ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಡಿಮಡಿಗೆ

ಬಾರಿಬಾರಿಗೂ (ಮಡಿಮಡಿಗುಱುವುದುಂ ಒಂದು ಪತ್ತೆಂಟು ಪಲಗೆಯಂ ಮೆೞ್ಪಡಿಸಲೆಂದು ಸೋಲ್ತು ಸೋಲದೊಳೇವಯಿಸಿಯಿನ್ನೊಡ್ಡಂ ಕೊಳ್ಳಿಂ ಎಂದು: ಪಂಪಭಾ, ೬. ೭೧ ವ)

ಮಡಿಯಿಸು

ಸಾಯಿಸು (ಮುಡಿಯಂ ಪಿಡಿದೆೞೆದವನಂ ಮಡಿಯಿಸಿ ಮತ್ತವನ ಕರುಳ ಪಿಣಿಲಿಂದೆನ್ನ ಮಡಿಯಿಸುವಿನೆಗಂ ಮುಡಿಯಂ ಮುಡಿಯೆಂ: ಪಂಪರಾ, ೭. ೧೦)

ಮಡಿವರ್ಗ

ಒಗೆದ ಬಟ್ಟೆಗಳ ರಾಶಿ (ಮುಱದಿಕ್ಕಿ ಸುಬ್ಬರಸೂಱೆಯಾಗೆ ಮಡಿವರ್ಗಮಂ ಗೋವರ್ಕಳ್ಗೆ ಸೂಱೆಗೊಟ್ಟಸಗವೊೞೆಯಂ ಪುಯ್ಯಲಿಡಿಸೆ: ನೇಮಿನಾಪು, ೧೦. ೮೦ ವ)

ಮಡಿವಳ್ತಿ

ಅಗಸಗಿತ್ತಿ (ನಡೆಯಿಪರನುಲೇಪನಮಂ ಮಡಿಯಂ ಮಾಲೆಯಂ ಅಮರ್ತ್ಯಲೋಕದವಂ ತಂದೆಡೆವಿಡದೆ ಘಟ್ಟಿವಳ್ತಿಯ ಮಡಿವಳ್ತಿಯ ಮಾಲೆಗಾರ್ತಿಯಂದದಿನರೆಬರ್: ಚಂದ್ರಪ್ರಪು, ೧೦. ೧೩೩)

ಮಡಿವಳ್ಳ

ಅಗಸ (ಎಡಮಡಗದೆ ಸಂದಿಸಿ ಮೀವ ಉಡುವ ತುಱುಂಬುವ ಜಲಾಂಬರಸ್‌ಕ್ತತಿಯಿಂ ನಡೆದರ್ ಮಜ್ಜನವಳ್ಳರ ಮಡಿವಳ್ಳರ ಮಾಲೆಗಾಱರಂದದೆ ದಿವಿಜರ್: ಅಜಿತಪು, ೫. ೯೩)

ಮಡಿವು

ಸಾವು (ನಿನಗಾದುದು ಇಂದು ಈ ಕೊಳೆಯಂಬಿನೊಳ್ ಈ ಕಾನನದ ಹೀನಂ ಇಸೆ ಮಡಿವಾಯ್ತೇ: ಕರ್ಣನೇಮಿ, ೧೪. ೧೦೦)

ಮಡು

ಬಿಗಿಯಾಗಿಡು (ಮಡು ದೃಢಸಂಧಾನೇ: ಶಬ್ದಮದ, ಧಾ ೩೪೩); ನದಿಯ ಆಳವಾದ ಜಾಗ (ಪಾವುಗಳಂ ಕೊಳಿಸಿ ಮಹಾಗ್ರಾವಮಂ ಉಱದೆ ಅಡಸಿ ಕಟ್ಟಿ ಕೊರಲೊಳ್ ಗಂಗಾದೇವಿಯ ಮಡುವಿನೊಳ್ ಅೞದರ್ ಏವಯಿಸದೆ ತಮ್ಮ ಕುಲಮಂ ಅಡಿಗೞ್ದುವವೋಲ್: ಪಂಪಭಾ, ೨. ೩೨); ಕೊಳ (ಧ್ಯಾನದೊಳ್ ಅಭವಂ ನೆಱೆದು ಇನಿಸಾನುಂ ಅರೆಮುಚ್ಚಿ ಕಣ್ಗಳಂ ನಿಶ್ಚಳಿತಂ ತಾನಿರ್ದು ಮಱೆದು ಕೆಂದಿದ ಮೀನಂ ತಳ್ತಾಡದಿರ್ದ ಮಡುವಂ ಪೋಲ್ತಂ: ಪಂಪಭಾ, ೮. ೧೩)

ಮಡುಗೊರ್ವು

ತುಂಬಿಕೊಂಡಿರುವುದು (ಪೊಳೆವ ತನುಚ್ಛಾಯೆ ಮೆಯ್ವೆರ್ಚಿ ಕೆಚ್ಚಲ್ ಮಡುಗೊರ್ವಂ ತಾಳ್ದಿ: ಶಾಂತೀಶ್ವಪು, ೩. ೮೮)

ಮಡುಗೊಳ್

ತುಂಬಿಕೊಳ್ಳು (ಅಡರ್ದೇಱ ಕೋಡಗಂಗಳ್ ಕಡುಪಿಂದೀಡಾಡುವ ಘೞಲನೊಡೆzದ ಎಳಗಾಯಿಂದೆ ಎಡೆವಿಡಿದೊಸರ್ವೆಳನೀರ್ಗಳ್ ಮಡುಗೊಂಡೋವುತ್ತುಂ ಇರ್ಪುವಲ್ಲಿಯ ಬನಂ; ಕಬ್ಬಿಗಕಾ, ೨೧)

ಮಂಡೂಕ

ಕಪ್ಪೆ (ಮಂಡೂಕಬಹಳಮಂ ಖರ ದಂಡೋತ್ಪಲ ಕುಮುದರಾಜಿರಂಜಿತಮಂ ಕಾ ರಂಡಕಳಹಂಸಷಟ್ಪದಮಂಡಿತಮಂ ಕಂಡುದೊಂದು ಕೊಳನಂ ಸರ್ಪಂ: ಪಂಚತಂತ್ರ, ೩೮೩)

ಮಂಡೆ

ತಲೆ (ಉತ್ಸುಕತನದಿಂ ಪೆಟ್ಟುವೆರ್ಚಿ ಕಡುವೆಸನಂ ಮಾೞ್ಪ ಸೊಸೆ ಮಾವನ ಮಂಡೆಯಂ ಬೋೞಸಿದಳ್ ಎಂಬಂತೆ: ಧರ್ಮಾಮೃ. ೬. ೩೪ ವ); ತಲೆಬುರುಡೆ (ಬೆನ್ನನೇಱ ಮಂಡೆಯ ಚೆಂಡಿಕೆಯಂ ಕರ್ಚಿ ಸೆಳೆದ ಸೋಗೆಯ ಮಱೆಯ ಮುದ್ದುತನಮಂ .. .. ಮುಂಡಾಡುತುಂ: ನೇಮಿನಾಪು, ೧. ೯೨ ವ)

ಮಣಕು

ಕಮಟುವಾಸನೆ (ಆವ ಜಾತಿ ಅದಾರೆಂದಱಯದೆ ಮಿಂದು ಮುೞುಂಕಿಯುಂ ಅಱಯದ ಮಣಕಿನ ಬಣಂಬೆಗೆ ಆನೆಱಗುವೆನೇ: ಯಶೋಧಚ, ೪. ೪೯)

ಮಣಲ್

ಮರಳು (ಚೈರಂತನಕ್ರಮದಿಂದೆ ಆ ಮಣಲೆಲ್ಲಮಂ ಮಗುಳೆ ಪಾರಾವಾರದೊಳ್ ಪೊಯ್ದು ಮತ್ತಮದಂ ಸೋದಿಸಿ ಕಾಣ್ಬವೊಲ್ ನೃಗತಿ ನೋಡಲ್ ನಾಡೆಯುಂ ದುರ್ಲಭಂ: ಸುಕುಮಾಚ, ೫. ೩೩)

ಮಣಲ್ದಿಂಟೆ

ಮರಳ ದಿಬ್ಬ (ವೈತರಣಿಯ ಪಿರಿಯ ದರಿಯಂ ಮೆಟ್ಟಿ ನುಣ್ಲಣಲಂ ಮಣಲ್ದಿಂಟೆಗೆತ್ತು ಅದಱ ಪರಿತಪ್ತ ಲೋಹರಜಸ್ಸಿಕತಿಳತಳದೊಳ್ ಮೇಯ್ಯನೀಡಾಡುವುದುಂ: ಶಾಂತಿಪು, ೭. ೯೧ ವ)

ಮಣಿ

ನಮಿಸು ರತ್ನ (ಮಣಿ ನಮನೇ: ಶಬ್ದಮದ, ಧಾ ೩೭೮); ಹೆದರು (ಅಂತಣಿ ಮಣಿಯದೆ ಸೆಣಸಿ ಪೊಣರ್ದು ಕಿಱದು ಪೊೞ್ತು ಕಾದಿ ನಿಂದಾಗಳ್: ಪಂಪಭಾ, ೧೦. ೮೫ ವ); ಸೋಲು (ಉಗ್ರಮಾರ್ಗಣಂ ಆ ವೀರನಿನಾದ ಸಿಂಹನಿನದಂ ತಮ್ಮಂ ಪಳಂಚಲ್ಕೆ ತತ್ಫಣಿವೃಂದಂ ಮಣಿದೋಡೆ: ಆದಿಪು, ೧೩. ೬೭); ರತ್ನ (ಮಣಿಮೌಕ್ತಿಕ ನೀಳಸ್ಥೂಳಶಿಲಾಪ್ರವಿಭಾಸಿತ ಉತ್ತುಂಗಮಂ ಮುನಿಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರಪೂತಾಂಗಮಂ ನೃಪನೆಯ್ದಿದಂ ಉದ್ಯತ್ ಶೃಂಗಮಂ ಶತಶೃಂಗಮಂ: ಪಂಪಭಾ, ೧. ೧೧೫); ಹೆದರು (ಅಂತಣಿ ಮಣಿಯದೆ ಸೆಣಸಿ ಪೊಣರ್ದು ಕಿಱದು ಪೊೞ್ತು ಕಾದಿ ನಿಂದಾಗಳ್: ಪಂಪಭಾ, ೧೦. ೮೫ ವ); ಬಾಗು (ಮಣಿಕುಂಡಲಂ ಕವಚಂ ಮಣಿಯದ ಚಾರಿತ್ರಂ ಉಗ್ರತೇಜಮುಂ ಈ ಒಳ್ಗುಣಮುಂ ಕಲಿತನಮುಂ ಇವೇಂ ಪ್ರಣತಾರೀ ಸೂತಸುತನೊಳ್ ಒಡವುಟ್ಟುಗುಮೇ: ಪಂಪಭಾ, ೧೨. ೯೮)

ಮಣಿಕ

ಮೊದಲ ಕರು ಹಾಕಿದ ಹಸು (ಪೊಸನಸೆಯ ಸೊವಡನಘ್ರಾಣಿಸಿ ಮಣಿಕದ ಮಿಡುಕುಗಚ್ಚೆಯೊಳ್ ಮೊಗವೆತ್ತು ಎಸೆದುದು ವೃಷಂ: ಲೀಲಾವತಿ, ೫. ೯೩)

ಮಣಿಕಟಕ

ರತ್ನದ ಕಟಕ ಹಾಗೂ ಸಾನು ಪ್ರದೇಶ (ಮಣಿಮಕುಟಂ ಶಿಖರಂ ಲಂಬಣಿಗೆಯ ಪೊಸಮುತ್ತು ನಿರ್ಝರಂ ಮಣಿಕಟಕಂ ಮಣಿಕಟಕಮಾಗೆ ತದ್ಗಿರಿಗೆಣೆಯಾದಂ ತನ್ನ ಪೆಸರೊಳಂ ವಿಜಯಾರ್ಧಂ: ಆದಿಪು, ೧೩. ೧೩)

ಮಣಿಕುಟ್ಟಿಮ

ರತ್ನಖಚಿತ ನೆಲಗಟ್ಟು (ರಂಜಿಸೆ ಚರಣಾಲಕ್ತಕ ರಂಜನೆ ಮಣಿಕುಟ್ಟಿಮಂಗಳಂ: ಆದಿಪು, ೮. ೧೮)

ಮಣಿಕುಂಡಲ

ರತ್ನಖಚಿತವಾದ ಕವಚ (ಒಡವುಟ್ಟಿದ ಮಣಿಕುಂಡಲಂ ಒಡವುಟ್ಟಿದ ಸಹಜಕವಚಂ ಅಮರ್ದಿರೆ ತನ್ನೊಳ್ ತೊಡರ್ದಿರೆಯುಂ ಬಂದಾಕೆಯ ನಡುಕಮಂ ಒಡರಿಸಿದನಾಗಳ್: ಪಂಪಭಾ, ೧. ೯೫)

ಮಣಿಗಣ

ರತ್ನದ ರಾಶಿ (ಚಳತ್ ಅನಿಳ ಆಹತ ಕ್ಷುಭಿತ ಭಂಗುರತುಂಗತರಂಗಮಾಳಿಕಾವಳನ ಸಮುಚ್ಚಳತ್ ಮಣಿಗಣ ಆತ್ತ ಮರೀಚಿಲತಾಪ್ರತಾನಸಂವಳಿಯಿತ: ಪಂಪಭಾ, ೪. ೨೫)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App