ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮೌಳಿ

ಕಿರೀಟ (ಮಕುಟಂ ಕೋಟೀರಂ ಮೌಳಿ ಕಿರೀಟಂ ತಾನೆನಿಕ್ಕುಂ: ಅಭಿಧಾವ, ೧. ೧೩. ೨೦

ಮ್ಲಾನ

ಕಳೆಗುಂದಿದುದು (ವಿರಹಪರವಶಾಂಗಂ ತ್ಯಕ್ತ ಜಾಯಾನುಷಂಗಂ .. .. ದರಚಳಿದಪಾಂಗಂ ಮ್ಲಾನಮಾಯ್ತಾ ರಥಾಂಗಂ: ಚಂದ್ರಪ್ರಪು, ೮. ೫)

ಮ್ಲಾನತೆ

ಕಳಾಹೀನತೆ (ಮಾನವಕನ್ಯೆಯಂ ಬಯಸಿ ನಂದನ ನಿನ್ ಮನಕ್ಕೆ ಚಿಂತೆಯಂ ಮ್ಲಾನತೆಯಂ ಮುಖಕ್ಕೆ ತರವೇೞ್ವುದೆ: ಪಂಪರಾ. ೪. ೯೮); ದುಃಖ (ಪಿರಿದುಂ ಬಿದಿ ನಿಜನ್ಮಾಕರಮೆನಿಸಿದ ಪದ್ಮಜಾತಿಗಂ ಮ್ಲಾನತೆಯಂ ದೊರಕಿಸಿಕೊಳಿಸಿದನೆನೆ ಮತ್ತಿತರೊಳಾದಂ ಮಾೞ್ಪ ಕೃಪೆ ಖಪುಷ್ಪಮದಲ್ತೇ: ಚಂದ್ರಪ್ರಪು, ೮. ೧೪)

ಮ್ಲೇಚ್ಛಖಂಡ

ಅನಾರ್ಯರ ನಾಡು, ಐವತ್ತಾರು ದೇಶಗಳಲ್ಲಿ ಒಂದು (ಮುನ್ನಿನಂದದಿಂ ಪೃತನಾಪತಿ ತದೀಯ ಗುಹಾದ್ವಾರಮಂ ತೆಱೆದು ಮ್ಲೇಚ್ಛಖಂಡಮಂ ಉಂಡಿಗೆಸಾಧ್ಯಂ ಮಾಡಿ: ಶಾಂತೀಶ್ವಪು, ೧೨. ೮೮ ವ)

ಮ್ಲೇಚ್ಛರಾಜ

ಅನಾರ್ಯರ ದೊರೆ (ವಸ್ತುವಾಹನಪುರಸ್ಸರಂ ಮ್ಲೇಚ್ಛರಾಜರಂ ಲಲಾಟಘೃಷ್ಟಭೂತಳರಂ ಮಾಡಿ: ಆದಿಪು, ೧೩. ೪೦ ವ)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App