ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಟ್ಟಿದು

ದುಂಡಾದ (ಮುನ್ನಂ ಬಟ್ಟಿದುವೆನಿಸುವ ಮೊಲೆ ನಿರ್ವೆಟ್ಟಿದುವಾದುವು ನೃಪಂಗೆ ಬೆನ್ ಸೋಂಕಲೊಡಂ: ಯಶೋಧಚ, ೨. ೫೮)

ಬಟ್ಟಿನಂಬು

ದುಂಡಾದ ಅಲಗುಳ್ಳ ಬಾಣ (ಅಂತು ತನ್ನ ಬಲಮೆಲ್ಲಮಂ ಜವನಂತೆ ಒಕ್ಕಲಿಕ್ಕಿ ಕೊಲ್ವ ಕಳಶಕೇತನನಂ ಯಜ್ಞಸೇನಂ ಏನುಂ ಮಾಣದೆ ಆತನ ಮೇಲೆ ಬಟ್ಟಿನಂಬಿನ ಬೆಳ್ಸರಿಯುಮಂ ಕೆಲ್ಲಂಬಿನ ತಂದಲುಮಂ ಪಾರೆಯಂಬಿನ ಸೋನೆಯುಮಂ ಸುರಿಯೆ: ಪಂಪಭಾ, ೧೨. ೨೧ ವ)

ಬಟ್ಟು

[ವೃತ್ತ] ಬಚ್ಚದಾಟ (ಒಡನಾಡಿಯುಂ ಒಡನೋದಿಯುಂ ಒಡವೆಳೆದುಂ ಗುಳ್ಳೆಗೊಟ್ಟಿ ಬಟ್ಟು ಉಳಿಸೆಂಡು ಪೊಡೆಸೆಂಡಿಂಬಿವನಾಡುತ್ತ ಒಡವಳೆದರ್ ತಮ್ಮೊಳಳೆಳಸೆ ತತಂಗೆಡೆಗಳ್: ಪಂಪಭಾ, ೨. ೩೦); ದುಂಡಾದ ಬಿಲ್ಲೆ (ಭ್ರಮರಸಂಕುಳಂ ಬನದೊಳೞಯಿಂದಾಡುತಿರ್ಪ ಮನ್ಮಥನ ಪೊನ್ನ ಬಟ್ಟುಗಳ ಪೋಲ್ವೆಯಂ ಪುಟ್ಟಿಕುಂ: ಸುಕುಮಾಚ, ೯. ೫೦); ಬಿಲ್ಲೆಯಾಟ (ಒಡನಾಡಿಯುಂ ಒಡನೋದಿಯುಂ ಒಡವಳೆದುಂ ಗುಳ್ಳೆಗೊಟ್ಟಿ ಬಟ್ಟು ಉಳಿಸೆಂಡುಂ ಪೊಡೆಸೆಂಡು ಇವಂ ಆಡುತ್ತ ಒಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್: ಪಂಪಭಾ, ೨. ೩೦); ತೂಕದ ಬಿಲ್ಲೆ (ಪೆರ್ಮೊಲೆ ಕಾಯ್ದ ಕರ್ಬೊನದ ಬಟ್ಟುವೊಲಾಯ್ತು: ಲೀಲಾವತಿ, ೧೪. ೧೦೬)

ಬಟ್ಟುಗೆಯ್

ಉಂಡೆಮಾಡು (ಸಿಡಿಲಂ ನೆಟ್ಟನೆ ಬಟ್ಟುಗೆಯ್ದ ತೆಱನಪ್ಪಾ ದಿಟ್ಟಿಯುಂ: ಶಾಂತೀಶ್ವಪು, ೩. ೫)

ಬಟ್ಟೆ

[ವರ್ತ್ಯ] ದಾರಿ (ಆ ಬಟ್ಟೆಯೊಳ್ ಇನಿತಡಗುಂ ಕೆಯ್ಸಾರದೆಂದು ಆತುರಿಸುತ್ತುಂ .. .. ನಿಂದನೊರ್ವಂ ಪುಳಿಂದಂ: ಕಾದಂಸಂ, ೧. ೪೯)

ಬಟ್ಟೆಗ

ದಾರಿಹೋಕ (ನಲವಿಂ ಬೆಳಗೆಯ್ಗೆಱಗುವ ಪಕ್ಕಿಗಳನಲೆದು ಸೋವ ನಾಡ ಗಾಡಿಕಾರ್ತಿಯರ ಗಾಡಿಕಾರ್ತಿಯರ ಗಾಡಿಗೆ ಸೋಲ್ತು ನಿಲ್ವ ಬಟ್ಟೆಗರ: ಕಬ್ಬಿಗಕಾ, ೧೭ ವ)

ಬಟ್ಟೆಗಳಂ ಸೋದಿಸು

ದಾರಿ ಹುಡುಕು, ಉಪಾಯಮಾಡು (ನಾಮಿದನಱಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಂ ಎಂದು ನಿಚ್ಚಂ ಬೇಂಟೆವೋಗೆ: ಪಂಪಭಾ, ೩. ೪ ವ)

ಬಟ್ಟೆಗಳ್ವ ಕಳ್ಳ

ದಾರಿಹೋಕರನ್ನು ಸುಲಿಯುವ ಕಳ್ಳ (ಆವೆಡೆ ದುರ್ಗಮಮಂ ಅಲ್ಲಿಯೆ ಭಾವಭವಂ ಬಟ್ಟೆಗಳ್ವ ಕಳ್ಳನ ತೆಱದಿಂದ: ಪಾರ್ಶ್ವನಾಪು, ೩. ೯೯)

ಬಟ್ಟೆಗಾಣ್

ದಾರಿಕಾಣು, ಉಪಾಯ ಹೊಳೆ (ನಭಂಬರಂ ಪೊದಳ್ದೊದವಿದ ಕೋಮಟೆಯಂ ನುಗುಳ್ದು ಪೋಗಲಃಪತಿಗೆ ಬೇಱೆ ಬಟ್ಟೆಗಾಣದೆ ತಡೆದಿರ್ಪಂ: ಪುಷ್ಪದಂಪು, ೨. ೬೪)

ಬಟ್ಟೆಗೆಡು

ದಾರಿ ತಪ್ಪು (ಒಂದಟವಿ ಪ್ರದೇಶದೊಳ್ ಬಟ್ಟೆಗೆಟ್ಟು ಎಮಗಿಲ್ಲಿ ದಾರಿತೋರ್ಪರಾರ್ ಎಂದು ಪೆಱದುಪಾಯಮಿಲ್ಲ ಎಂದು: ಚಾವುಂಪು, ಪು. ೪೫೦. ಸಾ. ೨೪)

ಬಟ್ಟೆದೋಱು

ತೋರಿಸು (ಗುಣಾರ್ಣವಭೂಭುಜಂಗೆ ಬಟ್ಟೆದೋಱುವವೊಲಂದು ಒಗೆದಂ ಕಮಲೈಕಬಾಂಧವಂ: ಪಂಪಭಾ, ೪. ೧೧೧)

ಬಟ್ಟೆಬರು

ದಾರಿಯಲ್ಲಿ ನಡೆತರು (ನೀನೊರ್ವ ಬ್ರಾಹ್ಮಣನೊಡನೆ ಬಟ್ಟೆಬರುತಂ ದೇವತಾಜಾತಿ ಪಾಷಂಡಮೋಹ ಪ್ರತಿವಿಧಾಯಿಗಳಪ್ಪ ಕಥೆಗಳಂ ಪೇೞೆ: ಚಾವುಂಪು, ಪು. ೪೪೭. ಸಾ. ೩೦)

ಬಟ್ಟೆಯ ಕಣ್

ದಾರಿಯ ಮುಂಭಾಗ (ಪೊೞಲೊಳ್ ಬಟ್ಟೆಯ ಕಣ್ಣೊಳ್ ರಾತ್ರಿ ಪ್ರತಿಮೆ ನಿಂದೊರ್: ವಡ್ಡಾರಾ, ಪು ೧೫೨, ಸಾ ೧೨)

ಬಟ್ಟೆಯರ್

ದಾರಿಹೋಕರು (ವಿವಿಧ ದೇವಗೃಹದಾಟಪಾಟದಿಂ ಮಱುಗಿ ಬಟ್ಟೆಯರ ನೋೞ್ಪ ನೋಟದಿಂ: ಪಂಪಭಾ, ೩. ೨೨)

ಬಟ್ಟೆವರ್

ದಾರಿಯಲ್ಲಿ ನಡೆ (ಭಟಾರಾ ನಿನ್ನೆ ಬಟ್ಟೆವಂದುಪವಾಸಂಗೆಯ್ದು ಸೇದೆವಟ್ಟಿರ್: ವಡ್ಡಾರಾ, ಪು. ೯೦, ಸಾ. ೨೫); ಪ್ರಯಾಣಿಸು (ಭಟಾರಾ ನಿನ್ನೆ ಬಟ್ಟೆವಂದು ಉಪವಾಸಂಗೆಯ್ದು ಸೇದೆವಟ್ಟಿರ್: ವಡ್ಡಾರಾ, ಪು. ೯೦, ಸಾ. ೨೫)

ಬಟ್ಟೆವೋಗು

ದಾರಿಯನ್ನು ಅನುಸರಿಸು (ನಿಮ್ಮ ಮುದುಗಣ್ತನದೊಳಿದೇಂ ಉಂತೆ ಬಟ್ಟೆವೋಪೊಡೆ ಪೋಗಿಂ: ಆದಿಪು, ೯. ೧೦೭)

ಬಟ್ಟೆವೋಪ

ದಾರಿಹೋಕ, ಪ್ರಯಾಣಿಕ (ಇರದೂರೂರ ಪೊಲಂಗಳೊಳ್ ಸುೞವರಂ ಸೀೞಕ್ಕುತುಂ ಬಟ್ಟೆವೋಪರಂ ಎಬ್ಬಟ್ಟಿ ಕೊಲುತ್ತುಂ ಆಂತ ಭಟರಂ ತುತ್ತೆತ್ತುತಂತಿರ್ದ ಸಿಂಧುರವಿದ್ವಿಡ್ಭಯದಿಂದ ಸಿಂಧುವಿಷಯಂ ಪಾೞಾಗೆಯುಂ: ಶಾಂತೀಶ್ವಪು, ೩. ೭)

ಬಂಡ

ಸರಕು (ಪಲಂಬರ್ ಪರದರ್ ಸತ್ತರ್ ಉೞದರೆಲ್ಲರುಂ ಕೆಟ್ಟೋಡೆ ಬಂಡಮುಂ ಎೞ್ತುಗಳುಂ ಮೊದಲಾಗೆಲಮ್ಲಂ ಕಳ್ಳರ್ ಕಳ್ಳರ್ ಕೊಂಡು ಪೋದರ್ರ್‍ಅ; ವಡ್ಡಾರಾ, ಪು ೭೬, ಸಾ ೧೪)

ಬಡಕ

ಬಡಕಲು ವ್ಯಕ್ತಿ (ಕಪ್ರತ್ಯಯಕ್ಕೆ: ಬಡಕಂ ನಿಡುಕಂ ಕಿಡುಕಂ ಒಣಕಂ: ಶಬ್ದಮದ, ೨೧೬ ಪ್ರ)

ಬಡಗಣ

ಉತ್ತರದಿಕ್ಕಿನ (ಜಂಬೂದ್ವೀಪದ ಮೇರುವಿನ ಮೂಡಣ ವಿದೇಹದ ಸೀತಾನದಿಯ ಬಡಗಣ ತಡಿಯೊಳ್: ಆದಿಪು, ೩. ೮ ವ)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App