ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456789Next >

ಯಃ ಪಲಾಯಃ ಸ ಜೀವತಿ

ಯಾವನು ಪಲಾಯನ ಮಾಡುತ್ತಾನೋ ಅವನು ಬದುಕುತ್ತಾನೆ (ಯಃ ಪಲಾಯಃ ಸ ಜೀವತಿ ಎಂದೋಡುವ ತನ್ನ ಮೆಯ್ದುನೆನಿಪ್ಪಾ ರುಕ್ಮಿಗಂ .. .. ಶ್ರುತಿಪೂರಮಾಯ್ತು ಜಯಭೆರಿನಾದವಾ ಕೃಷ್ಣನಾ: ಜಗನ್ನಾವಿ, ೧೭. ೫೭)

ಯಕ್ಷ

ಒಂದು ದೇವಯೋನಿ (ಖೇಚರ ಕಿನ್ನರ ಯಕ್ಷ ಪಿಶಾಚರ್ ಗಂಧರ್ವರ್ ಅಪ್ಸರಪ್ರಕರಂ ದೊಷಾಚರರ್ ಎಂದು ಅದ್ಭುತಗುಣಗೋಚರರವರ್ ಎಯ್ದೆ ದೇವಯೋನಿಗಳೆನಿಪರ್: ಅಭಿಧಾವ, ೧. ೧. ೫೪) ಯಕ್ಷಮುಖ್ಯ, ಕುಬೇರ (ಧನಪತಿ ಯಕ್ಷಂ ಶ್ರೀದಂ .. .. ಧನದಂ ಕುಬೇರಂ ಅಳಕಾಧಿನಾಯಕಂ: ಅಭಿಧಾವ, ೧. ೧. ೪೬); [ಜೈನ] ವ್ಯಂತರ ದೇವತೆಗಳ ಒಂದು ವರ್ಗ (ಆನೀ ವಟವೃಕ್ಷ ನಿವಾಸಿಯೆಂ ಮನೋಹರನೆಂಬ ಯಕ್ಷನೆಂ: ವಡ್ಡಾರಾ, ಪು. ೫೬, ಸಾ. ೧೬)

ಯಕ್ಷಕರ್ದಮ

ಪರಿಮಳ, ಲೇಪನ ದ್ರವ್ಯ (ಕಾಳಾಗರುಕಾಶ್ಮೀರ ಕಸ್ತೂರಿ ಕರ್ಪೂರ ಯಕ್ಷಕರ್ದಮಕ್ಷೆದದೊಳಂ ನದೀತರಂಗಘಗಳಂ ವಿಚಿತ್ರವರ್ಣಂ ಮಾಡಿ: ಆದಿಪು, ೧೧. ೧೩೯ ವ)

ಯಕ್ಷಿ

[ಜೈನ] ಪ್ರತಿಯೊಬ್ಬ ತೀರ್ಥಂಕರನ ಬಳಿ ಇರುವ ಶಾಸನ ದೇವತೆ (ಯಕ್ಷಿ ಬರೆ ಕಂಡು ತಾಂ ಪ್ರತ್ಯಕ್ಷಂ ಕರೆದೆನ್ನಂ ಇತ್ತಳೀ ಪುತ್ರನಂ: ಕರ್ಣನೇಮಿ, ೬. ೪೦)

ಯಕ್ಷೆಂದ್ರ

ಯಕ್ಷರ ಒಡೆಯ, ಕುಬೇರ (ಕುಂದದ ಶರನಿಧಿ ಯಕ್ಷೇಂದ್ರನಿಧಿಯಿದೆನೆ ಸೊಗಯಿಸುಗುಂ: ರಾಜಶೇವಿ, ೬. ೧೧೩)

ಯಜನ

ಯಾಗ ಮಾಡುವಿಕೆ (ಅಂತು ಭವಿಷ್ಯದ್ ದ್ವಿಜವರ್ಣಕೆ ಅಧ್ಯಯನ ಅಧ್ಯಾಪನ ದಾನ ಪ್ರತಿಗ್ರಹ ಯಜನ ಯಾಜನವಿಶಿಷ್ಟವೃತ್ತಿಯುಮಂ: ಆದಿಪು, ೮. ೭೩ ವ)

ಯಜಮಾನ

ಎಂಟು ಮೂರ್ತಿಗಳ ಶಿವನ ಒಂದು ಮೂರ್ತಿ (ಗೋಕರ್ಣನಾಥನಂ ಗೌರೀನಾಥನಂ ಅವನಿ ಪವನ ಗಗನ ದಹನ ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರೈಲೋಕ್ಯಸಂಗೀತಕೀರ್ತಿಯಂ ಕಂಡು ಕೆಯ್ಗಳಂ ಮುಗಿದು: ಪಂಪಭಾ, ೪. ೨೬ ವ); ಯಾಗಕರ್ತ (ಧರ್ಮಪುತ್ರಂ ಸಪತ್ನಿ ಯಜಮಾನನಾಗಿರ್ದಾಗಳ್: ಪಂಪಭಾ, ೬. ೩೩ ವ)

ಯಜ್ಞ

ಯಾಗ ಕ್ರತು ಯಾಗಂ ಅಧ್ವರಮ ಸಪ್ತತಂತು ಸತ್ರಂ ಮಖಂ ಸವಂ ಯಜ್ಞಂ: ಅಭಿಧಾವ, ೧. ೧೧. ೪೧)

ಯಜ್ಞದ್ರವ್ಯ

ಯಜ್ಞ ಮಾಡಲು ಬೇಕಾದ ಸಾಮಗ್ರಿ (ಬ್ರಹ್ಮೃಷಿಯರುಮಂ ಅರಸುಮಕ್ಕಳಂ ಎಡೆಯೆಱದಿರಿಸಿ ಯಜ್ಞದ್ರವ್ಯಂಗಳೆಲ್ಲಮಂ ನೆರಪಿ: ಪಂಪಭಾ, ೬. ೩೩ ವ)

ಯಜ್ಞವಿದ್ಯಾ[ದ್ಯೆ]

ಯಜ್ಞದ ಬಗೆಗಿನ ತಿಳಿವಳಿಕೆ (ಚಾರುತರ ಯಜ್ಞವಿದ್ಯಾಪಾರಗರ ರವಂಗಳಿಂ .. .. ನೆಗೞ್ದುದು ಆಹುತಿಧೂಮಂ: ಪಂಪಭಾ, ೬. ೩೪)

ಯಜ್ಞವೇದೀಸಂಭವೆ

ಯಜ್ಞದ ವೇದಿಕೆಯಲ್ಲಿ ಹುಟ್ಟಿದವಳು, ದ್ರೌಪದಿ (ಯಜ್ಞವೇದೀಸಂಭವೆಯುಂ ಯಾಜ್ಞಸೇನಿಯುಂ ಪಾಂಚಾಲರಾಜತನೂಜೆ ಪವಮಾನತನೂಜನಲ್ಲಿಗೆ ಬಂದು: ಗದಾಯು, ೧. ೫೫ ವ)

ಯಜ್ಞಸದ್ಮ

ಯಾಗಮಂಟಪ (ವಿಸ್ತೀರ್ಣ ವಿತಾನೋಪೇತದಿದ ಒಪ್ಪಿದುದು ಉಚಿತ ಯೋಗ್ಯೇಧ್ಮಂ ಆ ಯಜ್ಞಸದ್ಮಂ: ಕುಸುಮಾಕಾ, ೪. ೧೧೭)

ಯಜ್ಞಸೇನ

ದ್ರುಪದರಾಜ (ತನ್ನ ಬಲಮೆಲ್ಲಮಂ ಜವನಂತೆ ಒಕ್ಕಲಿಕ್ಕಿ ಕೊಲ್ವ ಕಳಶಕೇತನನಂ ಯಜ್ಞಸೇನಂ ಏನುಂ ಮಾಣದೆ: ಪಂಪಭಾ. ೧೨. ೨೧ ವ)

ಯಜ್ಞಸೇನತನೂಜೆ

ದ್ರೌಪದಿ (ಆ ಮಾತೆಲ್ಲಮಂ ಕೇಳ್ದು ಯಜ್ಞಸೇನತನೂಜೆ ಯಮತನೂಜಂಗಿಂತೆಂದಳ್: ಪಂಪಭಾ, ೭. ೪೪ ವ)

ಯಜ್ಞೋಪವೀತ

ದ್ವಿಜರು ಧರಿಸುವ ಜನಿವಾರ (ಅವರವರ ನೆಲೆಗಳೊಳ್ ಬ್ರಹ್ಮಸೂತ್ರಾಭಿಧಾನ ಯಜ್ಞೋಪವೀತದಿಂ ಪವಿತ್ರಗಾತ್ರರ್ಮಾಡಿ: ಆದಿಪು, ೧೫. ೧೧ ವ)

ಯತಯಾತಪ್ರೌಢಿ

ಅಂಕುಶದಿಂದ ಆನೆಯನ್ನು ನಿಯಂತ್ರಿಸುವ ಕೌಶಲ (ಯತಯಾತಪ್ರೌಢಿಯಿಂ ಮಿಂಚಿನ ಮೊಗವಡಮಂ ಬೀಸೆ: ಅನಂತಪು, ೩. ೩೫)

ಯತಿ

ಮುನಿ (ಅನಂತಚತುಷ್ಟಯವಿಳಾಸಿ ಕೈವಲ್ಯಲಕ್ಷ್ಮಿಯಂ ಯತಿ ಪಡೆದಂ: ಆದಿಪು, ೧೦. ೧೫); ಪದ್ಯವನ್ನು ಓದುವಾಗ ನಿಲ್ಲಿಸುವ ವಿಶ್ರಾಮಸ್ಥಾನ (ಯತಿ ಎಂಬುದು ಉಸಿರ್ವ ತಾಣಂ: ಕವಿರಾಮಾ, ೧. ೭೧)

ಯತಿಗಣ

ಮುನಿಸಂದೋಹ (ಛಂದೋನಿಬಂಧನದಂತೆ ಯತಿಗಣಮಂ .. .. ಯಾಮ್ಯದಿಶೆಯಂತೆ ಧರ್ಮಪ್ರಭವವಿಭಾವಮುಂ ಎಂಬ ಮಹನೀಯಮಹಿಮೆಯಂ ತಳೆದು .. .. ಇರ್ಪುದಾ ಪುರಂ: ಪುಷ್ಪದಂಪು, ೯. ೩೦ ವ)

ಯತಿರಾಜ

ಮುನಿಶ್ರೇಷ್ಠ (ಯತಿರಾಜ ಆಸ್ಯಪಯೋಜದಿಂದೊಗೆದ ಭಾಸ್ವದಿವ್ಯ ಮಂತ್ರಾವಳೀರುತಿಗಂ ದಕ್ಷಿಣದಿಂದೆ ಮಾರುತಸಖಂ ಪ್ರತ್ಯಕ್ಷಮಾಕಾರಮಾಂತು .. .. ಸರ್ಪಿಮ್ಯಾಹುತಿಯಂ ಕೈಕೊಳುತಿರ್ದಂ: ಕುಸುಮಾಕಾ, ೪. ೧೩೩)

ಯತಿಸಮಿತಿ

ಮುನಿಸಮುದಾಯ (ಪರಮತಪಶ್ಚರಣನಿರತ ಯತಿಸಮಿತಿಗೆಲ್ಲಂ ಪ್ರತಿಗ್ರಹಾದಿಪುರಸ್ಸರಂ ನಿರವದ್ಯಾಹಾರಾದಿ ವಿತರಣರೂಪ ಪಾತ್ರದತ್ತಿಯುಂ: ಆದಿಪು, ೧೫. ೧೩ ವ)
< previous123456789Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App