ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಕ್ಕಳೆವು

ಮಕ್ಕಳಾಗಿದ್ದೇವೆ (ನಿಮ್ಮಯ ಧರ್ಮದ ಮಕ್ಕಳೆವು ಎಮ್ಮಂ ಕಡೆಗಣಿಸಿ ನಿಮಗೆ ನೆಗೞ್ವುದು ದೊರೆಯೇ: ಪಂಪಭಾ, ೧೧. ೧೨೮)

ಮಕ್ಷಿಕಾ

ನೊಣ (ಮಕ್ಷಿಕಾಶಂಕೆಗುಣ್ಣರೇ ಧೂಮಕ್ಕೆ ಸಮಂತು ಬೆರ್ಚಿ ಪಚನವ್ಯಾಪಾರಮಂ ಮಾಣ್ಬರೇ: ಧರ್ಮಪ, ೧. ೩೬)

ಮಖ

ಯಜ್ಞ (ಈ ಧರಾಮರಜನಮಿಲ್ಲದಂದು ಮಖದಿಂ ಜಗದಿಂ ಬಱಕೆಯ್ಯದಿರ್ಕುಮೇ: ಸಮಯಪ, ೧೪. ೧೨೯)

ಮಖಪುರುಷ

ಯಜ್ಞಪುರುಷ, ವಿಷ್ಣು (ಮಖಪುರುಷನಿರ್ದ ದಸೆಗಭಿಮುಖನಾದೊಡೆ ಪೋಯ್ತಘಂ ಪರಾಙ್ಮುಖಂ ಅಂತರ್ಮುಖಮಾದುದು ಮಾನಸಂ: ಜಗನ್ನಾವಿ, ೫. ೬೭)

ಮಖಶಿಖಿ

ಯಜ್ಞದ ಬೆಂಕಿ (ಮಖಶಿಖಿ ಮಖಸಂಭವಲೋಹಖುರಗಳಿವೆನಿಪ ಪಟ್ಟಸಾಹಣದ ಹಯಂ ಮುಖಲೀನಖಲಿನೋತ್ತಾನಖಣತ್ಕೃತಮೊದವೆ ನಿಂದುವಂದು ಅರಮನೆಯೊಳ್: ಮಲ್ಲಿನಾಪು, ೯. ೪)

ಮಖಾವಾಸ

ಯಜ್ಞಮಂಟಪ (ರಾಗದೆ ಕೈಗೊಟ್ಟೊಡಗೊಮಡು ಪೊಕ್ಕಂ ಅಖಿಳೋರ್ವೀಶಂ ಮಖಾವಾಸಮಂ: ಕುಸುಮಾಕಾ, ೪. ೧೧೬)

ಮಗ

ಮಗು, ಹುಡುಗ (ಮಗನೆ ಪದಿನಾಲ್ಕು ವರುಷದ ಮಗನೈ ನಿನ್ನನೊರ್ವನಂ ಪಗೆವಡೆಯೊಡ್ಡುಗಳಂ ಒಡೆಯಲ್ಕೆ ಪೇೞ್ದು: ಪಂಪಭಾ, ೧೧. ೯೧)

ಮಗಧನಾಯಕ

ಶ್ರೇಣಿಕ ಮಹಾರಾಜ (ವರ್ಧಮಾನಜಿನ ಸನ್ನಿಧಿಯೊಳ್ ವಿಪುಳಾದ್ರಿಯೊಳ್ ನಿಜಾದರದೊಳೆ ಗೌತಮರ್ ಮಗಧನಾಯಕನುಂ ತಿಳಿವಂತು ಪೇೞ್ದುದಂ: ಆದಿಪು, ೧. ೪೧)

ಮಗನೆಯಿನ್

ಮಗನೇ ಆಗಿದ್ದೀಯೆ (ಕೃತಾಂತನೆಂ ಎನಗಮ್ಮ ನೀಂ ಮಗನೆಯಿನ್ ಪೆಱತೇಂ ನಿನಗೆ ಉತ್ತರೋತ್ತರಂ: ಪಂಪಭಾ, ೮. ೪೮)

ಮಗಮಗಿಸು

ಪರಿಮಳ ಬೀರು [ನಿಡುಸುಯ್ದ ನಲ್ಲಳ ಮುಖಾಂಬುಜಸೌರಭದೊಳ್ ಪೊದಳ್ದು ಅದೇಂ ಮಗಮಗಿಸಿತ್ತೊ ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ: ಪಂಪಭಾ, ೪. ೧೦೭)

ಮಗರಿ

ಒಂದು ವಿಧವಾದ ಬಟ್ಟೆ (ಮಿಗೆ ಬೆಲೆಯೇಱದ ಪೂಲಿಯ ಮಗರಿಯ ದೋರಿಯದ ಪೞಯ ತಳಿರ್ವಟ್ಟೆಯ ಕಾಡಿಗೆ ನೀರಿನ ಬಟ್ಟೆಯ ಮೞಗೆಗಳಿಂ ಸೋಲಿಪುವು ಸೀರೆವರದರ ಪಸರಂ: ಕಬ್ಬಿಗಕಾ, ೩೪)

ಮಂಗಲತೊರಣ

ಶುಭಸಮಾರಂಭದಲ್ಲಿ ಕಟ್ಟುವ ತೋರಣ (ತ್ರಿಭುವನ ಮಂಗಲತೋರಣನಿಭಮಂ ಪ್ರವಚನಮನೆಯ್ದಿ ರೈಸ್ತಂಭಸಮಪ್ರಭರ್ ಅಂತರ್ನೀಭೃತೋನ್ನತವಿಭವರ್ ಭೂತಬಲಿ ಪುಷ್ಪದಂತಾರ್ಚಾರ್: ಚಂದ್ರಪ್ರಪು, ೧. ೧೫)

ಮಂಗಳ

ಶುಭಕರವಾದ; ಅಂಗಾರಕ; ಮಂಗಳಕರ ಗೀತೆ (ಮಂಗಳಮನೆ ಪಾಡುತ್ತುಂ ಮಂಗಳಧಾರಿಣಿಯರಾಗಿ ಮುಂದಂ ನಡೆವಾಶಾಂಗನೆಯರಿಂದೆ: ಆದಿಪು, ೭. ೪೮)

ಮಂಗಳಕರ

ಶುಭಕರ (ಮಂಗಳಕರ ಭುವನಾಧಿಕ ಮಂಗಳನಂ ಅನಂತಬೋಧನಿಧಿಯಂ ನಿಧಿಗಳ್ ಸಂಗಡದೋಲಗಿಸುವುದು ಉಚಿತಂ ಗಡಮೆನೆ ನೆಲಸಿ ಗೋಪುರದೊಳೋಲಗಿಕುಂ: ಪಾರ್ಶ್ವನಾಪು, ೧೬. ೬೮)

ಮಂಗಳಕಾರಣ

ಶುಭಕ್ಕೆ ಕಾರಣವಾದ[ದ್ದು] (ಮಂಳಕಾರಣಪಂಚಪದಂಗಳಂ .. .. ಅಕ್ಷಯ ಮಂತ್ರಪದಂಗಳನೋದುವುದು ನೆಱೆಯೆ ನಿಶ್ಚಲಮತಿಯಿಂ: ಆದಿಪು, ೨. ೫೪)

ಮಂಗಳಕೇತು

ಶುಭಸೂಚಕವಾದ ಧ್ವಜ (ಮಂಗಳಕೇತುವಿರಾಜಿತಂ ಅಂಗೀಕೃತನೀಲಭಾನುತಮಸಂ ಪರಿಷತ್ಸಂಗಬುಧಗುರು ಕವಿರಾಜಂಗತಿನವಗ್ರಹಪರೀತಂ ಉದ್ವಾಹಗೃಹಂ: ಅನಂತಪು, ೬. ೪೮)

ಮಂಗಳಂಗಳ್

ಮಂಗಳ ವಸ್ತುಗಳು (ತದ್ಗುಹಾಕೂಟ ನಿವಾಸಿಯಪ್ಪ ನಾಟ್ಯಮಾಲಾಮರಂ ಸುವರ್ಣಪೂರ್ಣ ಕುಂಭಾದಿ ಮಂಗಳಂಗಳಿನಿದಿರ್ಗೊಳೆ ಗುಹಾದ್ವಾರದಿಂ ಪೊಱಮಟ್ಟಾಗಳ್: ಆದಿಪು, ೧೩. ೮೦ ವ)

ಮಂಗಳಗಾಯಕ

ಶುಭಪ್ರದ ಹಾಡುಗಳನ್ನು ಹೇಳುವವನು (ಗೀರ್ವಣಮಂಗಳಗಾಯಕರೆ ಸಂಗೀತಗಾಯಕರಾಗೆ ನಿಳಿಂಪ ಭರತಿಕರೆ ನಟ್ಟುವರಾಗೆ: ಶಾಂತಿಪು, ೧೦. ೬೦ ವ)

ಮಂಗಳಗಾಯಿ[ಕಾ]ಕೆ

ಶುಭಪ್ರದ ಹಾಡುಗಳನ್ನು ಹೇಳುವವಳು (ಮಂಗಳಗಾಗಾಯಿಕಾ ಮಧುರಗಾನದಿನೆೞ್ಚಱನೆಯ್ದಿ ನಿತ್ಯಕೃತ್ಯಂಗಳ ಮಂಗಳಾಚರಣಮಂ ನೆಗೞುತ್ತೆ: ಪುಷ್ಪದಂಪು, ೩. ೧೨೧)

ಮಂಗಳಗೀತಿ

ಮಂಗಳ ಸಂಗೀತ (ಪಾಸಱೆ ಸಿಂಹಪೀಠಂ ಅಳಿನಿರುತಿ ಮಂಗಳಗೀತಿ ಭೂತಳಂ ಪಾಸು ಮೃಗವ್ರಜಂ ಪರಿಜನಂ ಪೊದಱ್ ಓಲಗಸಾಲೆ: ಪಂಪಭಾ, ೭. ೨೯)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App