ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬ್ರಹ್ಮಾಂಡ

ವಿಶ್ವ (ವಿವಿಧ ಬ್ರಹ್ಮಾಂಡಂ ಮಾಧವ ನಿನ್ನವಕಾಶಂ: ಜಗನ್ನಾವಿ, ೩. ೧೦೭)

ಬ್ರಹ್ಮಾಯು

ದೀರ್ಘಾಯು (ಬ್ರಹ್ಮಂ ಬ್ರಹ್ಮಾಯುವಕ್ಕೆ ಎಂದು ಪರಸಿದಂ: ಪಂಪಭಾ, ೫. ೧೦೩ ವ)

ಬ್ರಹ್ಮಾಸ್ತ್ರ

ಬ್ರಹ್ಮನು ಅಧಿದೇವತೆಯಾಗಿರುವ ಮಂತ್ರಾಸ್ತ್ರ (ಪಾರ್ವನೆಂದೆನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಮವಸಾನಕಾಲದೊಳ್ ಬೆಸಕೆಯ್ಯದಿರ್ಕೆ: ಪಂಪಭಾ, ೧. ೧೦೫ ವ)

ಬ್ರಹ್ಮೇಂದ್ರತೆ

[ಜೈನ] ಬ್ರಹ್ಮಕಲ್ಪದ ಒಡೆತನ (ಪಡೆದಂ ಬ್ರಹ್ಮೇಂದ್ರತೆಯಂ ಗಡಂ ಆತಂ ಬಗೆದು ನೋಡೆ ನಾರಕನೆತ್ತಲ್ ಗಡ ದೇವನೆತ್ತ: ಆದಿಪು, ೫. ೯೭)

ಬ್ರಹ್ಮೋತ್ತರ

[ಜೈನ] ಹದಿನಾರು ಕಲ್ಪಗಳಲ್ಲಿ ಒಂದು (ಸೌಧರ್ಮ ಈಶಾನ ಸನತ್ಕುಮಾರ ಮಾಹೇಂದ್ರ ಬ್ರಹ್ಮ ಬ್ರಹ್ಮೋತ್ತರ ಲಾಂತವ ಕಾಪಿಷ್ಠ ಶುಕ್ರ ಮಹಾಶುಕ್ರ ಶತಾರ ಸಹಸ್ರಾರ ಆನತ ಪ್ರಾಣತ ಅರಣ್ಯ ಅಚ್ಯುತಮೆಂಬ ಪದಿನಾಱುಂ ಕಲ್ಪಂಗಳೊಳಂ: ವಡ್ಡಾರಾ, ಪು ೯೭, ಸಾ ೨೬)

ಬ್ರಾತ

ವ್ರಾತ, ಸಮೂಹ (ವಿರಚಿತೋದ್ದಾಮ ಸುರಪತಿಧನುಬ್ರಾತಮಂ ಸುರುಚಿರಾಂಶೂಲ್ಲಸತ್ ರತ್ನಸಂಘಾತಮಂ: ಆದಿಪು, ೭. ೨೭ ರಗಳೆ)

ಬ್ರಾಹಣಸಮಿತಿ

ಬ್ರಾಹ್ಮಣರ ಗುಂಪು (ಗಣನಾತೀತ ಆಜ್ಯಾಹುತಿಗಣದಿಂದಂ ತಣಿಯೆ ಜಾತವೇದನುಂ ಆ ಬ್ರಾಹ್ಮಣಸಮಿತಿ ಬೇಳೆ ದೇವರ್ ತಣಿಯುಂಡರ್ ನೆರೆದು ದಿವ್ಯ ಹವ್ಯಾಮೃತಮಂ: ಪಂಪಭಾ, ೬. ೩೭)

ಬ್ರಾಹ್ಮ

[ಜೈನ] ಒಂದು ಮುಹೂರ್ತ (ಬೆಳಗಪ್ಪ ಜಾವದ ಬ್ರಾಹ್ಮಮೆಂಬ ಮುಹೂರ್ತದೊಲ್: ಶಾಂತಿಪು, ೯. ೨೧೫ ವ)

ಬ್ರಾಹ್ಮಿ

ಸರಸ್ವತಿ (ಶ್ರುತದೇವಿ ವಾಣಿ ವಾಗ್ಭಾರತಿ ವಚನಂ ವಾಚಿ ಗೀರ್ ಬ್ರಾಹ್ಮಿ ಸರಸ್ವತಿ ವರದೆಯಾಗಿ ಪದಪದ್ಧತಿಯನೊಡಂಬಡೆ ನಿಮಿರ್ಚಿ ತಿರ್ದುಗೆ ದಯೆಯಿಂ: ಅಭಿಧಾವ, ೧. ೧. ೭)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App