ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬೋೞೆ

ಒಂದು ಬಗೆಯ ಬಾಣ (ಒಂದರ್ಥಕ್ಕೆ: ಬೋೞೆಯೆಂದು ಒಂದಂಬಿನ ಭೇದಂ: ಶಬ್ದಮದ, ೩೩ ವೃತ್ತಿ ೧೧೧)

ಬೋೞೆಯ

ದೇವತೆ (ಇಂದ್ರಂ ಈತನೆ ಮತ್ತಮಿವರ್ ದಿಕ್ಪಾಳರೆ ಬೋೞೆಯರ್ ಈಕೆಯರ್ ಚಂದ್ರವಕ್ತ್ರೆಯರ್ ಅಗ್ಗದ ದೇವಸ್ತ್ರೀಯರೆ: ಲೀಲಾವತಿ, ೪. ೧೩೬)

ಬೋೞ್

ಬಿಲ್ಲು (ಒಂದಥ್ಕ್ಕೆ ಬೋೞೆಂದು ಚಾಪಂ: ಶಬ್ದಮದ, ೩೩ ವೃತ್ತಿ ೧೧೦)

ಬೌವಳಿಸು

ಕಲಕಲರವವುಂಟುಮಾಡು (ಗಂಡುಗೋಗಿಲೆಗಳೆ ಮಹಾಪ್ರಾತಿಹಾರ್ಯರಾಗೆಯುಂ ಬೌವಳಿಸಿ ಗೞಪುವ ಗಿಳಿವಿಂಡಿನೋಳಿಗಳೆ ಸಬ್ಬವರಾಗೆಯುಂ: ವರ್ಧಮಾಪು, ೫. ೪೧ ವ)

ಬ್ಯಸನಿ

[ವ್ಯಸನಿ] ದುಶ್ಚಟದವನು (ರೌದ್ರಧ್ಯಾನಿ ಮಹಾಬ್ಯಸನಿಯಂತೆ .. .. ದರ್ಮಧ್ಯಾನಿಗಳಾಗಲ್ಕೆ ಬಗೆವರ್: ಸಮಯಪ, ೧೪. ೪೫)

ಬ್ಯಾದಿ

[ವ್ಯಾಧಿ] ರೋಗ (ಸೊಡರಂ ನೋಡಿದಾಗಳ್ ಕಣ್ಣೀರ್ಗಲ್ ಸುರಿವುದುಂ ಕಂಡೀಗಳ್ ಈತಂಗೆ ಬ್ಯಾದಿಗಳೆಂದು ಬಗೆದಿರ್ಪಿನಂ: ವಡ್ಡಾರಾ, ಪು. ೨೬, ಸಾ. ೧೭)

ಬ್ಯಾಸ

ವ್ಯಾಸ (ಪರಾಶರಮುನೀಶ್ವರಂ ಕೊಡಗೂಸಂ ಕಿಡಿಸೆ ಗಡಂ ಬ್ಯಾಸಂ .. .. ಜಾಲಗಾಱತಿಗೊಗೆದಂ: ಸಮಯಪ, ೧೦. ೧೫೩)

ಬ್ರಜ

ವ್ರಜ, ಗುಂಪು (ಧರಾಳೀವಕ್ತ್ರಮಂ ವೀಕ್ಷಿಪಾತುರದಿಂ ವೇಷ್ಟಿತ ಕಂದ ಕಾಂಡಪಟಮಂ ನೂಕಿರ್ದಳೋ ವ್ಯೋಮಸೌಂದರಿ ಎಂಬಂತೆ ಪಳಚ್ಚನಾಯ್ತು ಗಗನಂ ಮೇಘಬ್ರಜಂ ಪೋಗೆಯುಂ: ಶಾಂತೀಶ್ವಪು, ೧೨. ೬೨)

ಬ್ರತ

[ವ್ರತ] ನೋಂಪಿ (ಧಾರಿಣೀಮಹಾದೇವಿ .. .. ಗುರುಭಕ್ತಿಗೆಯ್ದು ಬಂದಿಸಿ ಶ್ರಾವಕಬ್ರತಂಗಳಂ ಏಱಸಿಕೊಂಡು ಬೞಕಿಂತೆಂದಳ್: ವಡ್ಡಾರಾ, ಪು, ೮೦, ಸಾ. ೧೮)

ಬ್ರತಿ

ವ್ರತಿ (ಒಕ್ಕಲಿಗಂ ಬ್ರತಿಯಾದಂದಕ್ಕುಂ ಕರ್ಚಲ್ಕೆ ಮದಮನುೞುಗೆ ಕುಲಜ್ಞಂ: ಸಮಯಪ, ೫. ೧೪೧)

ಬ್ರಹ್ಮ

ಮೋಕ್ಷ (ಮೋಕ್ಷಂ ಮುಕ್ತಿಪದಂ ಬ್ರಹ್ಮಂ ಕೈವಲ್ಯಪದವಿ ಶಿವಗತಿ ನಿರಾಮಯಂ ನಿರ್ವಾಣಂ: ಅಭಿಧಾವ, ೧. ೩. ೧೯); [ಜೈನ] ಹದಿನಾರು ಕಲ್ಪಗಳಲ್ಲಿ ಒಂದು (ಸೌಧರ್ಮ ಈಶಾನ ಸನತ್ಕುಮಾರ ಮಾಹೇಂದ್ರ ಬ್ರಹ್ಮ ಬ್ರಹ್ಮೋತ್ತರ ಲಾಂತವ ಕಾಪಿಷ್ಠ ಶುಕ್ರ ಮಹಾಶುಕ್ರ ಶತಾರ ಸಹಸ್ರಾರ ಆನತ ಪ್ರಾಣತ ಅರಣ್ಯ ಅಚ್ಯುತಮೆಂಬ ಪದಿನಾಱುಂ ಕಲ್ಪಂಗಳೊಳಂ: ವಡ್ಡಾರಾ, ಪು ೯೭, ಸಾ ೨೬)

ಬ್ರಹ್ಮಕಲ್ಪ

[ಜೈನ] ಹದಿನಾರುಕಲ್ಪಗಳಲ್ಲಿ ಒಂದು, ಬ್ರಹ್ಮ ಎಂಬ ಹೆಸರಿನ ಕಲ್ಪ (ತ್ರಿಭುವನಗುರು ಪರಿನಿಷ್ಕ್ರಮಣಕಲ್ಯಾಣ ಶಾರದಾಗಮ ಪ್ರತೀಕ್ಷಣದಿವ್ಯಹಂಸರುಂ ಬ್ರಹ್ಮಕಲ್ಪಾಂತ ನಿವಾಸಿಗಳುಮಪ್ಪ: ಆದಿಪು, ೯. ೬೦ ವ)

ಬ್ರಹ್ಮಘ್ನ

ಬ್ರಾಹ್ಮಣ ಹಂತಕ (ಗೋಘ್ನನ ಪಾಪಮುಮಂ ಬ್ರಹ್ಮಘ್ನನ ಪಾಪಮುಮಂ ಎಮಗೆ ಪೊಂಗುಡಿಂ ಈಗಳೆ ನಿಘ್ನಂ ಮಾಡುವೆಂ: ಸಮಯಪ, ೧೧. ೭೯)

ಬ್ರಹ್ಮಚರ್ಯ

ಇಂದ್ರಿಯನಿಗ್ರಹ (ತಪಂ ಛಲಂ ಅಕಿಂಚನ್ಯಂ ನಯಂ ಬ್ರಹ್ಮಚರ್ಯಮೆ ಮನೋನ್ನತಿ: ಸುಕುಮಾಚ, ೧. ೨೬)

ಬ್ರಹ್ಮಪುತ್ರ

ಬ್ರಹ್ಮನ ಮಗ, ನಾರದ (ತಳರ್ದನಘಲತಾದಾತ್ರನಾ ಬ್ರಹ್ಮಪುತ್ರಂ: ಜಗನ್ನಾವಿ, ೨. ೪೪)

ಬ್ರಹ್ಮಯೋಗ

ಬ್ರಾಹ್ಮೀ ಮುಹೂರ್ತ (ಬರೆ ಚೈತ್ರಂ ಕೃಷ್ಣಪಕ್ಷಂ ದೊರೆಕೊಳೆ ನವಮೀವಾಸರಂ ಪೊರ್ದೆ ಲೋಕೋತ್ತರಮಾಗಿರ್ದ ಉತ್ತರಾಷಾಢದೊಳ್ ಅತಿಶುಭದಂ ಬ್ರಹ್ಮಯೋಗಂ ಮನಂಗೊಂಡಿರೆ: ಆದಿಪು, ೭. ೩೬)

ಬ್ರಹ್ಮಸಭೆ

ಬ್ರಾಹ್ಮಣರ ಗುಂಪು (ಆಗಳ್ ಪಾಂಡವರ್ ತಮ್ಮಂ ಪೆಱರಱಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ: ಪಂಪಭಾ, ೩. ೫೨ ವ)

ಬ್ರಹ್ಮಸೂತ್ರ

ಜನಿವಾರ (ವಿಚಿತ್ರತಿಳಕವಿಳಸಿತಲಲಾಟನುಂ ತಾರಾತರಳ ಮುಕ್ತಾಫಳಕಲಿತ ಜಾನುಲಂಬಿತ ಬ್ರಹ್ಮಸೂತ್ರನುಂ: ಆದಿಪು, ೧೧. ೧೦ ವ); ಹಾರ (ಪೊಳೆಯುತ್ತುಂ ಬ್ರಹ್ಮಸೂತ್ರಮೇನೊಪ್ಪಿದುದೋ: ಕಾದಂಸಂ, ೩. ೨೮)

ಬ್ರಹ್ಮಸ್ವ

ಬ್ರಾಹ್ಮಣನ ಸ್ವತ್ತು (ಆ ದುರಾತ್ಮಂ ಮಹಾತ್ಮನ ಧನಮಂ ಕೊಂಡು ಬ್ರಹ್ಮಸ್ವಹರಣಮಂ ಸುವರ್ಣಹರಣಮಂ ಗೆಯ್ದು: ಪಂಚತಂತ್ರ, ೧೨೬ ವ)

ಬ್ರಹ್ಮಸ್ವಹರಣ

ಬ್ರಾಹ್ಮಣನ ಆಸ್ತಿಯನ್ನು ಲಪಟಾಯಿಸುವುದು (ಆ ದುರಾತ್ಮನಾ ಮಹಾತ್ಮನ ಧನಮಂ ಕೊಂಡು ಬ್ರಹ್ಮಸ್ವಹರಣಮಂ ಸುವರ್ಣಹರಣಂಗೆಯ್ದಾ ಪಾತಕಂ ನರಕಗೆತಿಗೆಯ್ದುವ ಧೂರ್ತತನದಿಂ ಕುಟಿಲಮಾರ್ಗ ಅಂತರ್ಗತನಾಗಿ ಪೋಗೆ: ಪಂಚತಂತ್ರ, ೧೨೬ ವ)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App