ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892223Next >

ಭಕ್ತಿ

ಪೂಜ್ಯಭಾವನೆ (ದೇವರೊಳಂ ಗುರುಗಳೊಳಂ ಆಗಮದೊಳಂ ನಂಬುಗೆಯುಂ ನಲ್ಮೆಯುಂ ಭಕ್ತಿಯುಂ ಅನೂನಮಾಗೆ: ಸುಕುಮಾಚ, ೩. ೪೬ ವ); ಸೇವೆ (ಉಪಚಾರಂ ಸೇವನೆ ಪರ್‍ಯುಪಾಸ್ಯೆ ವರಿವಸ್ಯೆ ಭಕ್ತಿ ಶುಶ್ರೂಷಾರ್ಥಂ: ಅಭಿಧಾವ, ೧. ೩. ೧೪)

ಭಕ್ಷ

ಆಹಾರ (ನಿಡಿಯರ್ ಬಲ್ಲಾಯದ ಬಲ್ದಡಿಗರ್ ವಂದಿರ್ದರಯ್ವರಾಲವ ಕೆೞಗಿಂ ತೊಡರ್ದರ್ ನಮ್ಮಯ ಭಕ್ಷದೊಳ್: ಪಂಪಭಾ, ೩. ೧೨)

ಭಕ್ಷಣ

ಊಟ (ಉಣಿಸು ಅಭ್ಯವಹರಣಂ ಭಕ್ಷನ ಅಶನಂ ಜಿಗ್ಧಿ ಜೇಮನಂ ಭುಕ್ತಿ: ಅಭಿಧಾವ, ೧. ೧೫. ೭)

ಭಕ್ಷ್ಯ

ಆಹಾರ (ನಿಡಿಯರ್ ಬಲ್ಲಾಯದ ಬಲ್ದಡಿಗರ್ ವಂದಿರ್ದರಯ್ವರಾಲವ ಕೆೞಗಿಂ ತೊಡರ್ದರ್ ನಮ್ಮಯ ಭಕ್ಷ್ಯದೊಳ್: ಪಂಪಭಾ, ೩. ೧೨)

ಭಂಗ

ಮುರಿಯುವುದು (ತುಂಗವನ್ಯಮತಂಗಜದಂತಾಘಾತ ನಿಪಾತಿತಸಲ್ಲಕೀಭಂಗಮಂ .. .. ನೃಪನೆಯ್ದಿದಂ ಉದ್ಯತ್ಛೃಂಗಮನಾ ಶತಶೃಮಗಮಂ: ಪಂಪಭಾ, ೧. ೧೧೫); ಸೋಲು (ಭಂಗಮಾಗಿಯುಂ ಪರಾಜಿತಸಂಯುಗಮಲ್ತು: ತ್ರಿಷಷ್ಟಿಪು, ೨. ೨೫ ವ); ಅವಮಾನ (ಈ ದೊರೆಯಮುಂ ಅಳವೞಯೆ ವಸುಂಧರೆಯೊಳ್ ತಂದಿಕ್ಕಿ ಭಂಗಮಂ ಮಾಡುವೆನೇ: ಆದಿಪು, ೧೪. ೧೧೨); ಅಲೆ (ಭಂಗಕ್ಕೆ ಪಕ್ಕಾದೆನೆಂದು ಆತ್ಮಗತೌರ್ವಾಗ್ನಿಚ್ಛಲಂಬೆತ್ತ ಅೞಲುರಿಯೊಳಕೊಂಡಂತೆ ತೋರ್ಕುಂ ಸಮುದ್ರಂ: ಶಬರಶಂ, ೧. ೩೨); ದೋಷ (ಕಾವ್ಯಮೆನಿಸಿರ್ದು ವಿಬುಧಸೇವ್ಯಂ .. .. ಭಂಗವಿರಹಿತಂ .. .. ಎನಿಸಿ ಕುಜನಾಭವ್ಯಂ ಮತ್ಕೃತಿ ಚಮತ್ಕೃತಿಪ್ರದಮಲ್ತೇ: ರಾಜಶೇವಿ, ೧. ೮೧); ಚಲನೆ (ಭಂಗಮನಂತುಂ ತಳೆದ ಲತಾಮಗಮನಿಂ ನಿನ್ನ ಕೋಮಳಾಂಗದ ಚೆಲ್ವಿಂ ಗೆಲ್ದು: ಚಂದ್ರಪ್ರಪು, ೭. ೭೫)

ಭಗ

ಕೀರ್ತಿ, ಯಶಸ್ಸು (ಪೊಗೞೆ ಜಗತೀಚಕ್ರಂ ದಿಕ್ಷಕ್ರದೊಳ್ ಭಗಮವಗಂ ನೆಗೞೆ ವಿಜಯೋದ್ಯೋಗವ್ಯಾಭಾಸಮಾನ ಮಹೋದಯಂ: ವರ್ಧಮಾಪು, ೨. ೩೧); ಸೂರ್ಯ (ಭಗನ ಪಲ್ಕಂಗಳಂ ಕಿತ್ತು ದೇವರ್ ಮತಿಗೆಟ್ಟಿರ್ದೋಡಲ್ ಆ ದಕ್ಷನ ತಲೆಗಡಿದು: ತ್ರಿಷಷ್ಟಿಪು, ೩೦. ೩೧); ಸ್ತ್ರೀಯೋನಿ (ಸ್ಮರಸದನಂ ಉಪಸ್ಥಂ ಭಗಂ ಯೋನಿನಾಮಂ: ಅಭಿಧಾವ, ೧. ೧೨. ೪)

ಭಗಣ

ನಕ್ಷತ್ರಸಮೂಹ (ಗಗನತಳದೊಳ್ ಪಲವುಂ ಬೆಳಕಂಡಿಗಳಂ ಸಮೆದಂ ಜಳಜಜನೆನೆ ತೊಳಗಿ ಬೆಳಗಿದುವು ಭಗಣಂಗಳ್: ಧರ್ಮಪ, ೨. ೧೧)

ಭಗಣೇಶ

ನಕ್ಷತ್ರಸಮೂಹದ ಒಡೆಯ, ಚಂದ್ರ (ಚಿದಾಕಾಶಾಂಗಣೋನ್ಮಧ್ಯದೊಳ್ ಭಗಣೇಶಂಬೊಲ್ ಅಜಸ್ರಂ ಒಪ್ಪುವ ಭವಂ ರಕ್ಷಿಕ್ಕೆ ಭಕ್ತಾಳಿಯಂ: ಉದ್ಭಟಕಾ, ೧. ೩)

ಭಗಂದರ

ಒಂದು ಗುಹ್ಯರೋಗ (ಪಿಟಕಂ ಶೂಲ ಭಗಂಧರಂ ಕುಷ್ಠ .. .. ಮೊದಲಾಗೊಡೆಯ ಏೞುನೂಱು ವ್ಯಾಧಿಗಳ್: ವಡ್ಡಾರಾ, ಪು. ೬೯, ಸಾ. ೧೧)

ಭಂಗಂಬಡು

ಅವಮಾನಕ್ಕೊಳಗಾಗು ವನತರು ವಿಹಾರಜಜರೀಕೃತತನುಗಳ್ ಭಂಗಂಬಟ್ಟು ಪೊೞಲಂ ಪುಗೆ : ಚಾವುಂಡಪುಚಂದ್ರ, ಪು. ೨೬೮ ಸಾ. ೫)

ಭಂಗಂಬೆಱು

ಅಲುಗಾಡು, ಅಸ್ಥಿರಗೊಳ್ಳು (ಪಿರಿದುಮೆರ್ದೆ ಡವಕೆ ವಾಜಿಸುತಿರೆ ಭಂಗಂಬೆತ್ತು ಹಾರಲತೆ ಘನಕುಚದೊಳ್ ಕರವಿಕ್ಷೇಪದೆ ನರ್ತಿಸೆ ನರೇಂದ್ರನಂದನನನೊಲ್ದು ನೋಡಿದಳೊರ್ವಳ್: ಕಾದಂಬ, ೩. ೨೮)

ಭಗವ

ವೈಷ್ಣವ ಸನ್ಯಾಸಿ (ಕರವತಿಗೆಯ ಕೊೞೆನೀರ್ ಪಾರ್ವರಿಗಂ ಭಗವರಿಗಂ ಅಂತೆ ವ್ಯಾಧರಿಗಂ ತಾಂ ಪರಮಂ ಪವಿತ್ರಂ: ಸಮಯಪ, ೬. ೧೩)

ಭಗವಂತ ವೇಷ

ಸನ್ಯಾಸಿಯ ಸೋಗು (ಮಹಾಪದ್ಮನಂ ಕಿಡಿಸಿದಲ್ಲದೆ ಕಾಸೆಗಳಂ ಕಳೆಯೆನೆಂದು ಜಾದಿನ ಸೇಲೆಗಳನ್ನುಟ್ಟು ಭಗವಂತ ವೇಷಮಂ ಕೈಕೊಂಡು: ವಡ್ಡಾರಾ, ಪು ೧೮೬, ಸಾ ೬)

ಭಗವತಿ

ದೇವತೆ, ದುರ್ಗೆ (ಭಗವತಿಯಂ ಸ್ತುತಿಯಿಸಲ್ .. .. ತಾಂ ಗಡ ಮಗುೞತ್ತಳ್ ಕಳೆದ ಕಣ್ಣನೆಂಬರ್: ಸಮಯಪ, ೯. ೨೨)

ಭಗವತಿಯೇಱು

ದೇವಿಯ ಯುದ್ಧ, ದೇವಿ ಮೈಮೇಲೆ ಬಂದಾಗ ಉಂಟಾಗುವ ಉರುಬು (ಭಗವತಿಯೇಱುವೆರ್ವ ತೆಱದಿನಾಯ್ತಿವರೇಱು: ಪಂಪಭಾ, ೧೦. ೧೩)

ಭಗವತ್ಕೃತ

[ಜೈನ] ತೀರ್ಥಂಕರನಿಂದ ಆದ (ವಿತತಾಷಾಢದ ಬಹುಳ ಪ್ರತಿಪದ್ದಿನದಂದು ಕೀರ್ತಿ ನೆಗೞರೆ ಭಗವತ್ಕೃತಯುಗಮಾದುದರಿಂದಂ ಕೃತಯುಗಮೆಂಬರ್ ಪುರಾಣವಿದರಿದನೀಗಳ್: ಆದಿಪು, ೮. ೬೬)

ಭಗವದ್ರೂಪ

[ಜೈನ] ಗಣಧರರೂಪ (ಭಗವದರುಹನ ಸಮಕ್ಷದೊಳ್ ಅಗಣ್ಯಪುಣ್ಯಪ್ರಭಾವದಿಂದಂ ಕೊಂಡಂ ಭಗವದ್ರೂಪಮಂ ಇಂದ್ರಾದಿಗಳೆಲ್ಲಂ ಪೊಗೞೆ ಕಾಲಲಬ್ಧಿಯನಾಗಳ್: ಆದಿಪು, ೧೦. ೪೮)

ಭಂಗವ್ಯಾಕುಳಿತ

ಅಲೆಗಳಿಂದ ಅಸ್ತವ್ಯಸ್ತಗೊಂಡ (ಆ ಮಹಾರ್ಣವಂ ಸಮುದ್ರಮಾಗಿಯುಂ ಅಪಾರವಿಸ್ತಾರಿಯುಂ ಭಂಗವ್ಯಾಕುಳಿತಮಾಗಿಯುಂ ಅಚ್ಯುತಪ್ರಭಾವಬಾಸುರಮುಂ .. .. ಎನಿಸಿರ್ದುದು: ಜಗನ್ನಾವಿ, ೧. ೪೪ ವ)

ಭಗಾಕ್ಷ

ಇಂದ್ರ (ವಿರೂಪಾಕ್ಷ ಯಕ್ಷಸಖ ದಕ್ಷಮಖಪ್ರಕ್ಷಯ ಭಗಾಕ್ಷಹರ ನಿರಪೇಕ್ಷ: ತ್ರಿಷಷ್ಟಿಪು, ೨೬. ೨೮)

ಭಂಗಿ

ರೀತಿ (ಆವ ಭಂಗಿಯಿಂ ನೋಡುವೊಡೆ ಎನ್ನೊಳಿಲ್ಲ ಗುಣಲೇಶಂ: ಕಾದಂಸಂ, ೫. ೫೯); ಬಾಗು, ತಿರುವು (ನೆಲೆನೆಲೆ ಭಂಗಿ ಭಂಗಿ ಪದವಣ್ ಬೆಳರ್ವಾಯ್ ಪೆಱತಲ್ಲಿದೆಂತೊ ಕೋಮಲತೆ ಪೇೞಮೆನ್ನಿನಿಯಳಂ ಮಱೆಗೊಂಡುದೊ ಸೂಱೆಗೊಂಡುದೋ: ಪಂಪಭಾ, ೫. ೧೨) ಒನಪು (ಅಂಗುಲಿಯಂ ಓಪಂ ಒಲವಿಂ ಪಿಡಿದಾ ಭಂಗಿಗೆ ಮೆಲ್ಲನೆ ಸಖಿಯರ್ ಪಿಂಗಲ್ಕೆ: ತ್ರಿಷಷ್ಟಿಪು, ೧೯. ೧೦)
< previous1234567892223Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App