ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮೋಹನಯಂತ್ರ

ಸಮ್ಮೋಹನಗೊಳಿಸುವ ತಾಯಿತ (ಮನಸಿಜನ ಅಂಗನಾಜನವಶೀಕರಣ ಔಷಧಂ ಅಂಗಜನ್ಮನಂಬಿನ ಮದಶಕ್ತಿ ಮೋಹನಯಂತ್ರಂ ಇದಪ್ಪುದು: ಆದಿಪು, ೪. ೪೧)

ಮೋಹನೀಯ

[ಜೈನ] ಆತ್ಮನ ಬಂಧನಕ್ಕೆ ಕಾರಣವಾಗುವ ಮೂಲಕರ್ಮಗಳಲ್ಲಿ ಒಂದು (ಮತ್ತರ್ಪತ್ತೆಂಟು ತೆಱದ ಮೋಹನೀಯವೆಂಬ ಕರ್ಮದ ಕೇಡಿನಿಂ ಅನಂತಸುಖಿಗಳಾದರ್: ವಡ್ಡಾರಾ, ಪು. ೧೫೪, ಸಾ. ೨೩)

ಮೋಹರ

ಸೈನ್ಯ (ಸಗರ್ವ ಗಂಧರ್ವ ವಾಹಕಸಮೂಹದ ಸಾಹಸದ ಆಹವದ ಮೋಹರಮಂ ಕಾಹುರದ ಮೋಡಿಯಿಂ ನೋಡಿ: ರಾಜಶೇವಿ, ೬. ೬೫ ವ); ಗುಂಪು (ಅರಗಿಳಿವಿಂಡು ವಾರುವದ ಮೋಹರ ಆಱಡಿವಿಂಡು ಬೀರರ ಪಡೆ ಕೊಂಚೆವಿಂಡು ಪಲವಡ್ಡಣದೊಡ್ಡು ಅಮಳ್ವಕ್ಕಿವಿಂಡು ಮೆಯ್ವೆರಸುವ ಕೊಂತಗಾಱರ್: ಕಬ್ಬಿಗಕಾ, ೧೫೭)

ಮೋಹರಸ

ಪ್ರೀತಿ (ಪೆಂಡಿರೊಳಂ ಭೀತಿರಸಂ ಮೋಹರಸಮಂ ಒತ್ತರಿಸುಗುಮೇ: ಜಗನ್ನಾವಿ, ೩. ೨೫)

ಮೋಹರಿಸು

ಅಧಿಕವಾಗು (ಲೀಲೆ ಮೋಹರಿಸೆ ಗಳಂ ಚಮತ್ಕರಿಸೆ ಗದ್ಗದಮಾಂತಿರೆ ಕಂಪನಂ ಕೊನರ್ತಿರೆ ಪುಳಕಂಗಳ್: ಗಿರಿಜಾಕ, ೩. ೨೮)

ಮೋಹಿಡು

ವ್ಯವಸ್ಥೆಗೆ ತರು, ಸುಸ್ಥಿತಿಯಲ್ಲಿರಿಸು (ಅದಾರೊ ತಮ್ಮ ತನುವಿಂ ಮೋಹಿಟ್ಟರ್ ಆ ಲೋಕಮಂ: ಸಮಯಪ, ೧೦. ೧೦೨)

ಮೋಹಿಸು

ಆಕರ್ಷಣೆಯುಂಟುಮಾಡು (ನೀಲಾಂಜನೆ ತನ್ನಾಟಮನೊಱಲ್ದು ನೋಡುವ ನೋಟಕರಂ ತವದ ಮಾೞ್ಕೆಯಿಂ ಮೋಹಿಸಿದಳ್: ಆದಿಪು, ೯. ೩೮); ಪ್ರಜ್ಞೆ ತಪ್ಪಿಸು (ಒರ್ಮೆಯೆ ವಿಶ್ವರೂಪಮಂ ತೋಱದಂ ಇರ್ದರಂ ನೆಱೆಯೆ ಮೋಹಿಸಿ ವೈಷ್ಣವದಿಂ ಮುರಾಂತಕಂ: ಪಂಪಭಾ, ೯. ೬೦)

ಮೌಕುಳಿ

ಕಾಗೆ (ಮೌಕುಳಿ ಕೃಷ್ಣಧ್ವಾಂಕ್ಷಂ ಕಾಕೋಳಂ ದ್ರೋಣಂ ಇನತನೂಜನೆನಿಕ್ಕುಂ: ಅಭಿಧಾವ, ೧. ೯. ೧೫)

ಮೌಕ್ತಿಕ

ನವರತ್ನಗಳಲ್ಲಿ ಒಂದು, ಮುತ್ತು (ಕನತ್ ಖಚಿತಮುಂ ಮೌಕ್ತಿಕಸ್ತಂಭಮುಮಪ್ಪ ಸರ್ವತೋಭದ್ರಂ ಎಂಬ ಸಿವಿಗೆಯನೇಱಸಿ: ಪಂಪಭಾ, ೩. ೪೮ ವ)

ಮೌಕ್ತಿಕದಾಮ

ಮುತ್ತಿನ ಹಾರ (ಪರಸ್ಪರಸ್ಪರ್ಧಮಾನ ಪರಿಕ್ಷಿಪ್ತ ಮಲ್ಲಿಕಾಮುಕುಳ ಮುಕ್ತಾಫಳೋಪಶೋಭಿತದೊಳ್ ಇಂದ್ರನೀಲಮಣಿ ಕುಟ್ಟಿಮಸಂಕ್ರಾಂತ ಮೌಕ್ತಿಕದಾಮ ಅಭಿರಾಮದೊಳ್: ಆದಿಪು, ೮. ೬೭ ವ)

ಮೌಖರ್ಯ

[ಜೈನ] ಅನವಶ್ಯಕ ಮಾತನ್ನಾಡಿ ಹಿಂಸಿಸುವುದು (ಪುದಿದ ಸಮೀಕ್ಷಾದಿ ಕರಣಮ ಉದಯಿಪ ಕಂದರ್ಪಂ ಅಂತೆ ಕೌತ್ಯುಚ್ಚಂ ಪೆರ್ಚಿದ ಮೌಖಯ ಅನರ್ಥಕ್ಯದೊಳ್ ವ್ಯತಿಕ್ರಮಮತಿಪ್ರಸಾಧನಸಹಿತಂ: ಸುಕುಮಾಚ, ೬. ೨೦); ಒಂದು ಅನರ್ಥದಂಡ ವಿರತಿ

ಮೌಂಜಿ

ಹುಲ್ಲಿನ ಹುರಿ, ಬ್ರಹ್ಮಚಾರಿಯು ಧರಿಸುವ ಮೌಂಜಿ ಹುಲ್ಲಿನ ಉಡಿದಾರ (ಜಿನರೂಪಮಂ ಬಿಸುಟ್ಟು ಮಂಜಿವಲ್ಕಲ ಕೌಪೀನದಂಡಧರನಾಗಿ ಪರಿವ್ರಾಜಕವೇಷಮಂ ಕೆಯ್ಕೊಂಡು: ವರ್ಧಮಾಪು, ೬. ೧೦ ವ)

ಮೌನವ್ರತ

ವ್ರತದಂತಹ [ಕಟ್ಟುನಿಟ್ಟಾದ] ಮೌನ (ಅನಿಬರುಂ ಇರ್ದರ್ ಮೌನವ್ರತದೆ ಗುಣಾರ್ಣವಂ ಆನೀವೆಂ ನಿಮ್ಮ ಬಯಸಿ ಬೇೞ್ಪುದನೆಂದಂ: ಪಂಪಭಾ, ೨. ೫೪)

ಮೌನಾಧ್ಯಯನವೃತ್ತಿ

[ಜೈನ] ಗರ್ಭಾನ್ವಯಕ್ರಿಯೆಗಳಲ್ಲಿ ಒಂದು; ಮೌನ ಶಾಸ್ತ್ರಾಭ್ಯಾಸ (ಮೌನಾಧ್ಯನವೃತ್ತತ್ವ .. .. ಇಂದ್ರಾಭಿಷೇಕ ಗುರುಪೂಜೋಪಲಂಭನ ಯೌವರಾಜ್ಯ .. .. ಎಂಬ ಅಯ್ವತ್ತಮೂಱು ಗರ್ಭಾದಿನಿರ್‍ವಾಣಪರ್‍ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಮೌರವಪಾಶ

ಕಬ್ಬಿಣದ ಸರಪಳಿ (ದೇವಾಸುರರ್ಗಮ ಅರಿದೆನಿಸಿ ನರಕನ ಪುರಮಂ ಬಳಸಿರ್ದುದೊಂದು ಮೌರವಪಾಶಂ: ಜಗನ್ನಾವಿ, ೧೨. ೫)

ಮೌರ್ವೀ

ಬಿಲ್ಲಿನ ಹೆದೆ (ಸಮುದ್ಯತ್ ರಜತಗಿರಿ ತಟ ಸ್ಪಷ್ಟ ಸಂಶ್ಲಿಷ್ಟ ಮೌರ್ವೀನಿನದಂ ಪರ್ವಿತ್ತು ಅಕಾಂಡಪ್ರಳಯ ಘನಘಟಾಟೋಪ ಗಂಭೀರನಾದಂ: ಪಂಪಭಾ, ೧೨. ೧೩೭)

ಮೌಲ

ರಾಜನ ಸೇವೆಯಲ್ಲಿರುವವನು (ಮೌಲ ಭೃತ್ಯ ಸುಹೃತ್ ಶ್ರೇಣಿ ಮಿತ್ರ ಅಟವಿಕ ತಂತ್ರಂಗಳ್ ಪಣ್ಣಿದಜಂತ್ರಂಗಳಂತೆ ಕೞಕುೞಮಾದುವು: ಪಂಪಭಾ, ೧೩. ೨೦ ವ)

ಮೌಲಿ

ತುದಿ; ತಲೆ (ಸತ್ಯೇಂದ್ರಚೋಳೇಂದ್ರ ಸತ್ಪದಪದ್ಮಕ್ಕೆ ಮರಂದಮಂ ಪಡೆದು ಮೌಲಿದ್ಯೋತಿಯಿಂ ಮೊಳ್ಗಿದಂ: ರಾಜಶೇವಿ, ೪. ೧೧೩)

ಮೌವರಿ

ಮೌರಿ, ಒಂದು ಊದುವಾದ್ಯ (ಕೊಂಬು ಮೌವರಿ ಕೊಳಲಿಂ ಬಿಡದೂದುವ ಸಿಳ್ಳಿಕ್ಕುವ ಕಡುರಭಸದ ಪೆರ್ಚಿಗೆ: ತ್ರಿಷಷ್ಟಿಪು, ೧೫. ೬)

ಮೌಹೂರ್ತಿಕ

ಜೋಯಿಸ (ಆತ್ಮೀಯ ಪುತ್ರೀ ವಿವಾಹೋತ್ಸವಕ್ಕೆ ಮೌಹೂರ್ತಿಕರಂ ಕರೆದು ದಿವಸಮಂ ಬೆಸಗೊಳ್ವುದುಂ: ಆದಿಪು, ೪. ೩೦ ವ)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App