ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಗಿ

ಬೆದಕು (ನಿಷ್ಠರದಿಕ್ಕಿ ಮೆಟ್ಟಿ ಪುೞುಗಳ್ ಕರಮೆಲ್ಲೆಡೆ ಪತ್ತಿ ಬಗಿದು ತನೆ ಮೆಯ್ಯಡಗಂ: ಧರ್ಮಾಮೃ, ೩. ೪೮)

ಬಂಗು

ಬೂಜು (ಅವನುಪಕಾರಮಂ ಫೇೞವೇೞ್ವುದೆ ನಮ್ಮ ತಿರಿದು ತಂದುಣ್ಬಶನಕ್ಕೆ ಅವರಣ್ಣೆ ಸೂಜಿಮೊನೆಯೆನಿಸುವ ಎಣ್ಣೆಯುಂ ಬಂಗುಮಾದ ಕೞಯುಂ ಪೇೞ್ಗುಂ; ಸುಕುಮಾಚ, ೨. ೬೮)

ಬಗೆ

ಯೋಚನೆ ಮಾಡು (ನಿಮಿತ್ತಜ್ಞಂ ಅಂಬರ ಭೂಗೋಚರರೊಳ್ ಪರೀಕ್ಷಿಸಿ ನಿಮಿತ್ತಾಂಗಂಗಳೊಳ್ ನೋಡಿ ಕಂಡಿರದೆ ಇಂತೆಂದಂ ಬಗೆದು: ಶಾಂತಿಪು, ೫. ೨೧); ಪರಿಗಣಿಸು (ಶಲ್ಯನಂ ಅಂದು ಅಶಲ್ಯನಂ ಬಗೆವವೊಲ್ ಏಳಿದಂಬಗೆದು ದಂತಿಯಂ ಆಗಡೆ ತೋಱಕೊಟ್ಟು ತೊಟ್ಟಗೆ ರಥಮಂ ಪಡಲ್ವಡಿಸಿ ಪೂೞ್ದಂ ಅರಾತಿಯಂ ಅಸ್ತ್ರಕೋಟಿಯಿಂ: ಪಂಪಭಾ ಪರಿಷತ್ತು, ೧೦. ೧೧೧); ಮನಸ್ಸು (ತುಂಗ ಭವದ್ಬೋಧದ ಬೆಳಗಿಂಗೆ ಒಳಗಪ್ಪನಿತು ಎನ್ನ ಬಗೆ ಪುಗದು: ಆದಿಪು, ೮. ೧೦); ಚಿಂತಿಸು, ಧ್ಯಾನಿಸು (ಮುಳಿಸಿನ ದಳ್ಳುರಿಗನುಗುೞುತ್ತುಂ ಚಕ್ರರತ್ನಮಂ ಬಗೆದು ಬೆಸಸಿದಂ ಭರತೇಶಂ: ಆದಿಪು, ೧೪. ೧೧೫); ಚಿಂತನೆ (ಮಸಿಯಿಂದಂ ಜಗಮೆಲ್ಲಮಂ ದಿತಿಸುತಂ ಮುಂ ಪೂೞ್ದನೋ ಕಾಲಮೇಘಸಮೂಹಂ ದೆಸೆಯೆಲ್ಲಮಂ ಕವಿದುದೋ: ಪಂಪಭಾ, ೪. ೪೯); ಇಷ್ಟ (ಉಸಿರ್ದೊಡೆ ಬಗೆ ತೀರ್ಗುಂ ಬಿಸಿದುಂ ಬೆಟ್ಟಿತ್ತುಂ ಉಸಿರದೇಂ ತೀರ್ದಪುದೇ: ಪಂಪಭಾ, ೪. ೬೫); ಲೆಕ್ಕಿಸು (ದಿವ್ಯವಚನಮಂ ಅದಂ ಅಂತೇನುಂ ಬಗೆಯದೆ ಕುಡಿದು ಅಜ್ಞಾನತೆಯಿಂ ನಂಜುಗುಡಿದರಂತಿರೆ ಕೆಡೆದಂ: ಪಂಪಭಾ, ೮. ೪೦); ಪರಿಗಣಿಸು (ಶಲ್ಯನಂ ಅಂದು ಅಖಲ್ಯನಂ ಬಗೆವವೊಲ್ ಏಳಿದಂ ಬಗೆದು ದಂತಿಯಂ ಆಗಡೆ ತೋಱಕೊಟ್ಟು: ಪಂಪಭಾ, ೧೦. ೧೧೧); ಮನೋರಥ (ಅಂತು ತನ್ನ ಪಗೆಯುಂ ಬಗೆಯುಂ ಒಡನೊಡನೆ ಮುಡಿಯೆ: ಪಂಪಭಾ, ೧೨. ೧೫೫ ವ); ಯೋಚನೆ ಮಾಡು (ಪಗೆಗೆ ಕಣಿಯುಂಟೇ ನಣ್ಪಿಂಗಂ ಆಗರಮುಂಟೆ ನೀಂ ಬಗೆಯ: ಪಂಪಭಾ, ೧೩. ೧೦); ಆಲೋಚನೆ (ಇದಂ ಪಿರಿದು ಮಾಡಿ ಪೇೞುನೆಂಬ ಬಗೆ ಮನದೊಳ್ ಮಿಗೆ ಮಾಣದಾಕ್ಷಣದೊಳಲ್ಲಿಂ ತಳರ್ದು: ಪಂಚತಂತ್ರ, ೯೬, ವ)

ಬಗೆ ಕದಡು

ಚಿತ್ತಕ್ಷೆಭೆಗೊಳ್ಳು (ಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರಂ: ಯಶೋಧಚ, ೨. ೭೦)

ಬಗೆಕಾಱ

(ರಂಜಿಪಾ ಬಗೆಯ ರಸಾಂಧಿಯಪ್ಪ ಬಗೆಕಾಱರ ಮೊತ್ತದಿನೊಪ್ಪಿತು ಓಲಗಂ: ಕುಸುಮಾಕಾ, ೩. ೧೬)

ಬಗೆಗಲ್

[ಬಗೆ+ಕಲ್] ಮನಸ್ಸನ್ನು ತಿಳಿ (ಈ ಕಿಱಯವಳ್ ನಮಗೊಂದುಮಂ ಇಂತುಟೆನ್ನಳ್ ಇನ್ನುಂ ಬಗೆಗಲ್ವಂ ಅನ್ನೆವರೆಗಂ ಉಮ್ಮಳಿಸುತ್ತಿರದಿರ್: ಆದಿಪು, ೩. ೨೬)

ಬಗೆಗುಂ

ಆಲೋಚಿಸುತ್ತದೆ (ಕನ್ನೆತನಂಗೆಯ್ಯಲ್ ಬಗೆಗುಂ ನಾಣ್ ಮಿಗೆ ಮನಮುಂ ಇೞುವರಿಯಲ್ ಬಗೆಗುಂ ಕನ್ನಡಿಕುಂ ತನ್ನಳಿಪಂ ತನ್ನಲೆ ತಾನಿಂತು ಕನ್ನೆ ತಳವೆಳಗಾದಳ್: ಪಂಪಭಾ, ೪. ೫೫)

ಬಗೆಗೆ ಬರ್

ಮನಸ್ಸಿಗೆ ತೋಚು, ಇಷ್ಟವಾಗು (ಅಂತು ಕೊಟ್ಟ ಅಯ್ದು ಮಂತ್ರಂಗಳಂ ಆಹ್ವಾನಂಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳಂ ಪಡೆವೆ ಎಂದು ಬೆಸಸಿದೊಡೆ: ಪಂಪಭಾ, ೧. ೮೯ ವ)

ಬಗೆಗೆ ವರ್

ಇಷ್ಟವಾಗು (ಎಂದು ಬಗೆಗೆ ವಂದ ಪೂಗಳೊಳ್ ಪೂದುಡುಗೆಯಂ ಮಾಡಿ ವಸಂತಕಾಂತೆಯರಂತೆ ನೆಱೆಯೆ ಕಯ್ಗೆಯ್ದಾಗಳ್: ಆದಿಪು, ೧೧. ೧೨೮ ವ)

ಬಗೆಗೆಡು

ವಿವೇಕ ಕಳೆದುಕೊ (ಬದ್ಧರೋಷಿಯುಂ ಯುದ್ಧಾಭಿಲಾಷಿಯುಂ ಅಕಾರಣದದ್ವೇಷಿಯುಂ ಅಪ್ಪ ಪಗೆವನ ಮನೆಯಂ ಬಗೆಗೆಟ್ಟು ಪೊಕ್ಕಂದು: ಪಂಚತಂತ್ರ, ೨೮೦ ವ)

ಬಗೆಗೊಳಿಸು

ಮನಸ್ಸನ್ನು ಗೆಲ್ಲು, ಆಕರ್ಷಿಸು (ಸಮುಜ್ಜ್ವಳಕನಕವರ್ಣೆ ಮಿಗೆ ಬಗೆಗೊಳಿಸಿದಳ್ ಉದ್ಯಾನಕೇಳಿಲೀಲಾಕ್ಷಣದೊಳ್: ಶಾಂತಿಪು, ೮. ೧೮)

ಬಗೆಗೊಳ್

ಲಕ್ಷ್ಯಕ್ಕೆ ತಂದುಕೊ (ಅರ್ಕಕೀರ್ತಿಗಂ ಜ್ಯೋತಿರ್ಮಾಲೆಗಂ ಅಮಿತತೇಜಂ ಎಂಬೊಂ ಮಗನಾದೊಂ ಖೇಚರೇಂದ್ರ ಬಗೆಗೊಳ್ವುದು ಇದಂ: ಶಾಂತಿಪು, ೫. ೬೮); ಮನಮೆಚ್ಚಿಸು (ವಿಪುಳಕಂಟಕನಂ ಇನಿಸಂ ಕೊಂಡಿರದೆ ಕೊಂದು ಗೆಲ್ಲಂಗೊಂಡಂ ಬಗೆಗೊಳ್ವರೆಱದೆ ವಿಜಯಾಂಗನೆಯಂ: ಶಾಂತಿಪು, ೫. ೫೫); ಆಕರ್ಷಿಸು [ಕಳಕಂಠಗೀತಂ ಬಗೆಗೊಳೆಯುಂ ವೀಣಾಕ್ವಣಂ ಮನಂಗೊಳೆಯುಂ: ಆದಿಪು, ೧೧. ೨೮)

ಬಗೆದ ಬಗೆ

ಕಲ್ಪನೆಯ ರೀತಿ (ಆಕೆಯ ಬಗೆದ ಬಗೆಯೊಳೊಡಂಬಡುವಂತೆ ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮಂ ಆದಿತ್ಯನ ತೇಜದಗುಂತಿಯುಮಂ .. .. ಸಂಕ್ರಮಿಸಿ ನಿಜನಿವಾಸಕ್ಕೆ ಪೋದಂ: ಪಂಪಭಾ, ೧. ೧೩೯ ವ); ಅಂದುಕೊಂಡ ರೀತಿ (ಬಗೆಯದೆ ಮೆಯ್ಸೊಕಮಂ ಬಗೆ ಪಗೆವರ ಕಡುವೆರ್ಚಂ ಎನ್ನ ಪೂಣ್ಕೆಯಂ ಎರ್ದೆಯೊಳ್ ಬಗೆ ಮುನಿಯ ಮಂತ್ರಪದಮಂ ಬಗೆ ಕೂಡುಗೆ ನಿನ್ನ ಬಗೆದ ಬಗೆಯೊಳ್ ಪಾರ್ಥಾ: ಪಂಪಭಾ, ೭. ೬೭)

ಬಗೆದರ್

[ಬಗೆ+ತರ್] ನಿಶ್ಚಯ ಮಾಡು (ಕೂಡಿದ ಕೂಟದಿಂದ ಒಲಿಸಿದ ಇರ್ವರುಮಂ ಸಮಪಾತವಾರಿಯಿಂ ಕೋಡೆ ಸರಾಗದೊಳ್ ಮುೞುಗಿ ಮೂಡೆ ಮೃಗಾಂಕಕರಂ ಪಯೋರಸಂ ತೀಡುವ ತಂಬೆಲರ್ ಮನದೊಳ್ ಉರ್ಕೆಗಳಂ ಸುರತಾವಸಾನದೊಳ್ ಮಾಡೆ ರತಕ್ಕೆ ಮತ್ತೆ ಬಗೆದಂದುದು ದಂಪತಿ ಸೌಧಕೂಟದೊಳ್: ಶಾಂತಿಪು, ೮. ೧೦೦)

ಬಗೆದೀರ್

[ಬಗೆ+ತೀರ್] ತೃಪ್ತಿಹೊಂದು (ದಿವ್ಯ ಮುನಿಪುಂಗವರಂಬಗೆದೀರ್ಪಿನಂ .. .. ಪತಿವ್ರತಾಗುಣದಿಂ ಮೆಚ್ಚಿಸು ನೀಂ: ಪಂಪಭಾ, ೧. ೧೧೮)

ಬಗೆದೆಡೆ

ಇಷ್ಟಬಂದ ಜಾಗ (ಬಗೆಯೆಡೆಯನೆಯ್ದಿ ಬಗೆದ ಬಗೆಯಂ ಬಗೆದಂತೆ ತೀರ್ಚಿ ಪೋಪ ಜೋಡೆಯರಂ ಕಂಡು: ಪಂಪಭಾ, ೪. ೮೧ ವ)

ಬಗೆದೋಱು

ಇಂಗಿತವನ್ನು ತೋರಿಸಿಕೊ (ಅಂಗನೆ ನೀಂ ಗರ್ವಿಸಿದಪ್ಪೆಯೆಂದು ಬಗೆದೋಱಂ ನಲ್ಲನೇನೊಲ್ಲನೇ: ಅನಂತಪು, ೮. ೪೧)

ಬಗೆಪೋಗು

ಮನದಟ್ಟಾಗು (ಬಗೆ ಪೋಯ್ತೀಗಳೆ ಎಲೇ ಇದ್ತೆ ತುಹಿನಕ್ಷೆಣೀಧ್ರದುತ್ತುಂಗಸಾನುಗಳೊಳ್ ಭೋರೆನೆ ಬಂದು ಪಾಯ್ವುದದೆ ನೋಡಾಕಾಶಗಂಗಾಜಲಂ: ಕಾವ್ಯಾವಲೋ, ೪೮)

ಬಗೆಬರ್

ಮನಸ್ಸುಂಟಾಗು (ನಾವಾಡುವಮೆ ಬನ್ನಿಂ ಎಂಬುದುಂ ಆಡುವ ಬಗೆ ಬಂದು ನೆತ್ತಮಂ ಧರ್ಮಸುತಂ: ಪಂಪಭಾ, ೬. ೭೦); ಮನಸ್ಸು ಬರು, ಮನಸ್ಸುಂಟಾಗು (ನೆಲನಂ ಒಪ್ಪಿಸಿ ತಪ್ಪದೆ ಬಾೞ್ವೆಂ ಎನ್ನದೆ ಈ ಉರ್ಕಿನೊಳೆಂತು ನಿಂದು ಸೆಣಸಲ್ ಬಗೆ ಬಂದುದು: ಪಂಪಭಾ, ೯. ೫೦)

ಬಗೆಯಂ ತರ್

ನಿಶ್ಚಯಿಸು (ಕ್ಷಿತಿಪತಿ ಬೇಱರಿಸಿ ಮಾನ್ಯರಂ ಮನ್ನಿಸೆ ತದ್ವ್ರತಹೀನರುಂ ಅಂದು ಅಖಿಳಬ್ರತಮಂ ಕೈಕೊಳ್ವ ಬಗೆಗೆ ಬಗೆಯಂ ತಂದರ್: ಆದಿಪು, ೧೫. ೧೩)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App