ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಚ್ಚ

ಚಿನ್ನದ ಶುದ್ಧತೆ (ಒರೆಯಂ ನೋಡದೆ ನೋಡಿ ಚಿನ್ನಮನೆ .. .. ಮಚ್ಚಮನೆ ಲೀಲಾಮಾತ್ರದಿಂ ಕಟ್ಟುವ ಅಚ್ಚರಿಯಿಂದಾ ಪುರದಲ್ಲಿ ಚಿನ್ನವರದರ್ ತಾಮಿಂತು ವಿಭ್ರಾಜಿಪರ್: ಶಾಂತೀಶ್ವಪು, ೧. ೧೨೧); ಮಾತ್ಸರ್ಯ (ಮಚ್ಚದಿಂ ಚೆಚ್ಚರದಿಂದಂ ಕಿೞ್ತು ಬೇತಾಳನ ತಲೆಯನೆ ನಕ್ತಂಚರಂ ತಿದಂ: ನೇಮಿನಾಪು, ೫. ೪೦)

ಮಚ್ಚರ

ಅಧಿಕ ಅಪೇಕ್ಷೆ (ಭೋಗದೊಳ್ ಬಹುವಿಚಾರಂ ತತ್ವದೊಳ್ ಮಚ್ಚರಂ ಜಿನಧರ್ಮಕ್ರಿಯೆಯೊಳ್ ನಿರಂತರಿತಮೋಹಂ .. .. ಅಲ್ಲದಿಲ್ಲ ಅಂತಾ ಮಹೀಮರ್ತ್ಯರೊಳ್: ಶಾಂತೀಶ್ವಪು, ೧೩. ೧೩೮); ಅಸೂಯೆ (ಪಿರಿದುಂ ಕಾಯ್ಪಿನೊಳ್ ಎಯ್ದೆ ಕಾಯ್ವ ಸಮಕಟ್ಟಿಂ ದೋಷಮಲ್ತು ಅಕ್ಕ ಮಚ್ಚರಮುಂ ಮೋಘಂ ಎಡಂಬಡುಂ ಕಲುಷಮುಂ ಮುನ್ನುಳ್ಳುದು .. .. ನಿಷ್ಕಾರಣಂ ಕಾಯ್ವರೇಂ: ಪಂಪಭಾ, ೭. ೩೫)

ಮಚ್ಚರಕಾಱ

ಅಸೂಯೆ ಉಂಟುಮಾಡುವವನು (ಮಹಾಧರ್ಮದೊಳ್ ಮಚ್ಚರಕಾಱಂ ಭಾವಕೋತ್ಪಾದಕ ರಸಿಕಕವಿಸ್ತೋಮದೊಳ್ ನೇಮಿಚಂದ್ರಂ: ನೇಮಿನಾಪು, ೧. ೩೭)

ಮಚ್ಚರಿಸು

ಸ್ಪರ್ಧಿಸು (ತನ್ನಿಂ ತಾನುಂ ಶರದದ ಚಂದ್ರಮನೊಳ್ ಮಚ್ಚರಿಪಂತಿರೆ ಚಂದ್ರಚರಿತಮಂ ಕೈಕೊಂಡಂ: ಆದಿಪು, ೧೨. ೪೬); ದ್ವೇಷಿಸು (ಮಚ್ಚರಿಪದಟಂ ಇನ್ನಾವನೊ ಭರತೇಶ್ವರಚಕ್ರವರ್ತಿಗಿನ್ನುಂ ಜಗದೊಳ್: ಆದಿಪು, ೧೪ ೪)

ಮಚ್ಚು

ಮೆಚ್ಚಿಕೆ (ಸರಳಾಳಾಪಂಗಳಿಂ ಜತ್ತಿಸುವ ಬಗೆಗೆಲಲ್ಕೆಂದು ಕೂರ್ತಿಚ್ಚೆ ಬೆಚ್ಚಂತಿರೆ ಮಚ್ಚಂ ಮೆಚ್ಚಿದಂದದೊಳೆ ಸಲಿಪ: ಸುಕುಮಾಚ, ೯. ೬೩); ಬಹುಮಾನ (ಒಸಗೆವಾತಂ ಪೇೞ್ದವಂಗೆ ಮಚ್ಚುಗೊಟ್ಟು ಅಲ್ಲಿಂದೆೞ್ದು ಪೊಱಮಟ್ಟು: ಕಾದಂಸಂ, ೨. ೨೫ ವ)

ಮಚ್ಚು, ಮಂತ್ರಿ

ಮಂತು: ಶಬ್ದಮದ, ೨೯೩ ಪ್ರ); ಕಡೆಗೋಲು (ಮಂಥಣಿ ಗರ್ಗರಿ ಕಡೆಗೋಲ್ ಮಂಥಾನ ಮಂತು ಅವಂತೆಲ್ಲಂ ಖಜಕಂ: ಅಭಿಧಾವ, ೧. ೧೦. ೩೧)

ಮಚ್ಚುಗುಡಿಸು

ಕಾಣಿಕೆ ಕೊಡಿಸು (ದಮಿತಾರಿಯ ಭುಜಬಲ ವಿಕ್ರಮದ ಅಳವಿಗೆ ಮಚ್ಚಿ ಮಚ್ಚುಗುಡಿಸುವವೊಲ್ ಅನುಕ್ರಮದಿಂ ನೀರ್ಗುಡಿಸಿ ಯಥಾಕ್ರಮದಿಂ ಪದವಡಿಸಿ ಪಾರಲೌಕಿಕವಿಧಿಯಂ: ಶಾಂತಿಪು, ೪. ೫೮)

ಮಚ್ಚುಗೆವೆಱು

ಮೆಚ್ಚಿಗೆಯನ್ನು ಪಡೆ (ಒರ್ಮೆಗೊರ್ಮೆಗೆ ಎರ್ದೆಯೊಳ್ ಬೈತಿಚ್ಚೆಯೊಳ್ ಕೂರ್ಮೆ ತಳ್ತಿರವಿಂ ಮಚ್ಚುಗೆವೆತ್ತ ಪತ್ತುಗೆಯಿನಂತಾ ನಾಲ್ವರಂದಿರ್ವರಿರ್ವರೆ ಯುಗ್ಮದ್ವಯಮಾದರ್: ಶಾಂತಿಪು, ೬. ೧೨೩)

ಮಚ್ಛೌರ್ಯ

[ಮತ್+ಶೌರ್ಯ] ನನ್ನ ಪ್ರತಾಪ (ಪಗೆವಂ ಬಂದುಱದಿಂತು ಮೂದಲಿಸೆಯುಂ ಮಾತಂ ಕಿವುೞ್ಗೇಳ್ದು ಕೆಮ್ಮಗೆ ನೀರೊಳ್ ಮುೞುಗಿದರ್ಪಡೆ ಕಿಡುಗುಂ ಮಚ್ಛೌರ್ಯಂ: ಪಂಪಭಾ, ೧೩. ೮೧)

ಮಂಜರಿ

ಗೊಂಚಲು (ದಿವ್ಯ ಕುಸುಮಮಂಜರಿಯ ನವತಂಸಂ ಮಾಡಿ ಪಾರಿಜಾತಜನ್ಮಮಂ ಸಫಲಂ ಮಾೞ್ಪುದು: ಕಾದಂಸಂ, ೪. ೧೬ ವ)

ಮಂಜರಿಸು

ಗೊಂಚಲಾಗು (ಕೆಂಪಿನ ಕಂಪಿನ ಮಂಜರಿಯಂತೆ ಮಂಜರಿಸಿ ಮಗಮಗಿಸಿ ಮರಿಪುಗೊಂಡು ಸೊಬಗುಕೊಂಬುಗೊಂಡು ಅರಿಸಿನದ ಕೊಂಬುಗಳಂ ಸೊಪ್ಪಗುಟ್ಟಿ: ಲೀಲಾವತಿ, ೧೨. ೬೭ ವ)

ಮಂಜಿ

ನಾರು (ಅಲರಿಂದೆ ಮಂಜಿ ಬಂದುಱು ತಲೆಗೇಱದ ತೆರದೆಬಂದ ಬಿಂದಮಂ ಅಭವಾಚಲದೊಳ್ ಇರವೇೞುತುಂ: ಉದ್ಭಟಕಾ, ೫. ೧೦೮)

ಮಂಜಿಟಿಗೆ

[ಮಂಜಿಷ್ಠಾ] ನಸು ಹಳದಿ ಹೂ ಬಿಡುವ ಒಂದು ಸಸ್ಯ (ಪೊಸ ಪಸಗೆಯ ಮಂಜಿಟಿಗೆಯ ಮಿಸುಗುವ ದೋರಿಯದ ಪೞಯ ಪುಲ್ಲಿಯ ಸೊಂಪಂ ಪಸರಿಸಿದ ಪಕ್ಕರಕ್ಕೆಗಳೆಸೆದಿರ್ದುವು: ಕಬ್ಬಿಗಕಾ, ೨೦೨)

ಮಂಜಿನ ಮೞೆ

ಮಂಜಿನ ಧಾರೆ (ಮುಸುಕಿದ ಮಂಜಿನ ಮಾೞೆಯೊಳ್ ನಸುದೋಱುವ ಶೋಣ ಕಮಲಯುಗದಂತೆ: ಕುಸುಮಾಕಾ, ೧೦. ೫೦)

ಮಂಜಿಮ

ಸೊಗಸು (ಕಮಳದಳಾಯತೇಕ್ಷಣರುಚಿಪ್ರಸರಂ ಬಸಿತಪುಂಡ್ರಮಂಜಿಮಯುತಫಾಲಂ ಆ ಲಲಿತ ಕುಂಡಳ ಮಂಡಿತಗಂಡಮಂಡಳಂ: ರಾಜಶೇವಿ, ೧೪. ೬೪)

ಮಂಜೀರ

ಕಾಲಿನ ಒಂದು ಆಭರಣ, ಕಾಲ್ಗೆಜ್ಜೆ (ಲಲನಾ ಮಂಜೀರನಾದಕ್ಕೆ ಎಳಸುವ ಕಳಹಂಸಂಗಳಂ ಕಂಡು: ಕಾದಂಬ, ೨. ೫೯)

ಮಂಜೀರಕ

(ವಿದ್ಯಾಧರೀರಮ್ಯನರ್ತನ ರಾಗೋತ್ಥಿತ ಪಾರಿಹಾರ್ಯ ರಶನಾ ಮಂಜೀರಕೋದ್ದಾಮನಿಸ್ವನದೊಳ್: ಆದಿಪು, ೧. ೭೦)

ಮಂಜು

ಹಿಮ, ಕಾವಳ (ಕಾಂಡಪಟದಂತಿರ್ಪನ್ನೆಗಂ ಮಾಡಿ ಮಂಜನಲಂಪೞ್ಕಱನೀಯೆ ಕೂಡುವೆಡೆಯೊಳ್ ಜ್ಞಾನಸ್ವರೂಪಂ ಮಹಾಮುನಿಪಂ ಪುಟ್ಟಿದಂ: ಪಂಪರಾ, ೧. ೬೯); ಇಂಪಾದ (ಮಧುರಂ ಮಂಜುಳ ಮಂಜು ಸೌಮ್ಯಂ: ಅಭಿಧಾವ, ೨. ೧. ೫೮)

ಮಂಜುಘೋಷ

ಇಂಪಾದ ಧ್ವನಿ (ಮಂಜುಘೋಷಮಂ ಬೀಱುವ ಸಿಂಜಿನೀವಳಯಕಾಂಚಿಗಳೆಂಬಿವಱಂದದೊಂದು ಚೆಲ್ವೇಱರೆ ಭೋಗಿ ಭಾಮಿನಿಯರಾ ಮಡುವಿಂ ಪೊಱಮಟ್ಟರೞಯಿಂ: ಜಗನ್ನಾವಿ, ೩. ೧೦೨)

ಮಂಜುಘೋಷೆ

ಒಬ್ಬ ಅಪ್ಸರೆಯ ಹೆಸರು (ಮೇನಕೆ .. .. ಮಂಜುಘೋಷೆಯೆಂಬೀ ನೆಗೞ್ದಗ್ಗದಚ್ಚರಿಯಪ್ಪ ವಿಳಾಸಮಂ ನಿಜನಟನೈಕದೇಶಮೆ ತಱುಂಬಿದುದು: ಪುಷ್ಪದಂಪು, ೨. ೭೭)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App