ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಂಜುಮಾಡು

ದೃಷ್ಟಿಗೆ ಮಬ್ಬುಗವಿಸು (ಕೃಷ್ಣನೆ ಮಂಜುಮಾಡಿದ ವ್ಯಥಾಲಪಂಗಳಂ ತತ್ತ್ವಮೆಂದು ತಗುಳ್ದಾಗಳುಂ ಓದುವರ್: ಸಮಯಪ, ೧೦. ೧೭೧)

ಮಂಜುವೆಟ್ಟ

ಹಿಮದ ಬೆಟ್ಟ, ಕೈಲಾಸ (ತೆಱವುಗುಡದೆ ಸೂೞೈಸುವ ನಿಸ್ಸಾಳದ ಬಲ್ಸರಕೆ ದೆಸೆವೆಟ್ಟುಗಳ್ ನಿಬ್ಬರಂಬಿರಿಯೆಯುಂ ಬೇಗದಿಂ ನಡೆದೆತ್ತಿ ಬಂದು ಮಂಜುವೆಟ್ಟಮಂ ಮೂವಳಸಾಗಿ ಮುತ್ತಿದಾಗಳ್: ಕಬ್ಬಿಗಕಾ, ೨೨೪ ವ)

ಮಂಜುಶಿಂಜಿತ

ಮಧುರ ಧ್ವನಿ (ಅತ್ತಲಿತ್ತಲೆಡೆಯಾಡುವ ದಂದುಗದಾಗಳೇಂ ಪೊದಳ್ದೆಸೆದುದೊ ಚಾರುದೇವಗಣಿಕಾ ಮಣಿನೂಪುರ ಮಂಜುಶಿಂಜಿತಂ: ಆದಿಪು, ೭. ೨೨)

ಮಂಜುಸಿಂಜಿತ

ಇಂಪಾದ ಧ್ವನಿ (ರಂಜಿಸುವ ಹಂಸರವಮುಂ ರಂಜಿಸದಿನ್ನಿದಱ ಕೆಲದೊಳೆಂಬಿನೆಗಂ ಅದೇಂ ಲಂಜಿಕೆಯರ ಗುಂಜನ್ಮಣಿ ಮಂಜೀರಕ ಮಂಜುಸಿಂಜಿತಂ ರಂಜಿಸಿತೋ: ಅಜಿತಪು, ೫. ೪೨)

ಮಂಜೂಷ

ಪೆಟ್ಟಿಗೆ (ಬಾಳಕನ ಕೆಲದೊಳ್ ಸುರಿದಿರಿಸಿ ಮಂಜೂಷೆಯ ಕೆಲವಲಗೆಯೊಳ್: ಈ ರತ್ನಂಗಳಂ ಕೊಂಡೀ ಕುಮಾರನಂ ಪ್ರಯತ್ನದಿಂ ರಕ್ಷಿಸುಗೆ: ಕರ್ಣನೇಮಿ, ೩. ೪೦ ವ)

ಮಂಜೂಷೆ

ಮಂಜೂಷ (ಕಾಂಚನ ಮಂಜೂಷೆಯೊಳೊಪ್ಪುವ ಜನಪತಿಸುತನಂ ನೃಪಾಳ ಕೃಷ್ಣಂ ಕಂಡಂ: ನೇಮಿನಾಪು, ೪. ೯೬)

ಮಜ್ಜ

ಸಾರ, ಸತ್ವ (ಸಾರಂ ಮಜ್ಜಂ: ಅಭಿಧಾವ, ೧. ೭. ೬)

ಮಜ್ಜನ

[ಮಾರ್ಜನ] ಸ್ನಾನ (ಆ ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಜ್ಜನಕೆ ಎಂದೆತ್ತಿದ ಚಂದ್ರಕಾಂತ ಘಟದೊಳ್ ತಂದು ಅೞಯಿಂ ಪುಷ್ಪವಾಸನೆಗೆಂದಿಕ್ಕಿದ ನೀಳನೀರರುಹಮಂ ಪೋಲ್ದತ್ತು ಕೞಂದುವಾ: ಪಂಪಭಾ ಪರಿಷತ್ತು, ೪. ೫೧); ಸ್ನಾನಮಾಡುವ ಕ್ಷೇತ್ರ (ಪಿರಿಯ ಮರಂಗಳೆ ಮಾಡಮಾಗೆ ಪೊಳೆದೆಳೆದಳಿರ್ಗಳೆ ಸೆಜ್ಜೆಯಾಗೆ ಪಿರಿಯ ಮಡುಗಳೆ ಮಜ್ಜನಮಾಗೆ: ಪಂಪಭಾ, ೭. ೨೮)

ಮಜ್ಜನಗೃಹ

ಸ್ನಾನದ ಮನೆ (ವಸುಧಾರಕಮೆಂಬ ಕೋಶಾಗಾರಮುಂ ಜೀಮೂತವೆಂಬ ಮಜ್ಜನಗೃಹಮುಂ: ಆದಿಪು, ೧೫. ೩ ವ)

ಮಜ್ಜನಪೀಠ

ಸ್ನಾನಮಾಡುವಾಗ ಕುಳಿತುಕೊಳ್ಳುವ ಮಣೆ, ಅಭಿಷೇಕಪೀಠ (ವಿಭವಂ ಜನ್ಮಾಭಿಷೇಕಕ್ಕೆ ತಾನೆ ವಲಂ ಮಜ್ಜನಪೀಠಮಾದತಿಶಯಂ ಹೇಮಾದ್ರಿಗುನ್ಮುದ್ರಿತಂ: ಮಲ್ಲಿನಾಪು, ೧. ೬೪)

ಮಜ್ಜನಂಬುಗಿಸು

ಸ್ನಾನಮಾಡಿಸು (ದಿಕ್ಕರಿಗಳ್ ಅಂಬುಜ ಪತ್ರಾಂಬುವಿಂ ಬೆಡಂಗಡಸಿರೆ ಮಜ್ಜನಂಬುಗಿಪುದಂ ಸತಿ ಕಂಡೊಸೆದಳ್ ನಿಶಾಂತದೊಳ್: ಪಂಪಭಾ, ೧. ೧೪೦)

ಮಜ್ಜನಂಬುಗು

ಸ್ನಾನಮಾಡು (ಉದಿತೋದಿತನಂ ದಿಗಿಭಗಂಳೆಂಟುಂ ಒಳ್ಪೊಡರಿಸಿ ಮಜ್ಜನಂಬುಗಿಸೆ ಕಂಡುದಱಂ ಕಮಲಾಭಿರಾಮನಂ: ಪಂಪಭಾ, ೧. ೧೪೧)

ಮಜ್ಜನವಳ್ಳ

ಸ್ನಾನಮಾಡಿಸುವವನು (ಮಜ್ಜನಪೀಠಂ ಸುರಗಿರಿ ಮಜ್ಜನಜಳವಮೃತಜಳಧಿಜಳವು ಅಮರೇಂದ್ರಂ ಮಜ್ಜನವಳ್ಳನುಮೆನೆ ಜಿನಮಜ್ಜನಮಹಿಮೆಯ ಬೆಡಂಗಂ ಏವಣ್ಣಿಪುದೋ: ಆದಿಪು, ೭. ೧೦೩)

ಮಜ್ಜಾ

ನೆಣ, ಕೊಬ್ಬು (ವಿಚಳತ್ ಅಸ್ಥಿ ನಿರ್ಯತ್ ಮಜ್ಜಾ ಶುಷ್ಯತ್ ಕಂಠ ಸ್ವಿದ್ಯತ್ ವದನ ನಿಮೀಳತ್ ನೇತ್ರ ಸೀದತ್ ಗಾತ್ರ ಮುಹ್ಯತ್ ಮಾನಸ ಆಕ್ರಂದತ್ ಸ್ವರ ಪರಿಗತರ್: ಆದಿಪು, ೫. ೮೭ ವ)

ಮಟ

ಮಠ (ಮಟದೊಳಗಾ ಪೊಸ್ತಕಂ ಬೆಚ್ಚನಿರ್ಕುಂ: ಸಮಯಪ, ೧೪. ೪೭)

ಮಂಟಪ

ಓಲಗಶಾಲೆ (ಮಂಟಪಂ ಜನಾಶ್ರಯಂ: ಅಭಿಧಾವ, ೧. ೧೦. ೧೯); ದೇವತಾಮೂರ್ತಿಯಿರುವ ಕಟ್ಟಡ (ಅಪ್ರತಿಮಂಗಳಪ್ಪ ರೂವಾರದಿನಾರುಮಂ ಬಗೆಗೊಳಲ್ ಪರಿಶೋಭಿಪ ಮಂಟಪಂಗಳಿಂ: ಸುಕುಮಾಚ, ೯. ೫೮)

ಮಂಟಯ

ಸಣ್ಣ ಮನೆ (ಅಂತು ಬಂದಾ ಪಾರ್ವರ ಮಂಟಯದೊಳ್ ಕುಳ್ಳಿರ್ಪುದಾ ಸಮಯದೊಳ್ ಇಂದ್ರದತ್ತನೆಂಬ ವೃದ್ಧವೈಶ್ಯನೊರ್ವಂ .. .. ಆ ಮಂಟಯಕ್ಕೆ ಬರ್ಪುದುಂ: ಪುಣ್ಯಾಸ್ರ, ೩. ೯ ವ)

ಮಂಟಿಗೆ

ಗೆಜ್ಜೆ (ನಸುಗೆಯರಲುಂಗುರಮನುತ್ಪಳದ ಮಂಟಿಗೆಯಂ ಉಜ್ವಳಿಪ ಗೊಜ್ಜಗೆಯ ಸಜ್ಜಕದ ಚಳಕಿಗೆಯ: ರಾಜಶೇವಿ, ೧೦. ೫೭ ರಗಳೆ)

ಮಟ್ಟ

ಸಮಪ್ರದೇಶ (ಪಡೆಗಡ್ಡಮಿರ್ದ ಬೆಟ್ಟಿಟ್ಟೆಡೆ ಮಟ್ಟಮಿಱುಂಬಮೆಂಬಿವಂ ಸಣ್ಣಿಸಿ ಸಾರ್ವೆಡೆ ನಡೆವ ದಂಡರತ್ನಂ ಮುಂದೆ ನಡೆಯೆ: ಆದಿಪು, ೧೧. ೪೭)

ಮಟ್ಟಂ

ಸುಮ್ಮನೆ (ದಾರುಣ ಭಾವಮಂ ಉಪಸಂಹಾರಿಸಿ ಕಣ್ಣಱದು ಮಟ್ಟಂ ಟಣ್ಣನ ಕೆಲದೊಳ್ ವಾರಿಜನಾಭಂ ಗರುಡೋದ್ಗಾರ ಹರಿನ್ಮಣಿಯ ಕೆಲದ ಫಣಿಯವೊಲಿರ್ದಂ: ಪಂಪರಾ, ೬. ೧೪೭)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App