ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಂದ ಕೋಡು

[?ವರ್] ಮೂಡಿದ ಕೊಂಬೆ (ಮಾವಿನ ಬಂದ ಕೋಡೆ ಕೋಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ: ಪಂಪಭಾ, ೨. ೧೫)

ಬಂದ ದೂವೆ

ಚಿಗುರಿದ ಎಳೆ ಹುಲ್ಲು (ಚಂದ್ರನನಂಭೋನಿಧಿ ಬಂದ ದೂವೆ ಮಲೆಯಂ ಕಾರ್ಗಾಲಮಂ ಸೋಗೆ ನೆನೆವಂತಾಂ ನೆನೆವೆಂ ಸರೋಜಮುಖಿಯಂ: ಆದಿಪು, ೧೨. ೩೧)

ಬಂದ ಬಟ್ಟೆಯಿನೆ ಬಿಜಯಂಗೆಯ್

ಬಂದ ದಾರಿ ಹಿಡಿದು ಹೊರಟುಹೋಗು (ಕೆಮ್ಮಗೆ ನಿಮ್ಮಡಿ ಬೞಲಿಸಲ್ವೇಡ ಬಂದ ಬಟ್ಟೆಯಿನೆ ಬಿಜಯಂಗೆಯ್ಯಿಂ: ಪಂಪಭಾ, ೯. ೪೮ ವ)

ಬಂದ ಮಾವು

ಹಣ್ಣುಬಿಟ್ಟ ಮಾವಿನ ಮರ (ಬಂದ ಮಾವು ಬೀಯದು ಕುಸುಮಾಸ್ತ್ರನಾಜ್ಞೆ ತವದು ಎಲ್ಲಿಯುಮಿಲ್ಲಿಯ ನಂದನಂಗಳೊಳ್: ಪಂಪಭಾ, ೪. ೨೧)

ಬದಂಗ

ಕೀಳಾಳು (ಮೊಕ್ಕಳಂಬಡುವ ಬದಂಗನಂ ಬೆಸನಿಯಲ್ಲದಳ್ ಆತನನೊಟ್ಟಿ ಸುಟ್ಟಪಳ್: ಲೀಲಾವತಿ, ೨. ೭೬)

ಬದಗ

ಜಾರ (ಪುಸಿನುಡಿವಾತನ ಖಳನ ಕೆಲೆಯನ ಬದಗನ ಬೂತಿನ ಮಾತು ದಿಟವಲ್ತು: ಲೀಲಾವತಿ, ೨. ೩೪); ಸೇವಕ (ಕರುಮಾಡದ ಪಕ್ಕದೊಳಿರ್ದ ಪಟ್ಟದಾನೆಯ ಬದಗಂ ಬಿನದಕೆ ಪಾಡುತ್ತಿರೆ: ಯಶೋಧಚ, ೨. ೨೭ ಮತ್ತು ೨೮)

ಬದಗು

ಹಾದರ (ಎತ್ತಿದ ಬರ್ದೊ ಮೇಣ್ ಬದಗೊ ಪೇೞಂ ಇದೀಕೆಯ ಕೂರ್ಪೊ: ಲೀಲಾವತಿ, ೨. ೭೮); ಕುಟಲತೆ (ಬದಸೆಂ[ಬದಗೆಂ]ದು ಕೌಟಿಲ್ಯಂ: ಶಬ್ದಮದ, ಪ್ರಸಾ ೧೬೬)

ಬದಗುಗೆಯ್

ಊಳಿಗತನವನ್ನು ಮಾಡು [ಪೆಱರ ಕೀೞಲೊಳ್ ಎಮ್ಮಬ್ಬೆಯುಂ ಮುತ್ತಬ್ಬೆಯುಂ ಸಾರ್ದು ಬದಗುಗೆಯ್ದುಣೆ: ಆದಿಪು, ೩. ೩೪ ವ)

ಬದಗುಳಿಗ

ಸೇವಕ, ಗುಲಾಮ (ಬದಗುಳಿಗನ ತೋಳ್ಮುಟ್ಟಿದ ಸುದತಿಯೊಳ್ ಇಂಬಾಗದಂತೆ ಕೆಟ್ಟುದು ಪುಳಿ ಮುಟ್ಟಿದ ದುಗ್ಧದಂತೆ: ಯಶೋಧಚ, ೨. ೫೯)

ಬದಣೆ

ಬದನೆ (ಹಾಗಲ ಹಡಲಂ ಗುಳ್ಳಂ ಕೂಗುರಿ ಕೂಷ್ಮಾಂಡ ಅವರೆ ಬದಣೆಗಳಿಂ ಲೇಸಾಗಿರೆ: ಧರ್ಮಪ, ೨. ೫೮)

ಬಂದಂಬಿಡು

ಆಸೆಯನ್ನು ಬಿಡು (ಮನಸಂ ಸೈತಿಟ್ಟು ಬಾೞ್ವಾಸೆಯಿಂ ಬಂದಂಬಿಟ್ಟು ವಿಮೋಹಮಂ ಬಿಸಿಟು ಕಣ್ಣಂ ಮುಚ್ಚಿ: ಧರ್ಮಾಮೃ, ೪. ೫೧)

ಬದರ

ಬೋರೆ ಅಥವಾ ಎಲಚಿ ಮರ, ಹಣ್ಣು (ಅಹಿತ ಬಹು ಬದರದಳವ್ಯೂಹ ತಿರೋಹಿತ .. .. ಪಾಯ್ದುದೊಂದು ವಿಹಂಗಂ: ನೇಮಿನಾಪು, ೫. ೭೦)

ಬದರಿ

ಬದರ (ತೆಂಗು ತಾೞ್ ಬದರಿ ದಾಡಿಮಂ ಅಮ್ಮಡೆ ಮಾತುಳಂಗಂ ಇಮ್ಮಾವು: ಆಚವರ್ಧ, ೨. ೩)

ಬದರೀಫಲ

ಬೋರೆ ಹಣ್ಣು (ಮೌಕ್ತಿಕನಿಕರಂ ಸುರಿದಿರೆ ಮುಗ್ಧ ವನೇಚರಿ ಬದರೀಫಲವೆನುತ್ತ ಆಯುತ್ತಿರ್ದಳ್: ತ್ರಿಷಷ್ಟಿಪು, ೨೭. ೭೮)

ಬದರೀಫಳ

ಬೋರೇ ಹಣ್ಣು (ದಿನತ್ರಯದೊಳ್ ಬದರೀಫಳಮಾತ್ರ ಆಹಾರಿಗಳುಂ ಆರೋಗ್ಯಶರೀರಂಗಳುಂ ಸೌಂದರಾಕಾರಂಗಳುಂ ತ್ರಿಪಲ್ಯೋಪಮಜೀವಿಗಳುಂ ಆಗಿ: ಆದಿಪು, ೫. ೪೧ ವ)

ಬದಸು

ಕುಟಿಲತೆ (ಬದಸೆಂ[ಬದಗೆಂ]ದು ಕೌಟಿಲ್ಯಂ: ಶಬ್ದಮದ, ಪ್ರಸಾ ೧೬೬)

ಬಂದಿ

ಸೆರೆ (ಎನಗಿಂದಿಂಗಾಱು ತಿಂಗಳ್ ಸಮನಿಸಿದಪುದಿಲ್ಲೆಲ್ಲಿಯುಂ ಬಂದಿ ಮಂಚಲ್; ಸುಕುಮಾಚ, ೭. ೧೮); ಸೆರೆಯಾಳು (ಭೂನಾಯಕಂ ಬಿಡಿಸೆ ಬಿಟ್ಟ ಬಹು ಬಂದಿಯಿಂ ಕರಮೆ .. .. ಕಣ್ಗೆಸೆದುದು ನರೇಂದ್ರಭವನಾಂಗಣಂ: ಅಜಿತಪು, ೪. ೭)

ಬಂದಿಕಾಱ

ಸೆರೆ ಹಿಡಿಯುವವನು (ದುರ್ಯೋಧನಂ ಬಂದಿಕಾಱನಂತೆ ಸೆಱೆಗೆಯ್ದುಂ ವ್ರಣವೈದ್ಯನಂತೆ ಕೊಡಸಾರಿಯಂ ಪಿಡಿದುಂ ಸೂಳೆಯಂತೆ ಕೞವು ಉೞವನಱದುಂ ರಸವಾದಿಯಂತೆ ಕಟ್ಟಿಯುಂ ಪೆರ್ಜೋಡೆಯಂತೆ ನುಣ್ಣಿತಂ ವೇೞ್ದು: ಪಂಪಭಾ, ೬. ೭೨ ವ)

ಬಂದಿಗೆ

ಕತ್ತಿಯ ಹಿಡಿಕೆ (ಕಾವಿಲ್ಲದೆ ಕೊಡೆವಿಡಿವೆನೆಂಬಂತೆ ಬಂದಿಗೆಯಿಲ್ಲದೆ ಸುರಗಿವಿಡಿಯದೆ ಅರಸುಗೆಯ್ವೆನೆಂಬಂತೆ: ಧರ್ಮಾಮೃ, ೪. ೨೯ ವ)

ಬಂದಿವಿಡಿ

ಸೆರೆಹಿಡಿದು ಸುಲಿಗೆ ಮಾಡುವುದು (ಕಳವನೆ ಮರ್ಚಿ ಪೆರ್ಚೆ ಬೆಸನಂ ಪೆಱರರ್ಥಮನೀಳ್ದುಕೊಳ್ವ .. .. ಸಂಚಳಿಸದೆ ಪೊಕ್ಕು ಬಂದಿವಿಡಿದವಾಯಿಲಮೊಡ್ಡುವ ನಿನ್ನ ಗೊಡ್ಡಮಂ: ವರ್ಧಮಾಪು, ೫. ೩೧)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App