ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಟ್ಟನಾಗು

ಖಾಲಿಯಾಗು (ಬನದ ತಳಿರ್ ಕಳಿಕೆ ಮುಗುಳ್ ನನೆ ಬಿರಿಮುಗುಳ್ ಅಲರ ಗೊಂಚಲೆಂಬಿವು ವನಜಾನನೆಯರ ಪೂದುಡುಗೆಗೆ ಮಟ್ಟನಾದುವೇಂ ಪೆಂಪೊ ಭರತನಂತಃಪುರದಾ: ಆದಿಪು, ೧೧. ೧೨೯)

ಮಟ್ಟಂಪರಿ

ಸಲೀಸಾಗಿ ಮುಂದೆ ಸಾಗು (ತೆರೆಗಳ ಪೊಯ್ಲಂ ಸ್ಯಂದನತುರಂಗಂಗಳ್ ಮೊಗಮನೆತ್ತಿ ಬಂಚಿಸಿ ಮಟ್ಟಂಪರಿಯೆ ತೆರೆಯಿಲ್ಲದೆಡೆಯೊಳ್ ವರೂಥಮವಯವದೆ ತಡಿಯನೆಯ್ದಿದುದಾಗಳ್: ಆದಿಪು, ೧೨. ೧೨೭)

ಮಟ್ಟಮಿರ್

ಸುಮ್ಮನಿರು, ತೆಪ್ಪಗಿರು (ಪವನಜನ ಆಸ್ಯಮಲ್ತಿದು ಅವನ ಆನನಮಪ್ಪೊಡೆ ಮಟ್ಟಮಿರ್ದು ನೋಡುವುದೆ ಮದೀಯವಕ್ತ್ರಮನೆ ಕೆಮ್ಮನೆ: ಗದಾಯು, ೯. ೩೩)

ಮಟ್ಟಯಿಸು

ಸಮಗೊಳಿಸು (ಪರೀಷಹಮಂ ಬೆನ್ನಟ್ಟಿ ವಿಹಿತಮನನುಷ್ಠಿಸಿ ಮಟ್ಟಯಿಸಿದ ಕರಣಯೋಗಂ ಅಘನಿರ್ಹರಣಂ: ಮಲ್ಲಿನಾಪು, ೧೪. ೫೯)

ಮಟ್ಠೆಯ

ಏಳು ಬಗೆಯ ತಾಳಕ್ರಮಗಳಲ್ಲಿ ಒಂದು (ಧ್ರವ ಮಟ್ಠೆಯಂ ಪಡಿಮಟ್ಠೆಯಂ ಅಟ್ಟತಾಳ ಎಕ್ಕತಾಳ ರೂಪಕಂ ರಚ್ಚೆಯ ಎಂಬ ಏೞುಂ ತೆಱದ ತಾಳಕ್ರದಿಂದ: ಧರ್ಮಪ, ೨. ೨೦ ವ)

ಮಡ

ಕಾಲಿನ ಹರಡು (ಮಡದೆಡೆ ನಾಲ್ವೆರಲ್ ಅಂಗುಟದೆಡೆಯೊಳ್ ಗೇಣಾಗೆ ನಿಲ್ವುದಿಚ್ಛಾಗತಂ: ಆದಿಪು, ೯. ೮೪); ರಥದ ಚೌಕಟ್ಟು (ಕದನದೊಳಾರ್ದು ಸಾರ್ದು ಇಸೆ ಮಹಾರಥದ ಅಚ್ಚು ಸಿಡಿಲ್ದುದು ಈಸು ಸೂಸಿದುದು ಅರಗೀಲ್ ಕೞಲ್ದುದು ಮಡಂ ಕಡಿವೋದುವು: ಪಂಪರಾ, ೧೩. ೬೯); ಕಡಾಣಿ (ಮಿನುಗುವ ಕೊಂಬಿನಚ್ಚು ಕಿಱುಗೊಂಬಿನ ತಳ್ತ ಅರಗೀಲ್ ಕವಲ್ತ ಕೊಂಬಿನ ಮಡವಡ್ಡವಂದ ನಳಿಗೊಂಬಿನ ಪತ್ತುಗೆ ಜೋಲ್ವ ಬಳ್ಳಿಗೊಂಬಿನ ಬಲೆ ತೋರಗೊಂಬಿನ ನೊಗಂ ನಿಡುಗೊಂಬಿನ ಮೂಂಕು ಕಣ್ಗೆ ಚೆಲ್ವೆನೆ ನಡೆತಂದುವಂದು ಅಸುಗೆಯೆಂಬ ನೆಗೞ್ತೆಯ ತೇರ್ಗಳೆತ್ತಲುಂ: ಕಬ್ಬಿಗಕಾ, ೧೬೭)

ಮಂಡಕ

ಒಂದು ಭಕ್ಷ್ಯ, ಮಂಡಿಗೆ (ಅಲ್ಪದಶನದಂಶಮಾತ್ರ ಖಂಡನೀಯ ಮಂಡಕಮುಮಂ: ಆದಿಪು, ೧೧. ೨೬ ವ)

ಮಡಕಾಲ್

ಮಂಡಿಯಿಂದ ಕಣಕಾಲಿನವರೆಗಿನ ಭಾಗ (ಪಿಡಿಕೆಯ್ ತೀವಿದ ಕೂರ್ಗಣೆ ಮಡಕಾಲ್ವರಂ ಅಲೆವ ಕಚ್ಚೆ ನಿಡಿಯಸಿಯ ಒಱೆ ಕರ್ಪಿಡಿದ ಪಣೆಕಟ್ಟು ಕೆಯ್ಪಡೆ ಬೆಡಂಗನೊಳಕೊಳೆ ಧನುರ್ಧರರ್ ಪೆಣೆದೆಚ್ಚರ್: ಪಂಪಭಾ, ೧೦. ೭೧)

ಮಡಗಿಡು

ಜೋಪಾನವಾಗಿಡು (ಒಡವೆಯುಮಂ ಒಡಲುಮಂ ಮಡಗಿಡದೆ ಅಂತವನೆಯ್ದಿ .. .. ತವಿಸುವವಂ ಪಡೆವುದು ಪಿರಿದಾಯ್ತೆ ಪರಮಸೌಖ್ಯಾಸ್ಪದಮಂ: ಸಮಯಪ, ೧೫. ೮೮)

ಮಡಗು

ಇರಿಸು, ಗೋಪ್ಯವಾಗಿಡು (ಅಂತು ಕೆಯ್ಕೊಂಡು ಅನಂತರಂ ಕಂತು ತನ್ನ ಮಾಯಾಪಡೆಯಂ ಮಡಗಿ ಪಡಲಿಟ್ಟು: ಕರ್ಣನೇಮಿ, ೭. ೧೭೯ ವ)

ಮಡಗೂೞ್

ಎಂಜಲನ್ನ, ಉಚ್ಚಿಷ್ಟ (ಈತನೊಳ್ ತೊಟ್ಟ ಕಿಂಕರಭಾವಂ ಎಮಗಕ್ಕಿಗೊಟ್ಟು ಮಡಗೂೞುಣ್ಬಂದಮಂ ಪೋಲದೇ: ಆದಿಪು, ೧೪. ೩೨)

ಮಂಡಗೆ

ಮಂಡಕ (ಪೂರಿಗೆ ಇಡ್ಡಲಿಗೆ ಸೋದಿಗೆ ಲಾವಣಿಗೆ ಘೃತಪೂರಂ ಲಡ್ಡುಗೆ ಮಂಡಗೆ ಮೊದಲಾಗೊಡೆಯ ಪದಿನೆಂಟುಂ ತೆಱದ ಭಕ್ಷ್ಯರೂಪಂಗಳುಮಂ: ವಡ್ಡಾರಾ, ಪು ೭೮ ಸಾ ೧೬)

ಮಂಡನ

ಅಲಂಕಾರ (ಮೆಯ್ಯಿಂ ಮಂಡನಾಳಂಕರಣವಚನದಿಂ ವೃತ್ತವಕ್ಷೆಜದಿಂ ಸತ್ಪದದಿಂದೊಪ್ಪಿರ್ದ ವಾಕ್ಸುಂದರಿ ಪರಮ ವಚೋವೃದ್ಧಿಯಂ ಮಾಡುಗೆಮ್ಮೊಳ್: ಸುಕುಮಾಚ, ೧. ೭)

ಮಂಡನವಿಧಿ

ಅಲಂಕರಿಸುವ ಕೆಲಸ (ಉಪ್ಪವಡಿಸಿ ಮಜ್ಜನ ಮಂಡನವಿಧಿಯಂ ಲತಾಂಗಿ ನಿರ್ವರ್ತಿಸಿ ಭೂಮಂಡಳಪತಿಗಱಪಿದೊಡೆ: ಆದಿಪು, ೭. ೨೮); ಆಭರಣ (ಮಂಡನಂ ವಿಭೂಷಾಪ್ರತಾನ ಆಭರಣಂ ಎಂಬಿವು ತೊಡವಕ್ಕುಂ: ಅಭಿಧಾವ, ೧. ೧೩. ೧)

ಮಂಡನಾಯೋಗ

ಆನೆಯ ಮೇಲೆ ಅಲಂಕಾರಕ್ಕಾಗಿ ಹಾಕುವ ಜೂಲು (ಮಣಿಮಯ ಮಂಡನಾಯೋಗದೊಳ್ ಒಡಂಬಟ್ಟ ಪಿಡಿಗಳುಮಂ: ಆದಿಪು, ೪. ೫೪ ವ)

ಮಂಡನೀಭೂತ

ಅಲಂಕೃತಗೊಂಡ (ವಿದ್ಯಾಮಂಡಪ ಮಂಡನೀಭೂತ ಜಗತ್ಯಾಗ್ರ ಸಿಂಹಾಸನದೊಳ್ .. .. ಅಳಂಕರಿಸಿರ್ಪುದುಂ: ನೇಮಿನಾಪು, ೬. ೩೯ ವ)

ಮಂಡಪ

ದೇವಾಲಯದ ಸಭಾಮಂಟಪ (ಜಿನಮಂದಿರದ ಮುಂದಣ ಮಂಡಪದೊಳ್ ನಿಂದಿರ್ಪುದುಂ: ಶಾಂತಿಪು, ೯. ೮೭ ವ); ಓಲಗಶಾಲೆ (ಎಸೆವ ಪವಡಿಸುವ ಮನೆ ಚಿತ್ರಸಾಲೆ ಸುರತಾಲಯ ಮಹೀಗೃಹಂ ಆರೋಗಿಸುವ ಮನೆ ಮಂಡಪಂ ಗುಣಣಸಾಲೆ ಎಂಬಿನಿತುಮಂ ಗೃಹಾಂಗಂ ಕುಡುಗುಂ: ಶಾಂತಿಪು, ೬. ೧೧೬)

ಮಡಂಬ

ಐನೂರು ಹಳ್ಳಿಗಳಿಂದ ಸುತ್ತುವರಿದ ನಗರ (ಪಂಚಶತಗ್ರಾಮ ಪರೀತಂಗಳಪ್ಪ ಮಡಂಬಂಗಳುಮಂ: ಆದಿಪು, ೮. ೬೩ ವ)

ಮಡಮೇಱಸು

ಹಿಮ್ಮಡಿಗೆ ಕಟ್ಟು (ತಳಿರೆಕ್ಕವಡಮಂ ಮಡಮೇಱಸಿ ಕೈಗೊಟ್ಟು ಮಯೂಖನಿರ್ಝರಗಿರಿಯಿಂದಂ ಇೞಪಿ .. .. ಕುಸುಮಾಕರೋದ್ಯಾನಮಂ ಪುಗಿಸಿ: ಲೀಲಾವತಿ, ೧೦. ೯೭ ವ)

ಮಂಡಲ

ರಾಜ್ಯದ ಭಾಗ (ಇತ್ತುಂ ತೆತ್ತುಂ ಬಾೞ್ವ ಮಂಡಲಮಲ್ಲದೆ ಕೀಱಯುಂ ಮೀಱಯುಂ ನೆಗೞ್ವ ಮಂಡಲಮಿಲ್ಲ: ಪಂಪಭಾ, ೬. ೬೭ ವ); ಕುಷ್ಠ ರೋಗ (ಮಂಡಲಮಕ್ಕುಂ ಕುಷ್ಠಂ: ಅಭಿಧಾವ, ೧. ೧೨. ೩೬); ಗುಂಪು (ಆಗಳವರ ಮಸಕಮಂ ಕಂಡಟು ಭಯಂಗೊಂಡು ಖಚರಮಂಡಲಂ ಪ್ರಭಾಮಂಡಲಂಗೆ ಕನ್ನೆ ಕೈಸಾರ್ದಳೆಂದು ಪೆಱಸಾರ್ದು ನೋಡುತಿರ್ಪುದುಂ: ಪಂಪರಾ, ೫. ೭೫ ವ)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App