ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567898081Next >

ಬಂಕ

ಮೂಲೆ (ಅದರ ಬಂಕದೊಳ್ ಒಪ್ಪುಗುಂ ಉಜ್ವಳಾಂಗನನ್ವಿತ ಬಹುಸಂಖ್ಯರುದ್ರಗಣ ಸೇವಿತಂ ಅಗ್ಗದ ನೀಲರೋಹಿತಂ: ಶಬರಶಂ, ೧. ೬೭)

ಬಕ

ಬಕಪಕ್ಷಿ (ಬಕ ಕಲಹಂಸ ಬಲಾಕ ಪ್ರಕರ ಮೃದುಕ್ವಣಿತರಮ್ಯಮಿದಿರೊಳ್ ತೋಱೆತ್ತು ಕೊಳಂ ಪರಿವಿಕಸಿತ ಕನಕ ಕಂಜಕಿಂಜಲ್ಕಪುಂಜಪಿಂಜರಿತಜಳಂ: ಪಂಪಭಾ, ೮. ೩೮); ಒಬ್ಬ ರಾಕ್ಷಸ (ಅಯ್ವರೊಳಂ ನಾಮ್ಮಾಣದೆ ಬಕನ ಬಾರಿಗೊರ್ವನನೀವೆಂ: ಪಂಪಭಾ, ೩. ೨೬)

ಬಕವೇಷ

ಬಕಪಕ್ಷಿಯ ರೂಪ (ಬಕಂ ಬಕವೇಷದಿಂ ಪೆಱಗಣ ದೆಸೆಗೆ ಮೆಲ್ಲನೋಸರಿಸಿ ಬಂದು: ಪಂಪಭಾ, ೩. ೨೯ ವ)

ಬಕವೇಷಿ

ಬಕನ ವೇಷ ಧರಿಸಿದವನು, ಕಪಟಿ (ಅಱದು ಶರಣಾಗತಜಳನಿಧಿಯಂ ಎಯ್ದೆವಂಂ ಈ ಬಕವೇಷಿ ನಿನ್ನನೇನಂ ಬೇಡಿದಂ ನೀನೀತಂಗೇನಿತ್ತೆ: ಪಂಪಭಾ, ೫. ೭೧ ವ)

ಬಕವೇಸಿತನ

ಮೋಸದ ಹಾದರ (ಇಂತು ಬಕವೇಸಿತನದಿಂ ಮಾಯಾನಿಸ್ಪೃಹನಾಗಿ: ಧರ್ಮಾಮೃ, ೬. ೩೭ ವ)

ಬಕಾರಿ

ಬಕನನ್ನು ಕೊಂದವನು, ಭೀಮ (ವನಜಾತಪ್ರಿಯಬಂಧುಗೆ ಅಂಗಪತಿಯಂ ಧರ್ಮಂಗೆ ನಿನ್ನಂ ಹುತಾಶನಮಿತ್ರಂಗೆ ಬಕಾರಿಯಂ ಕುಲಿಶಿಗಂ ಗಾಂಡೀವಿಯಂ ಪೆತ್ತೆಂ: ಗದಾಯು, ೧೦. ೨೧)

ಬಂಕು

ಬಾಗು, ವಕ್ರವಾಗು (ಬಂಕು ಕೌಟಿಲ್ಯೇ: ಶಬ್ದಮದ, ಧಾ ೬೦)

ಬಕುಳ

ನಾಗಕೇಸರ ಎಂಬ ಮರ (ಬಕುಳದ ಪೂವಿನಕ್ಷವಳಯಕ್ಕೆ ದುಕೂಲದ ಚೆಲ್ವನಪ್ಪ ಸುಳಿಗೆಗೆ .. .. ಮಿಕ್ಕಗುರುವ ಬೂದಿಗೊಡ್ಡೆ ತನುವಂ: ಶಾಂತಿಪು, ೮. ೯೦)

ಬಕೋಟ

ಬಕಪಕ್ಷಿ (ಒಂದು ಬಕೋಟಂ ಆಟಂದು ಮೀಂಗಳಂ ಮುೞುಂಗಿಸೆ ಮುಳಿದ ಅರಸಂ ಇಂತೆಂದಂ: ಲೀಲಾವತಿ, ೧೪. ೮೧ ವ)

ಬಕೋಟ ಕುಟುಂಬ

ಬಕಗಳ ಸಮೂಹ (ಆವೆಗಳ್ ಎಳೆಮೀನ್ ಪೊಳೆದೊಡಂ ಒಳಪೋಗದಿರ್ಪುವು ಜಳಾಶಯಪ್ರಾಂತದೊಳ್ ಬಕೋಟಕುಟುಂಬಂ: ಲೀಲಾವತಿ, ೯. ೧೪)

ಬಕ್ಕಣ

[ಭಕ್ಷಣ] ತಿನಿಸು (ತಲೆಗಳ ಬಟ್ಟಲಿಂ ಮೊಗೆದು ನೆತ್ತರನಾಗಳೆ ಈಂಟಿಯೀಂಟಿ ಮೆಯ್ಗಲಿಗಳ ಕಂಡದಿಂಡೆಗಳ ಬಕ್ಕಣಮಂ ತವೆ ಮೆಲ್ದು ಮೆಲ್ದು: ಕಬ್ಬಿಗಕಾ, ೨೨೩)

ಬಕ್ಕಬಯಲು

ಬಟಾ ಬಯಲು (ಆ ಸಮಯದೊಳ್ ಅಗ್ನಿಶಿಖಾಮುಖಕ್ಕೆ ದೂರಮಪ್ಪ ಬಕ್ಕಬಯಲ ತಾಣದೊಳ್ ದೊಮ್ಮಳಿಸಿ ನಿಂದು ಬಹುಜನಂಗಳ್ ಉಮ್ಮಳಿಸಿ ತಮ್ಮೊಳಿಂತೆಂದರ್: ಪಂಪರಾ, ೧೧. ೧೫೫ ವ)

ಬಕ್ಕಂಬಯಲ್

ಪೂರ್ತಿ ತೆರಪಾದ ಬಯಲು (ಹಿಮಸಮಯದೊಳಧಿಪಂ ತಾ ಹಿಮದಿಂದೆಲುವಡೆಯೆ ಬಗೆಯ ಬಕ್ಕಂಬಯಲೊಳ್ ಹಿಮನಿಧಿಯೆಮನಿಧಿ ಸಲೆ ಧೈರ್ಯಮಹಾಂಬುಧಿ ಬಳ್ಳೆವಾಸದೊಳಿರ್ದಂ: ಅಜಿತಪು, ೧೨. ೩)

ಬಕ್ಕಳೆ

ಕಂಠದ ಹಾರ (ಮೆಯ್ಯ ಮಸಿ ಕೊರಲ ಬಕ್ಕಳೆ ಪೊಯ್ಯೆ ಪುಗಿಲ್ಗರೆವ ಕೆಯ್ಯ ಕಂಕರಿಕೆ ಕರಂ ರಯ್ಯಮೆನೆ ಪಾಡುರ್ತಿಳ್: ಕಾವ್ಯಾವಲೋ, ೩೦೯)

ಬಕ್ಕುಡಿ

ತಲ್ಲಣ (ಚುಂಬನಂ ಅಪ್ಪು ಚಪ್ಪರಣೆ ಬೇಡುವ ಬಕ್ಕುಡಿ ಕಾಯ್ಪು ಕೂಡುವ ಅಟ್ಟುಂಬರಿ ಎಂಬಿವಾಗೆ: ನೇಮಿನಾಪು, ೫. ೭೧)

ಬಕ್ಕುಡಿಗೆಯ್

ವಾದಿಸು ವಟುಗಳೋದುಗಳನಾಲಿಸಿ ತಪ್ಪಂ ಪಿಡಿವುವು ಉಪನ್ಯಾಸದೆ ಬಕ್ಕುಡಿಗೆಯ್ವವು ಮುನಿಗಳೊಡನೆ ಶುಕಶಾರಿಕೆಗಳ್: ಜಗನ್ನಾವಿ, ೧೬. ೫೧)

ಬಕ್ಕೆ

ಒಂದು ವಿಧದ ಹಲಸಿನ ಹಣ್ಣು (ಗೊಲೆಯೊಳ್ಪಣ್ತುದು ಮೈಂದವಾೞೆ ಪಥಿಕರ್ಬರ್ಕೆಂದು ಭೃಂಗಂಗಳಿಂದುಲಿವಂತಿರ್ದುದು ಪಣ್ತ ಬಕ್ಕೆ ತನಿವಣ್ಣಾಗಿರ್ದುದು: ಆದಿಪು, ೧೧. ೬೮)

ಬಕ್ಕೆವಲಸು

ಬಕ್ಕೆ (ಅನ್ಯಕುಜಮಂ ಅಳಿರವದೆ ನಗುವವೊಲ್ ಪಣ್ತ ಬಕ್ಕೆವಲಸುಗಳೆಸೆಗುಂ: ಲೀಲಾವತಿ, ೬. ೧೨೦)

ಬಗಟು

ತೊಡೆಗಳನ್ನು ಅಗಲಿಸು, ಭಾಗ ಮಾಡು (ಬಗಟು ಊರುವಿಶ್ಲೇಷೇ: ಶಬ್ದಮದ, ಧಾ, ೨೫೩)

ಬಗರಗೆ

ತೋಡಿದ ಗುಂಡಿ, ಚಿಲುಮೆ (ಪಥಿಕರ್ ಅಱಲ್ಗೊಂಡು ತೋಡಿದ ಅಱುಂಬುನೀರ ಬಗರಗೆಗಳುಮಂ: ಕಾದಂಬ, ೦. ವ); ಬೋಕಿ ಬಿಂಚು (ಉಡುವ ಪುಲಿದೊವಲೊ ಕೈಯೊಳ್ ಪಿಡಿದಾ ಲಾಗುಳದ ಕೋಲೊ ಬಗರಿಗೆಯೊ ಕೆಂಜೆಡೆಯೊ ಪೂಸುವ ಬೂದಿಯೊ ಬಡಗೊರವಂಗೇಕೆ ತನಗೆ ಕಾದುವ ಬೆಸನಂ: ಕಬ್ಬಿಗಕಾ, ೧೪೮)
< previous1234567898081Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App