ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಂಜೆ ಮಾಡು

ಹಾಳುಮಾಡು (ವಿಜಯಲಕ್ಷ್ಮಿವೊಲೀತನ ತೋಳ ತೞನೊಳ್ ಪೊಸಯಿಸು ನಲ್ಮೆಯಂ ದಿವಸಲಕ್ಷ್ಮಿಯನೇಕೆಯೋ ಬಂಜೆಮಾಡುವೈ: ಪಂಪರಾ, ೯. ೧೬೭)

ಬಂಜೆತನ

ಗೊಡ್ಡುತನ (ಎನಗೀ ಜನ್ಮವಿಂದಿಂತೆ ಬಂಜೆತನದಿಂದಂ ಪೋಕುಮೋ: ಸುಕುಮಾಚ, ೯. ೧೦೯)

ಬಂಜೆವೊೞ್ತು

ವ್ಯರ್ಥವಾದ ಸಮಯ (ಮಧ್ಯಾಹ್ನದ ಪೊೞ್ತಲ್ಲದ ಪೊೞ್ತು ಬಂಜೆವೊೞ್ತು ತಾನದು ಪೊೞ್ತೇ: ನೇಮಿನಾಪು, ೧. ೭೯)

ಬಜ್ಜರ

[ವಜ್ರ] ನವರತ್ನಗಳಲ್ಲಿ ಒಂದು (ನಿಡಿದಾದ ಬಾಹುಬಳಂ ಉನ್ಮದಸಿಂಧುರಕಂಧರಕ್ಕೆ ಬಜ್ಜರದ ಅಮಳ್ಗಂಬಮಾದ ತೊಡೆ .. .. ನೃಪೇಂದ್ರನಾ: ಅನಂತಪು, ೨. ೨)

ಬಜ್ಜರವಸರ

ವಜ್ರದ ಅಂಗಡಿ (ದೆಸೆಗಳ್ ನಿಜಾಂಶುವಿಂ ರಂಜಿಸುತಿರೆ ಪುಂಜಿಸಿದ ಪೊನ್ನ ಪುಂಜಿಕೆಯಿಂದಂ ಕೊಸಗಿನ ಮರದುಱುಗಲರಲ್ದೆಸೆವಂತೆಸೆದಿರ್ಪುದಲ್ಲಿ ಬಜ್ಜರವಸರಂ: ಜಗನ್ನಾವಿ, ೯. ೧೦೭)

ಬಜ್ಜರಿಗೞ್ತೆ

ಹೇಸರಗತ್ತೆ (ಕರಿಯ ಪಿರಿಯ ಮೆಯ್ಯ ನಿಡಿಯ ಕಿವಿಯ ಕುಣಿದು ಮೆಟ್ಟುವ ಬಜ್ಜರಿಗೞ್ತೆಗಳುಮಂ: ಆದಿಪು, ೪. ೫೪ ವ) [ಎಲ್. ಬಸವರಾಜು ಅವರ ಆವೃತ್ತಿ]

ಬಜ್ಜರಿಗೆ

ಹೇಸರಗತ್ತೆ (ಅವಯವದೆ ಕುಣಿದು ಮೆಟ್ಟಿವ ಸವಡಿಯ ವಜ್ಜರಿಗೆ ಪಿಡಿದ ಸತ್ತಿಗೆಯ ವಿಳಾಸವದು ಅಮರ್ದ ಲೀಲೆಯಿಂ: ಆದಿಪು, ೧೧. ೪೧) [ನರಸಿಂಹಶಾಸ್ತ್ರಿಗಳು ಬಿಜ್ಜಣಿಗೆ ಎಂಬ ಪಾಠವನ್ನೂ ವೆಂಕಟಾಚಲಸ್ತ್ರಿಗಳು ವಜ್ಜರಿಗೆ ಎಂಬ ಪಾಠವನ್ನೂ ಸ್ವೀಕರಿಸುತ್ತಾರೆ]

ಬಜ್ಜೆಗುಂಟಣಿ

ಧೂರ್ತೆಯಾದ ಕುಂಟಲಗಿತ್ತಿ (ಬಜ್ಜೆಗುಂಟಣಿ ಸಜ್ಜೆವನೆಯ ಬಾಗಿಲಂ ಪತ್ತಿ ಮಱೆಗೇಳುತ್ತಿರ್ದೊಳಗಂ ಪೊಕ್ಕು, ಚಂದ್ರಪ್ರಪು, ೮. ೫೯ ವ)

ಬಂಟು

ಮೈಗಾವಲ ಪಡೆ (ತುರಗಮುಮೊಂದು ಸತ್ತಿಗೆಯುಮೊಂದಿರೆ ಕಾಪಿನ ಬಂಟು ಸುತ್ತಲುಂ ಬರೆ: ಆದಿಪು, ೧೧. ೪೬) ಶೌರ್ಯ (ಕುಂದಿನಿಂದೆಚ್ಚನದು ಬಂಟಂದುಮಲ್ಲದೆ ನಿಂದುದು ಎಂದು ನಿಂದು: ಆಚವರ್ಧ, ೭. ೫೩)

ಬಂಟುತನ

ಶೌರ್ಯ (ಸೊಕ್ಕುವುದೆ ಬಂಟುತನ .. .. ತರಳತೆಯೆ ನೋಡುತ್ಸಾಹಮೆಂಬರ್ ಧೂರ್ತರ್: ಕಾದಂಬ, ೩. ೯೮)

ಬಟ್ಟಗಟ್ಟು

ದಾರಿಗೆ ಅಡ್ಡಕಟ್ಟು, ದರೋಡೆಮಾಡು (ಅಡವಿಯೊಳ್ ಕಳ್ಳರ್ ಬಟ್ಟೆಗಟ್ಟಿ ಮೇಲ್ವಾಯ್ದಿಱದೊಡೆ: ವಡ್ಡಾರಾ, ಪು. ೭೬, ಸಾ. ೧೩)

ಬಟ್ಟನೆ

ದುಂಡಗೆ (ಪುಟ್ಟುವ ಗಾಳಿಯ ಬೞಯನೆ ಬಟ್ಟನೆ ಸುೞಗೊಳೆ ಮರುದ್ವಿಮಾನಪ್ರಕರಂ: ಜಗನ್ನಾವಿ, ೧. ೪೫)

ಬಟ್ಟನೆ ಬರ್

ಸುತ್ತುವರಿ (ಷೋಡಶ ಋತ್ವಿಜರ್ಗೆ ಇತ್ತುದಕ್ಕೆ ಬಾಯ್ವಿಟ್ಟಿರೆ ವಿಪ್ರಕೋಟಿ ಮಡಗಲ್ಕೆಡೆಯಿಲ್ಲದೆ ಪೊನ್ನ ರಾಶಿಯಂ ಬಟ್ಟನೆ ಬಂದು ಕಾಯೆ ಏಂ ತೊದಳಿಲ್ಲದಿತ್ತನೋ: ಪಂಪಭಾ, ೬. ೩೯); ಸುತ್ತುತ್ತ ಬರು (ಪೆಣ್ಕಾಗೆ ಮೇಣಂತಂಬರದೊಳ್ ಬಟ್ಟನೆ ಬರ್ಪೊಡತ್ಯಧಿಕಲಾರ್ಭಂ: ಲೋಕೋಪಕಾ, ೧೨. ೨೦)

ಬಟ್ಟನೇಱಲ್

ಗುಂಡು ನೇರಿಳೆ ಹಣ್ಣು (ಆ ಬಟ್ಟೆಯೊಳ್ ಬೆದಕಿ ಬಟ್ಟನೇಱಲ ಚೆಂಗಾರೆಯ ಮೆಲ್ದುಗುೞ್ದ ಸಹಕಾರೋಚ್ಚಿಷ್ಟಪಕ್ವಂಗಳಂ: ಸುಕುಮಾಚ, ೪. ೫೭)

ಬಟ್ಟಲ್

ದುಂಡಾದ ಪಾತ್ರೆ (ಪಿರಿದೊಂದು ಕಾಜಿನ ಬಟ್ಟಲೊಳ್ ಕಮ್ಮಿತಪ್ಪ ನೀರಂ ತೀವಿ ಚಂದ್ರಬಿಂಬಂ ನೀರೊಳ್ ಕಾಣ್ಬಂತಿರೆ ಮಾಡಿ: ವಡ್ಡಾರಾ, ಪು. ೧೮೬, ಸಾ. ೧೬)

ಬಟ್ಟಸರಿ

ಸುತ್ತಾಡು (ತಿಟ್ಟನೆ ತಿರಿದು ಬಟ್ಟಸರಿವಂದೊಡೆ ಮೆಯ್ಯ ಬಣ್ಣಮುಂ ಪುಣ್ಯಮುಂ ಅರಿಸಿನದ ಪಿಂಜೆಯಂತೆ ಪಾಱ ಪೋಕುಂ: ನೇಮಿನಾಪು, ೫. ೪ ವ)

ಬಟ್ಟಾಡು

[ಗೋಲಿ, ಚೆಂಡು ಮೊದಲಾದ] ದುಂಡಾದ ವಸ್ತುಗಳೊಡನೆ ಆಟವಾಡು (ವಟ್ಟಂದೆತ್ತುದು ಬೆಳ್ಳಿಯ ಬೆಟ್ಟಂ ಬಿಣ್ಪಿಂಗೆ ಎನಿಪ್ಪ ಕೋಟಿಕಶಿಲೆಯಂ ಬಟ್ಟಾಡಿದ ಬಾಹಾಬಲಂ ಇಟ್ಟಳವು ಎಂಟನೆಯ ಕೇಶವಂಗಿದಿರುಂಟೇ: ಪಂಪರಾ, ೧೨. ೬೮)

ಬಟ್ಟಿಗೆ

ಬಣ್ಣ ಬಳಿಯುವ ಕುಂಚ (ಪಳಿಕಿನ ಪಲಗೆಯುಮಂ ಬಣ್ಣವಣ್ಣಿಗೆಯ ಬಟ್ಟಿಗೆಗಳುಂ ತಾನೆ ತಂದು ಕೊಟ್ಟು: ಲೀಲಾವತಿ, ೭. ೮೮ ವ)

ಬಟ್ಟಿಗೆವಲಗೆ

[ಮೃತ್ತಿಕಾಫಲಕ] ಚಿತ್ರ ಬರೆಯುವ [ಮಣ್ಣಿನ] ಹಲಗೆ (ಬರೆಯಲೆಂದು ಬಟ್ಟಿಗೆವಲಗೆಯಂ ತರಿಸಿ ತಿಟ್ಟಮಿಟ್ಟು ಬರೆವನ್ನೆಗಂ: ಆದಿಪು, ೪. ೬೩ ವ)

ಬಟ್ಟಿತು

ದುಂಡಾದ (ಪೊಱೆಯಲ್ಲದೆ ಬಟ್ಟಿತಪ್ಪ ಬಾಯ್ದೆಱೆ: ಪಂಪಭಾ, ೧. ೧೦೮)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App