ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಂಡಲಂಗೊಳ್ಳು

ಸುರುಳಿಯಾಗಿ ಸುತ್ತಿಕೊ, ಸುತ್ತುಹಾಕು (ಪೆರ್ಬಾವಿನಂತೆ ಮಂಡಲಂಗೊಳ್ಳುತ್ತುಂ ಜಾವದ ಕಾಪಿನವರಂತೆ ಏೞುತ್ತುಂ ಜಂಘಾಮಿಲ್ಲದನಂತೆ ಕುಳ್ಳಿರುತ್ತುಂ: ಧರ್ಮಾಮೃ, ೧, ೧೨೪ ವ)

ಮಂಡಲಾಗ್ರ

ತುದಿಯಲ್ಲಿ ಬಾಗಿದ ಕತ್ತಿ, ಅಡಾಯುಧ (ಸುತಾರೆಯಂ ಅಂಜಲಂಜಲ್ ಎಂದು ಮಂಡಲಾಗ್ರಮಂಡಿತ ದೋರ್ದಂಡರೆಂ ಆಗಿ ಪೋಗಿ ಪಗೆವನೊಳ್ ತಡೆಯದೆ ತಾಗುವ ಎಮ್ಮ ರಭಸಮಂ ಕೇಳ್ದು: ಶಾಂತಿಪು, ೬. ೩೩ ವ); ಗದಾಯುದ್ಧದಲ್ಲಿನ ಒಂದು ವರಸೆ (ಆಲೀಢ ಪ್ರತ್ಯಾಲೀಢ ಸಮಪಾದ ವೈಷ್ಣವ ಮಂಡಲಾಗ್ರಮುಮೆಂಬ ಪಂಚವಿಧ ಸ್ಥಾನಂಗಳೊಳಂ .. .. ನಿಂದು: ಗದಾಯು, ೮. ೧ ವ)

ಮಂಡಲಾಧೀಶ

ಮಂಡಲದ ಒಡೆಯ, ರಾಜ (ಸೇನಾಶಕ್ತಿಯಿಂದೋಲಗಿಸುವ ನೃಪರಿಂ ಓಲಗಿಸುವ ನೃಪರಿಂ ಮಂಡಲಾಧೀಶರಿಂ ದೋರ್ಬಲವದ್ದಂಡೇಶರಿಂದುರ್ಬಿಸುವ ಪೆಸರ ಸಾಮಂತರಿಂ: ಕುಸುಮಾಕಾ, ೩. ೨೨)

ಮಂಡಲಿ

ಗುಂಪು (ಮರೆವಿಂಡು ಬೆಕ್ಕು ಮುಂಗುರಿ ಮುಸಲವ್ರಜಂ ಕರಡಿ ಮಂಡಲಿ: ಗಿರಿಜಾಕ, ೧. ೭೩)

ಮಡಲಿಡು

ವ್ಯಾಪಿಸು (ವನಮೆಯ್ದೆ ಸೇವ್ಯಮಾಯ್ತವನಿಗೆ ಕೂಡೆ ಬೇರ್ಪರಿದ ಸಾಲ್ ಮಡಲಿಟ್ಟ ಕರ್ವ್ವು ಒಲ್ಲವಿದಿ ಅಶೋಕಂ: ಆಚವರ್ಧ, ೨. ೧೬)

ಮಡಲ್

ಕೊಂಬೆ (ಒಡಲಂ ಸಂಸೃತಿಲತಿಕೆಯ ಮಡಲಂ ಬಹುದುಃಖಬಹಳಲಹರಿಕೆಗಳ ಪೆರ್ಗಡಲಂ: ಪುಷ್ಪದಂಪು: ೧೩. ೩೩); ಹಬ್ಬುವುದು (ನಿಲ್ತುವು ರಸಂಗಳಿಲ್ಲಿ ಮಡಲ್ತು ಎನೆ ಭಂಗಿಯೊಳ್ ಅನಂಗಜಂಗಮಲತೆವೊಲ್ ನಿಲ್ತು: ಆದಿಪು, ೯. ೨೦); ವಿಸ್ತಾರ; ಸೋಗೆ (ಅಂಕುರವೊತ್ತಿ ಬೆಳೆಯುತ್ತಿರ್ದ ಕರ್ಬಿನ ಮಡಲ್ಗಳುಮಂ: ಪಂಚತಂತ್ರ, ೧೯೦ ವ)

ಮಡಲ್ಗೊಳ್

ವ್ಯಾಪಿಸು (ಮಡಲ್ಗೊಂಡ ಮಲ್ಲಿಗೆಯ ಮಂಡವಿಗಳೊಳಂ ಸಂಪಗೆಯ ಜೊಂಪದ ಚಂಪೆಯದೊಳಂ: ಕಬ್ಬಿಗಕಾ, ೧೮೪ ವ)

ಮಂಡವ

ಬಳ್ಳಿ ಹಬ್ಬಿಸಲು ಮಾಡಿದ ಚಪ್ಪರ (ಬಳಸಿದ ಬಳ್ಳಿಮಲ್ಲಿಗೆಯ ಮಂಡಪದೊಳ್ ಸುೞದಾಡಿ ಮತ್ತೆಯುಂ ಕಳೆಯಲಿನಿತ್ತುಮಾಱದವಳುರ್ಬಿದ ತನ್ನಯ ಮೆಯ್ಯ ಬೆಂಕೆಯಂ: ಕಬ್ಬಿಗಕಾ, ೨೪೭)

ಮಂಡವಿ

ಮಂಟಪ (ಮಡಲ್ಗೊಂಡ ಮಲ್ಲಿಗೆಯ ಮಂಡವಿಗಳೊಳಂ ಸಂಪಗೆಯ ಜೊಂಪದ ಚಂಪೆಯದೊಳಂ.. ..ಬಿಟ್ಟ ಬೀಡು: ಕಬ್ಬಿಗಕಾ, ೧೮೪ ವ)

ಮಂಡವಿಗೆ

[ಮಂಟಪಿಕಾ] ಸಣ್ಣ ಮಂಟಪ, ವಿತಾನ (ಚಿತ್ತಜನೃಪಂಗೆ ಚೈತ್ರಂ ಮುತ್ತಿನ ಮಂಡವಿಗೆಯಂ ವಿಚಿತ್ರದೆ ಸಮೆದಂತೆತ್ತಿದನೆನೆ ಮಿಗೆ ತಳ್ತದಿರ್ಮುತ್ತೆ ಮುಗುಳ್ತೆಸೆಯುತ್ತಿರ್ದುದು ಅತ್ತೊಂದೆಡೆಯೊಳ್: ಶಾಂತೀಶ್ವಪು, ೧೦. ೯೭)

ಮಡವಿಡು

(ಮಿಱುಪ ತದೀಯ ಚಿತ್ರಪಟಮಂ ತೆಗೆದಾಂ ಮಡವಿಟ್ಟೊಡೆ ಅಲ್ಲಿಕಣ್ದೆಱೆದು ಮದಾಲಸಾಕ್ಷಿಗಳನೀಕ್ಷಿಸಿ ಕಾಣದೆ ಏನುಮಂ: ಕುಸುಮಾಕಾ. ೧೨. ೧೨೩)

ಮಡಸನ್ನೆ

ಸವಾರಿ ಕಾಲದಲ್ಲಿ ಕುದುರೆಯನ್ನು ಹಿಮ್ಮಡಿಯಿಂದ ತಿವಿದು ಚೋದಿಸುವುದು (ಮಡಸನ್ನೆ ಮನದೊಳ್ ಅಂಕುರಿಸುವಲ್ಲಿ ಮುನ್ನಂ ಪರಿದು ಶರಧಿಯನೆಡಗಲಿಪ .. .. ವಾಘೆಗಳವಟ್ಟು: ಗಿರಿಜಾಕ, ೬. ೫೫ ವ)

ಮಂಡಳ

ಸೂರ್ಯನ ಸುತ್ತಲಿನ ಪರಿವೇಷ (ಕಿರಣಮುಮಂ ಮಂಡಳಮಂ ಖರಕರನಂ .. .. ಪೊಗೞ್ದೊಡೆ ಎಮಗಮೀಗುಮೆ ಬರಮಂ: ಸಮಯಪ, ೯. ೧೯); ಬಿಂಬ (ಬಿಂಬಂ ವಳಯಂ ಮಂಡಳಂ ಎಂಬಿವಭಿನ್ನಾಥರ್ಥಂ: ಅಭಿಧಾವ, ೧. ೧. ೭೦)

ಮಂಡಳಾವರ್ತನ

ಗದೆಯನ್ನು ಗುಂಡಾಗಿ ಚಕ್ರದಂತೆ ತಿರುಗಿಸುವುದು (ಸವ್ಯಾಪಸವ್ಯ ಭ್ರಾಂತೋದ್ಭ್ರಾಂತ ಕರ್ಷಣ ಮಂಡಳಾವರ್ತನಾದಿಗಳಪ್ಪ ಮೂವತ್ತೆರಡು ಗದಾವಿಕ್ಷೇಪದೊಳಂ: ಪಂಪಭಾ, ೧೩. ೯೨ ವ)

ಮಂಡಳಿಕ

ಸಾಮಂತ (ನಕುಳನುಂ ತೆಂಕಣ ದೆಸೆಯ ಮಲೆಪರಂ ಮಂಡಳಿಕರುಮಂ ಅಸಿಯರಾಗೆ ಕವರ್ದುಕೊಂಡು ಲಂಕೆಯ ಮೇಗೆ ನಡೆದು: ಪಂಪಭಾ, ೬. ೩೨ ವ)

ಮಂಡಳಿಗೊಳ್

ಗುಂಪುಗೂಡು (ಮಂಡಳಿಗೊಂಡು ಸಿಂಪಿಸುವ ಕುಂಕುಮವಾರಿಯ ಚೆಂಚಗೆಂಚು ಕೈಗೊಂಡು ವಿಲಾಸಿನಿಯರ್ಕಳ ದೇಸೆ: ಅನಂತಪು, ೭. ೩೦)

ಮಂಡಳಿಸು

ವೃತ್ತಾಕಾರವಾಗಿ ತಿರುಗು (ತುಱುಗಿರ್ದ ಬಲ್ಮಿಡಿಯ ತೂಗುಂಗೊಂಬಿನೊಳ್ಪಾಯ್ದು ಮಂಡಳಿಸುತ್ತಿರ್ಪ ಶುಕಾಳಿ: ಆದಿಪು, ೧೧. ೯೬)

ಮಡಿ

ತಿರಿ, ಕೀಳು (ಮಡಿದು ತಂದಿಟ್ಟ ಪೊಸನೆಯ್ದಿಲ ಕಾವನಾವಗಂ ಗೆಲ್ದ ರತ್ನಕುಂಡಲಂಗಳ ಪೊಳಪನೊಳಕೊಂಡಂತೆ ನಸುನೇಲ್ವ ಕರ್ಣಾಟೀ ಕರ್ಣಪೂರನ ಪಾಲೆಗಳುಂ ಸರಸ್ವತಿಯಾಡುವ ಲೀಲಾಂದೋಳದಂತಾದುವು: ಪಂಪಭಾ, ೨. ೩೯ ವ); ಪಾತಿ (ಮಡಿಗಳೊಳಗಲರ್ದ ನೆಯ್ದಿಲ ಕಡುಗಂಪುನಿವಱ ಕಂಪು ಗೆಲ್ದುವು ಸಾಸಿರ್ಮಡಿ ಎನೆ ಪೊಂಬಣ್ಣದ ಕೆಂಪಿಡಿದಿರೆ ಸೊಗಯಿಪುವು ಗಂಧಶಾಳಿವನಂಗಳ್: ಆದಿಪು, ೧. ೬೦); ಸಾಯು (ಮಡಿ ಮರಣೇ: ಶಬ್ದಮದ, ಧಾ ೩೪೨); ಒಗೆದ ಬಟ್ಟೆ (ಒಗೆಯುತ್ತುಮಿರ್ದ ಮಡಿವಳನ ಮುಂದಣ ಮಡಿಯುಮಂ ತನ್ನೊಡನೆಯ ಗೋವಳಿಗರುಟ್ಟ ಮೈಲಗೆಯುಮಂ ಮಧುಸೂದನಂ ಕಂಡು: ನೇಮಿನಾಪು: ೮. ೭೫ ವ); ಜಮೀನಿನ ಭಾಗ (ಕೞವೆಯ ಮಡಿಗಳ ಬೞವಿಡಿದು ಬೆಳೆದ ಚೆಂಗಣಿಗಿಲೆಯ ಕಂಪಿನೊಳ್ ಪೊರೆದು: ಕಬ್ಬಿಗಕಾ, ೪೫ ವ); ಮುದಿರು (ನಾಲಗೆ ಮಡಿದುದು ಎನುತ್ತಿಂತು ಪೇೞುತ್ತಿರಲ್: ಕಾದಂಸಂ, ೧. ೨೭); ಮಡಿಸು, ಬಾಗಿಸು (ಎನ್ನ ಎಡಗೈಯ ಕಿಱು ಕುಣಿಕೆಯ ಮಡಿಯೊತ್ತಿರೆ ನೋೞ್ಪೆಮೆಂದು ನೀಡಿದ ಬೆರಲಂ: ಹರಿವಂಶ, ೧೩. ೨೦)

ಮಂಡಿತ

[ಅಧಿಕಾರಕ್ಕಾಗಿ] ನೆಲೆಗೊಳಿಸಿದ (ಶೌರ್ಯಾವಷ್ಟಂಭದಿಂ ಆಳ್ದವನಾಂ ಷಟ್ಖಂಡಮಂಡಿತ ಕ್ಷಿತಿತಳಮಂ: ಆದಿಪು, ೧೩. ೭೬)

ಮಡಿಪು

ಕೊಲ್ಲು (ಪ್ರಾಣಿಗಳಂ ಮಡಿಪದೆ ನೋಯಿಸದೆ ಕಾವುದೆಂಬಂ ಜೈನಂ: ಸಮಯಪ, ೫. ೬)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App