ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಡಗಣ್

ಉತ್ತರದಿಕ್ಕು (ಮೇರು ಪಡುವಣ್ಗೆ ಸೀತಾಶೀರಂ ತೆಂಕಣ್ಗೆ ನೀಲಗಿರಿ ಬಡಗಣ್ಗೆ ಆ ತಾರಂ ದ್ರಾವಣರಣವಕ್ಷಾರಂ ಮೂಡಣ್ಗೆ ತನಗೆ ಸೀಮೆಯೆನಿಕ್ಕುಂ: ಮಲ್ಲಿನಾಪು, ೨. ೯)

ಬಡಗಮೊಗ

ಉತ್ತರಾಭಿಮುಖ (ಬಡಗಮೊಗದಿರ್ದು ಕರ್ಮದ ತೊಡರಂ ಪಱೆವಂತೆ ಕೇಶಪಾಶಮನಂತಾಗಡೆ ಪಱಸು: ಆದಿಪು, ೬. ೨೪)

ಬಡಗಲ್

ಉತ್ತರದಿಕ್ಕು (ಕಂಜಾಂಬಕೆ ಕೇಳ್‌ಬಡಗಲ್ ರಂಜಿಪುದು ವಿಲಾಸಮೆಂಬ ನಗರಂ: ಉದ್ಭಟಕಾ, ೧೧. ೩೦)

ಬಡಗಿ

[ವರ್ಧಕಿ] ಮರಗೆಲಸದವನು (ನೃಪತಿ ತನ್ನ ಬಡಗಿಗಳ್ ವಿಶ್ವಕರ್ಮನುಂ ವಿಶ್ವಮತಿಯೆಂಬೊರಂ ಕರೆಯಿಸಿ: ವಡ್ಡಾರಾ, ಪು. ೧೪೭, ಸಾ. ೪)

ಬಡಗು

ಉತ್ತರದಿಕ್ಕು (ಅೞ್ದುದಿಲ್ಲೆಳೆ ತೇಂಕಿರ್ದುದು ಭಾರದಿಂ ಬಡಗೆನಲ್ ಪೆಂಪಾರ್ಗಗಸ್ತ್ಯಂಬರಂ: ಪಂಪಭಾ, ೪. ೨೦)

ಬಂಡಣ

ಯುದ್ಧ (ಇದಿರ್ಚಿ ಪೊಣರ್ಚುವ ವರೂಥಿಗಳ ತಂಡದ ಗಂಡುಗೊಂಡ ಬಂಡಣಮಂ ಕಂಡು: ರಾಜಶೇವಿ, ೬. ೬೯ ವ)

ಬಡತನ

ಕೃಶತೆ (ಎಂದು ಮನದ ಮಱುಕಮುಮಂ ಎರ್ದೆಯ ಕುದಿಪಮುಮಂ ಬಗೆಯ ಕುಱಪಮುಮಂ ಮೆಯ್ಯ ಬಡತನಮುಮಂ ಅಱಯೆ ತೋಱ ನುಡಿದೊಡೆ: ಪಂಪಭಾ, ೪. ೬೮ ವ); ದಾರಿದ್ರ್ಯ

ಬಡದೇಸಿಗ

ಅನಾಥ (ಬಡದೇಸಿಗಂ .. .. ತೊನ್ನನಾದೊಡವಂ ಪಟ್ಟೆಡೆಯೊಳ್ .. .. ಆರ್ಹತಮಾಗೆ ರಕ್ಷಿಪರ್ ಸಲೆ ಜೈನರ್: ಸಮಯಪ, ೪. ೮೫)

ಬಡನಡು

ತೆಳುವಾದ ಸೊಂಟ (ನೆಲೆಮೊಲೆಯ ಬಿಣ್ಪಿಂಗೆ ಬಡನಡು ಬಳ್ಕೆ: ಗಿರಿಜಾಕ, ೨. ೧೦೫ ವ)

ಬಡಪ

ಜಡಿಮಳೆ (ತಂದಲ್ಸೋನೆ ನಟ್ಟ ಬಡಪಮೆನಲ್ಸುರಿದುವು ಬಿಡದೆ: ಜಗನ್ನಾವಿ, ೪. ೩೨)

ಬಡಪಡು

ಬಡವಾಗು (ಸುಪರ್ವಪರ್ವತದ ಕಾಂಚನರೇಣುಗಳಂ ಪರಾಕ್ರಮೋದ್ಯೋಗದಿಂ ಎತ್ತಿ ತಂದು ನಿನಗಿತ್ತ ಅದಟಂ ಬಡಪಟ್ಟು ಬೆಟ್ಟದೊಳ್ ಪೋಗಿ ತೊೞಲ್ದು: ಪಂಪಭಾ, ೭. ೪೭)

ಬಡಪಾರ್ವ

ಬಡ ಹಾರುವ (ಸಿರಿಮೆಯ್ಯೊಳಗೆ ಅಂದು ಅಱವಿರೆ ನೆರವಿಯೊಳಾಱವರ್ ಒರ್ಮೆ ಕಂಡರಂ ಅಱಯಲ್ಕರಿದೆಮ್ಮಂ ಬಡಪಾರ್ವರನರಸರೆ ನೀಮೀಗಳ್ ಅಱವಿರಱಯಿರೋ ಪೇೞಂ: ಪಂಪಭಾ, ೨. ೬೩)

ಬಡಬ

ಬಡಬಾಗ್ನಿ (ಬಡಬನ ಅಳುರ್ಕೆಯೊ ಭೈರವನ ಅಡರ್ಪೊ ಮಿಳ್ತುವಿನ ದರ್ಪಮೋ .. .. ಮಾರ್ಪೊಡೆಯೊ: ರಾಜಶೇವಿ, ೬. ೮೨)

ಬಡಬಡಾಗು

ತುಂಬ ಸೊರಗಿಹೋಗು (ತಳಿದಶನಾದಿ ತಪದಿಂ ಕಳೇವರಂ ಬಡಬಡಾಗಿ ಗಿಡಿಗಿಡಿಜಂತ್ರಂ ಮಿಳಿಮಿಳಿಗಣ್ಗಳೆನಲ್ ನೋಂತಳ್: ಸುಕುಮಾಚ, ೯. ೮)

ಬಡಬಾಗ್ನಿ

ಬಡಬಶಿಖಿ (ಜಿನಭಾವನೆಯೆಂಬ ಬಡಬಾಗ್ನಿಯಿಂ ವಿಷಯಸಾಗರಮಂ ಪೀರದೆ .. .. ಶಾಶ್ವತಸುಖಂ ದೊರೆಕೊಳ್ಳದು: ಧರ್ಮಾಮೃ, ೭. ೫೫ ವ)

ಬಡಬೆ

ಕುದುರೆ (ತುರಂಗಮೆನೆ ಕುದಿರೆ ಬಡಬೆ ವಾಮಿಯೆನಿಕ್ಕುಂ:: ಅಭಿಧಾವ, ೧. ೧೪. ೨೨)

ಬಡವಡು

ಬಡವಾಗು, ಕೃಶವಾಗು (ನೋಂತ ಬಡವಟ್ಟೊಡಲಂ ಸಲ್ಲೇಖನದಿಂದಿೞಪಿದೊಡಲ್ಲದದೇಂ ದೇವನಾಗಲೆನಗಂ ನಿನಗಂ: ಅನಂತಪು, ೬. ೬)

ಬಡವಾ

ಬಡಬಾಗ್ನಿ (ಬಡವಾಮುಖದನ್ನಮಪ್ಪ ಬಾಣಾವಳಿಯಿಂ ಮಹೋದದೀಯ ಜೀವನಮಂ ತವುವನ್ನಮೀಂಟಿದಂ: ೧೩. ೯೯)

ಬಡವಾಗ್ನಿ

ಬಡಬಾಗ್ನಿ, ಸಮುದ್ರದಲ್ಲಿನ ಅಗ್ನಿ (ಪ್ರಳಯದುರಿಯಂ ಉರುಳಿಮಾಡಿದಂತಾನುಂ ಬಡವಾಗ್ನಿಯಂ ಅನುವಿಸಿದಂತಾನುಂ: ಪಂಪಭಾ, ೧೦. ೮೦ ವ)

ಬಡವಾನಳ

ಬಾಡಬಾಗ್ನಿ (ಸಾಗರಮೆ ಬಡವಾನಳಭೀತಿಯಿಂ ಭೂಭೃತ್ಪತಿಯಂ ಶರಣ್ಬೊಕ್ಕುದೆಂಬಂತೆ ಕಣ್ಗಿಂಬಾಗಿ: ಪಾರ್ಶ್ವನಾಪು, ೭. ೩೩ ವ)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App