಯ್ದೀವಿಗೆಗಳ್: ಪಂಪಭಾ, ೪. ೫೩)

ಫಣಾಪತಿ

ಆದಿಶೇಷ (ಅದು .. .. ಮಹತ್ವದಿಂದ ಇೞವುದು ಧನಪತಿ ದಿವಿಜಪತಿ ಫಣಾಪತಿಇಉರಮಂ: ಪುಷ್ಪದಂಪು, ೨. ೩೩)

ಫಣಾಮಣಿ

ಫಣಮಣಿ (ಸಮಸ್ತ ಉರ್ವೀಧರ ಅಶೇಷ ಶೇಷ ಮಹಾನಾಗ ಫಣಾಮಣಿ ದ್ಯುತಿಯನೇಂ ಖದ್ಯೋತದೊಳ್ ಕಾಣ್ಬರೇ: ಪಂಪಭಾ, ೫. ೭೬)

ಫಣಾರತ್ನ

ಫಣಾಮಣಿ (ದೀಪದೊಳ್ ಪನ್ನಗಪತಿಯ ಫಣಾರತ್ನದೀಪಂ ವಿತಾನಾವಳಿಯೊಳ್ ದಿವ್ಯಂ ವಿತಾನಂ ತುಱುಗಿದುವು: ಆದಿಪು, ೧೬. ೨)

ಫಣಿ

ಹೆಡಯುಳ್ಳುದು, ಹಾವು (ಉರಗಂ ಭೋಗಿ ಸರಿಸರಪಂ ಫಣಿ .. . ಫಣಭೃತ್ .. .. ಸರ್ಪಂ: ಅಭಿಧಾವ, ೧. ೩. ೭)

ಫಣಿಕಟಕ

ಶಿವ (ಫಣಿಕಟಕನ ಕೆೞಗೆ ಬಯ್ಕೆಯಿರ್ದಪುವೆಂಬರ್: ಸಮಯಪ, ೨. ೬೫)

ಫಣಿಕೇತನ

ರ್ಪಧ್ವಜ, ದುರ್ಯೋಧನ (ಎಂಬುದುಂ ಬೞಕ್ಕಿನ ನುಡಿಗೆ ಸೈರಿಸಲಾಱದೆ ಫಣಿಕೇತನಂ ಇಂತೆಂದಂ: ಪಂಪಭಾ, ೧೩. ೨೩ ವ)

ಫಣಿಗಳ್

ರಾಹುಕೇತುಗಳು (ಚಂದ್ರ ಕುಜ ಬುಧ ಅಮರಗುರು ದೈತ್ಯಾರಾಧ್ಯಮಂದಫಣಿಗಳಂ ಆರಾಧಿಪನ್ ಒಂದು ಮಣೆಗೆ ತಂದನಿಬರುಮಂ: ಸಮಯಪ, ೮. ೧೬೩)

ಫಣಿಗೃಹ

ಹುತ್ತ (ಸುಖನಿಧಿ ಕಂಠೀರವವಿಷ್ಟರ ದಿನಧಿಕನಮರಾಲಯದಿಂ ಧೀರಂ ಫಣಿಗೃಹದಿಂದಂ ವೀರಂ: ಶಾಂತಿಪು, ೯. ೨೧೧)

ಫಣಿಗೇಹ

ಫಣಿಗೃಹ (ಫಣಿಫಣಾಸ್ಫುರಿತದೀಪಿಕಾವೈಹಮಂ ಕ್ವಣಿತಮಣಿಕಿಂಕಿಣೀನಿನದ ಫಣಿಗೇಹಮಂ .. .. ನೋಡಿ: ಆದಿಪು, ೭. ೨೭)

ಫಣಿದಷ್ಟ

ಹಾವು ಕಚ್ಚಿದವನು (ಫಣಿದಷ್ಟನ ನಾಲಗೆಗೆ ಎಂತು .. .. ಮಧುರಂಗಳೆ ತಿಕ್ತರಸಂಗಳಾಗಿ ಸಂಕ್ರಮಿಸುಗುಂ .. .. ಅಂತೆ ಕುದೃಷ್ಟಿಗೆ .. .. ತೋರಷುಗುಂ: ಸಮಯಪ, ೧೧. ೧೫೪)

ಫಣಿಪತಿಕೇತನ

ಧ್ವಜದಲ್ಲಿ ಹಾವಿನ ಚಿಹ್ನೆಯುಳ್ಳವನು, ದುರ್ಯೋಧನ (ಫಣಿಪತಿಕೇತನಧೂಮಕೇತುವುಂ ಪಾಂಡವಬಾಲಪ್ರದೀಪನುಂ .. .. ಎನಿಸಿದ ಭೀಮಸೇನಂ: ಗದಾಯು, ೨. ೧ ವ)

ಫಣಿಪ್ರಭು

ಫಣಿಪತಿ (ಫಣಿಪ್ರಭುಗಂ ಎತ್ತಮತ್ತಳಗಮಲ್ತೆ ರೂಪಸ್ತವಂ: ಆದಿಪು, ೧೩. ೯೦)

ಫಣಿಫಣಾ

ಹಾವಿನ ಹೆಡೆ (ಫಣಿಫಣಾಸ್ಫುರಿತ ಮಣಿದೀಪಿಕಾವ್ಯೂಹಮಂ: ಆದಿಪು, ೭. ೨೭ ರಗಳೆ)

ಫಣಿಭೂಷಣ

ಹಾವುಗಳೆಂಬ ಆಭರಣ (ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಂ ಉಜ್ಜಳಜಸಂ ಅಗಸಂಗತ ಲಸತ್ ಭಸಿತಂ ಪ್ರಭುಶಕ್ತಿ ಶಕ್ತಿ ನಿರ್ಮಳಮಣಿಭೂಷಣಂ ಫಣಿಭೂಷಣಂ ಆಗೆ ನೆಗೞ್ತೆಯಂ ಪುದುಂಗೊಳಿಸಿದಂ ಈಶ್ವರಂ ನೆಗೞ್ದ ಉದಾರಮಹೇಶ್ವರಂ ಈಗೆ ಭೋಗಮಂ: ಪಂಪಭಾ, ೧. ೨)

ಫಣಿರಾಜಕೇತನ

ಫಣಿಪತಿಕೇತನ (ನಿಜತೇಜದಿಂ ಆಂತ ದೈತ್ಯರಂ ತಳವೆಳಗಾಗೆ ಕಾದಿ ಚಳಿತು ಎಯ್ದಿ ಬೞಲ್ದು ಅಪರಾಂಬುರಾಶಿಯೊಳ್ ಮುೞುಗುವ ತೀವ್ರದೀಧಿತಿವೊಲ್ ಆ ಕೊಳದೊಳ್ ಫಣಿರಾಜಕೇತನಂ ಮುೞುಗಿದಂ: ಪಂಪಭಾ, ೧೩. ೭೪)

ಫಣಿರಾಜಕೇತು

ದುರ್ಯೋಧನ (ಮುಂದೆ ಬಂದು ಏಡಿಸುವಂತಿರೆ ಆಡಿದುದೊಂದು ಮರುಳ್ ಫಣಿರಾಜಕೇತುವಂ: ಪಂಪಭಾ, ೧೩. ೫೪)
< previous123Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App