ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456789105106Next >

ಮಕರ

ಮೊಸಳೆ, ಮೀನು (ನನೆಯಂಬಂ ಮಿಗೆ ಕಣ್ಮಲರ್ ಮಕರಮಂ ಕ್ರೋಡಧ್ವಜಂ ಪೋಲೆ ಕರ್ಬಿನ ಬಿಲ್ಲಂ ಗೆಲೆ ಪುರ್ಬು.. .. ನೂತನಕಂದರ್ಪಂ: ಗದಾಯು, ೧. ೬); ತಿಮಿಂಗಿಲ (ಕರಿಮಕರಾಹತಿಯಿಂ ಬಿರಿದಳಱುವ ಭೈತ್ರದಂತೆ ವಿವಿಧಾಯುಧ ದಂತುರಿತಂಗಂಳೞದುವಾ ಸಂಗರಜಳನಿಧಿಯೊಳ್ ವರೂಥ ಕರಿ ನಿಕರಂಗಳ್: ಪಂಪಭಾ, ೧೩. ೩೫)

ಮಕರಕುಂಡಲ

ಕಿವಿಯ ಕಡಕು (ಮಕರಕುಂಡಲ ಮಣಿಪ್ರಭಾ ರಕ್ತಗಂಡಮಂಡಲನುಂ .. .. ಮಹಾನುಭಾವಂ: ಕಾದಂಬ, ೫. ೧೮೩ ವ)

ಮಕರಕೇತು

ಮೀನಧ್ವಜ, ಮನ್ಮಥ (ಸಕಲ ಜಗಜ್ಜನಂ ಮಕರಕೇತು ಗೆಲೆ ಮದನನೃಪನ ನಾಟಕ ವಿಜಯಾನಕರವದಂತೆಸೆಗುಂ ಕ್ಷೀಬಕೀರ ಮತ್ತಾಳಿ ಪರಭೃತಪ್ರಭವರಂ: ಅಜಿತಪು, ೬. ೧೦)

ಮಕರತೋರಣ

ಮೀನಿನ ಆಕಾರದ ತೊರಣ (ರಂಜಿಕುಂ ಮಕರತೋರಣಮೀಕ್ಷಣ ಸೌಖ್ಯಕಾರಣಂ: ಪುಷ್ಪದಂಪು, ೨. ೯೧)

ಮಕರಂದ

ಹೂವಿನ ಬಂಡು (ನಂದನನಾ ಪ್ರಸವಪ್ರಭೂತಮಕರಂದಾಮೋದಮಂ ತಂದು: ಸುಕುಮಾಚ, ೪. ೪೫)

ಮಕರಧ್ವಜ

ಮಕರಕೇತು (ಅಂತಾ ಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟ ಎಳವಾಳೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತಿರ್ದಳ್: ಪಂಪಭಾ, ೫. ೧೦ ವ)

ಮಕರಪತ್ರ

ದೇಹದ ಮೇಲೆ ಬರದುಕೊಳ್ಳುವ ಅಲಂಕಾರ ಚಿತ್ರ (ಸುರುಚಿರ ಮೌಕ್ತಿಕ ಹಾರಾಂದೋಳ ಮಕರಪತ್ರಾಂಕಿತ ಪೀನಪಯೋಧರಮುಂ: ತ್ರಿಷಷ್ಟಿಪು, ೧೮. ೫೪ ವ)

ಮಕರಮಸ್ತಕಭೂಮಿ

ಮಕರವ್ಯೂಹದ ತಲೆಬದಿಯ ಜಾಗ (ಕೌರವಬಲದ ಒಡ್ಡಣದ ನಾಯಕರಿವರಾರೆಂದು ಬೆಸಗೊಳೆ ಮಕರಮಸ್ತಕಭೂಮಿಯೊಳ್ ಯುದ್ಧಸನ್ನದ್ಧನಾಗಿ: ಪಂಪಭಾ, ೧೦. ೫೩ ವ)

ಮಕರವ್ಯೂಹ

ಮೊಸಳೆಯಾಕಾರದ ಸೈನ್ಯವ್ಯೂಹ (ಮಕರವ್ಯೂಹಮನೊಡ್ಡಿ ನಿಂದನಸುರಂ .. .. ತದ್ವೈಹಮಂ ನೋಡಿ ಸಮ್ಮುಖದೊಳ್ತಾಂ ಮೊನೆಯಾಗೆ ಭೆದಿಸುವ ಸೂಚೀವ್ಯೂಹದೊಳ್ ದಾನವಾಂತಕನಾಂತಂ: ಅನಂತಪು, ೧೩. ೯೪)

ಮಕರಾಂಕಚಾಪ

ಕಾಮನ ಬಿಲ್ಲು (ಘನ ಮಕರಾಂಕಚಾಪಮೆನೆ ರಂಜಿಪ ಪುರ್ಬಿನ ಕನ್ನೆ ಮೀನಲೋಚನೆ: ತ್ರಿಷಷ್ಟಿಪು, ೨೪. ೧೯೯)

ಮಕರಿಕಾಪತ್ರ

ಅಲಂಕಾರಕ್ಕಾಗಿ ದೇಹದ ಮೇಲೆ ಬರೆದುಕೊಳ್ಳುವ ಚಿತ್ರ (ಅಲಕಂ ಮಂದಾರಶೂನ್ಯಂ ಕದಪು ಮಕರಿಕಾಪತ್ರಶೂನ್ಯಂ ಲಲಾಟಂ ತಿಲಕಾಳಂಕಾರಶೂನ್ಯಂ: ಆದಿಪು, ೩. ೧೩)

ಮಕರಿಕೆ

ಮಕರಿಕಾಪತ್ರ (ಕದಪಿದು ಪೊದಳ್ದ ಮಕರಿಕೆಯಂ ತಾಳದೆ ಕಱೆವೆರಸದ ಶಸಿಬಿಂಬದ ಪೋಲ್ಕೆಯನಾಳ್ವುದು ಏಕೆ ಕಮಲದಳಾಕ್ಷೀ: ರಾಜಶೇವಿ, ೩. ೬೦)

ಮಕರೇಶ

ಮೊಸಳೆಯನ್ನು ವಾಹನವಾಗಿ ಪಡೆದವನು, ವರುಣ (ಮಕರೇಶ ಚಾರುಚಾಮರಮರುತಂ .. .. ಇದೆಂದು ವಿತರ್ಕಿಪನ್ನಮಸ್ಫುರಿತ ದವಾನಳಂ ಸುೞದುದೊಯ್ಯನೆ ಪಶ್ಚಿಮದಿಗ್ಭವಾನಿಳಂ: ಜಗನ್ನಾವಿ, ೪. ೨)

ಮಕುಟ

ಕಿರೀಟ (ಆತಂ ನಿಜಭುಜವಿಜಯಖ್ಯಾತಿಯನಾಳ್ದ ಆಳ್ದಂ ಅಧಿಕಬಲಂ ಅವನಿಪತಿವ್ರಾತಮಣಿಮಕುಟ ಕಿರಣದ್ಯೋತಿತಪಾದಂ: ಪಂಪಭಾ, ೧. ೧೬)

ಮಕುಟಬದ್ಧ

ಕಿರೀಟ ಧರಿಸಿದವನು, ರಾಜ (ಮಹಾಮಂಡಳಿಕಪ್ರಮುಖಮಕುಟಬದ್ಧರ್ ಮಾೞ್ಪ ಚತುರ್ಮುಖಮುಂ: ಆದಿಪು, ೧೫. ೧೩ ವ)

ಮಕುಟಭಂಗ

ಕಿರೀಟವನ್ನು ಒಡೆಯುವುದು (ಮಕುಟಭಂಗ ಪ್ರತಿಜ್ಞೆಯಂ ತೀರ್ಚಲೆಂದು ಕುರುಕುಲಾಂತಕನಂ ಮಾಮಸಕಂ ಮಸಗಿ: ಗದಾಯು, ೮. ೩೭ ವ)

ಮಕುಟಮಣಿ

ಕಿರೀಟದಲ್ಲಿ ಸೇರಿಸಿದ ರತ್ನ (ಮಕುಟಮಣಿ ಸೊಡರ್ಗಳನೆ ಮಸ್ತಕಸಹಿತಮೆ ನೆಗೆದು ತಿರುಗುವಾ ಪರಿಯಣಮೇಂ ಪ್ರಕಟಿಸಿದುದೊ ಕೃಷ್ಣನ ವಿಜಯಕಾಂತೆಗಾಕಾಶಲಕ್ಷ್ಮಿ ನಿವಳಿಪ ತೆಱದಿಂ: ಜಗನ್ನಾವಿ, ೧೭. ೫೪)

ಮಕುಟಮಸ್ತಕ

ಕಿರೀಟ ಧರಿಸಿದ ತಲೆ (ನತಭೂಮೀಪಾಲರ ಮಕುಟಮಸ್ತಕದ ನಿಜತೇಜೋ ರೂಪಕಮೆ .. .. ಮೆಱೆವಿನಂ ಯಶೌಘಂ ಮೆಱೆವಂ: ಯಶೋಧಚ, ೨. ೨)

ಮಕುಟಮಾಣಿಕ

ಕಿರೀಟದ ಮಾಣಿಕ್ಯ (ಆಗಳಾ ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆ ಎನಿತು ಬೆಳಗಿಯುಂ ಕೞ್ತಲೆಯಂ ಅಲೆಯಲಾಱವಾದುವು: ಪಂಪಭಾ, ೪. ೪೯ ವ)

ಮಕುಟಶಿಖರ

ಕಿರೀಟದ ತುದಿ (ಪುಗೆ ಪೊಱಮಡೆ ತನ್ನ ಮನಂಬುಗುವಂತಿರೆ ತನ್ನ ಮಕುಟಶಿಖರಮನವು ನೆಟ್ಟಗೆ ತಾಗುವಂತುಮಾರೆ ಜಗದಧಿಪನುದಾತ್ತಭಕ್ತಿಯಿಂ ಮಾಡಿಸಿದಂ: ಆದಿಪು, ೧೬. ೩೮)
< previous123456789105106Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App