ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891516Next >

ಲಂಕಾಧಿಪತಿ

ಲಂಕೆಯ ಒಡೆಯ, ರಾವಣ (ತನ್ನ ದೋರ್ಗರ್ವದ ಅಗುರ್ವಂ ಪ್ರಾಕಟಂ ಮಾಡುವ ಬಗೆಯೊಳಿದಂ ಪತ್ತಿ ಕಿೞ್ತೊತ್ತಿ ಪೊತ್ತು ಎತ್ತಿದೊಡೆ ಇತ್ತಂ ಮೆಚ್ಚಿ ಲಂಕಾಧಿಪತಿಗೆ ಬರವಂ ರಾಗದಿಂ ನೀಳಕಂಠಂ: ಪಂಪಭಾ, ೭. ೭೪)

ಲಕುಚ

ಕಂಚಿ ಗಿಡ (ಲಕುಚ ಅಶೋಕ ತಮಾಳ ಶಾಲ ಕದಳೀ ಸಪ್ತಚ್ಛದ ಆಕ್ಷೆೞ ಚಂಪಕ .. .. ಪಾದಪಂ ಕಣ್ಗೊಪ್ಪುಗುಂ ಸುತ್ತಲುಂ: ವರ್ಧಮಾಪು, ೧. ೫೧)

ಲಕುಟ

ದೊಣ್ಣೆ (ಅವರ ಶಿರಂಗಳಂ ಕಿರಾಟಂ ಲಕುಟದಿಂ ಬಿರಿಯೆ ಪೊಯ್ಯಲ್: ಪಂಚತಂತ್ರ, ೨೬೧ ವ)

ಲಕುಟಯಷ್ಟಿ

ದೊಣ್ಣೆಕೋಲು (ಪಾಪಸತ್ವಂಗಳ್ ಕಾಡೆ ಲಕುಟಯಷ್ಟ್ಯಾದಿವಿಧಿಯನುಪದೇಶಂಗೆಯ್ದಾತಂ ಕ್ಷೇಮಂಧರನೆಂಬ ಪೆಸರಂ ಪಡೆದಂ: ಆದಿಪು, ೬. ೫೬ ವ)

ಲಕ್ಕ

ಲಕ್ಷ ಎಂಬ ಸಂಖ್ಯೆ (ಪಟ್ಟಂಗಟ್ಟಿದ ಇಳಾಧಿನಾಥರೆ ಪಯಿಂಛಾಸಿರ್ವರ್ ಒಳ್ಳಾನೆಗಳ್ ಪಟ್ಟಂಗಟ್ಟಿದುವು ಒಂದು ಲಕ್ಕ ತುರಗಂ ಪತ್ತೆಂಟು ಲಕ್ಕಂ: ಪಂಪಭಾ, ೧೦. ೧೧೭)

ಲಕ್ಕಚಣ

ಒಂದು ಆಯುಧ (ಸುಲಿಪಲ್ಲಂ ಮೆಱೆವೈ ಪರಲಲನೆಯರ್ಗೆಂದಿಕ್ಕುೞಂದೆ ಕೀೞ್ವರ್ ಪಲ್ಲಂ ಸಲೆ ಕಣ್ಣಂ ಕೆತ್ತುವೆಯೆಂದು ಲಕ್ಕಚಣದಿಂದೆ ಮೀಂಟಿ ಕಳೆವರ್ ಕಣ್ಣಂ: ಪಾರ್ಶ್ವನಾಪು, ೬. ೯೦)

ಲಕ್ಕಣ

ಲಕ್ಷಣ (ಬೂದಿ ಜೆಡೆ ಲಕ್ಕಣಂ ತಪಕೆ ಆದುವು ಎರೞ್ದೊಣೆ ಶರಾಸನಂ ಕವಚಂ ಇದೆಂತಾದುವೋ ಮುತ್ತುಂ ಮೆೞಸುಂ ಕೋದಂತುಟೆ ನಿನ್ನ ತಪದ ಪಾಂಗೆಂತು ಗಡಾ: ಪಂಪಭಾ, ೭. ೯೨); ದುರ್ಯೋಧನನ ಮಗನ ಹೆಸರು (ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಸಿತ್ತಿಱದು ಬಳಸಿ ಬರೆ: ಪಂಪಭಾ, ೧೦. ೨೭ ವ)

ಲಕ್ಕಂಬಡೆ

ನೂರು ಸಾವಿರ [ಒಂದು ಲಕ್ಷ] ಬೆಲೆಬಾಳು (ತೊಡವೆನಗಪ್ಪೊಡೆ ಲಕ್ಕಂಬಡೆದುವು ಪಲವೊಳವು ನಂಬೆಯಪ್ಪೊಡೆ ನೋಡೀಗಡೆ: ಧರ್ಮಾಮೃ, ೨. ೭೭)

ಲಕ್ಕೆ

ಲಕ್ಷ ಸಂಖ್ಯೆ (ತುಱುಗಿದ ನಾಲ್ಕುಂ ಲಕ್ಕೆಯುಂ ಅಱುವತ್ತು ಸಾಸಿರಂಗಳಿಂ ಮೇಲಯ್ನೂರಱುವತ್ತುಪಧ್ವಜಂ ಕೈನಿಱದವು ಭಾರತಿಕನಾಗೆ ಮಂದಸಮೀರಂ: ಮಲ್ಲಿನಾಪು, ೧೪. ೧೧೬)

ಲಕ್ಷ

ನೂರು ಸಾವಿರ (ಪೆಣ್ಗೆ ಗಂಡರೇಂ ಪಸನೆ ಸುಡಾತನಂ ನುಡಿಯವೇಡ ಅವನೇವನೊ ಲಕ್ಕವೀವೊಡಂ: ಲೀಲಾವತಿ, ೨. ೭೪)

ಲಕ್ಷಣ

ಗುರುತು (ಅಂಕಂ ಲಕ್ಷನಂ ಅದುವೆ ಕಳಂಕ ಅಭಿಜ್ಞಾನ ಚಿಹ್ಬ ಲಾಂಛನ: ಅಭಿಧಾವ, ೧. ೧. ೬೯); ಸೂತ್ರ, ವ್ಯಾಖ್ಯೆ (ನೆಲಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ: ಕವಿರಾಮಾ, ೧. ೪೮); ದುರ್ಯೋಧನನ ಮಗ ತನ್ನ ಮಗನಪ್ಪ ಲಕ್ಷಣಕುಮಾರನಂ ಕಂಡು: ಗದಾಯು, ೪. ೫೯ ವ)

ಲಕ್ಷ್ಮ

ಕಲಂಕ, ಗುರುತು (ಧವಳಾಪಾಂಗ ವಿಲೋಕನಾಮೃತಮಯಂ ಭ್ರೂಲಕ್ಷ್ಮರಮ್ಯಂ ಮನೋಭವ ರಾಜ್ಯೋದಯಹೇತು: ಆದಿಪು, ೬. ೮೮)

ಲಕ್ಷ್ಮಿ

ಕಾಂತಿ, ಸೊಗಸು (ಜಿನಸವನಾಂಬುವಿನೊಳ್ ಭೋಂಕೆನೆ ಚಂದ್ರಂ ತೇಂಕಿ ಹಂಸವೃದ್ಧನಂ ಇನಿಸಂ ನೆನೆಯಿಸಿ ಕೊಳದೊಳಗಣ ಸಿತವನರುಹಲಕ್ಷ್ಮಿಯುಮಂ ಇನಿಸು ತನಗೊಳಕೊಂಡಂ: ಆದಿಪು, ೭. ೯೯)

ಲಕ್ಷ್ಮೀದಯಿತಂ

ಸಿರಿಯೊಡೆಯ (ಜಳಧಿಯುಮಂ ಲಕ್ಷ್ಮೀದಯಿತಂ ನೀರ್ವರಿಯಿಂದಾದಮೆ ಕಿಱದೆಂದು ಬಗೆದು ನೋಡಿದನಾಗಳ್: ಆದಿಪು, ೧೨. ೭೫)

ಲಕ್ಷ್ಯ

ಗುರಿಯ ವಸ್ತು (ಭರತಕುಲತಿಳಕರಿರ್ ವರಶರಾಸನ ವ್ಯಗ್ರಹಸ್ತರಿರ್ ಬಳಯುತರಿರ್ ನೆರೆದಿನಿಬರುಂ ಇರದೆ ಈ ಲಕ್ಷ್ಯಮಂ ಇರದಕ್ಕಟ ಸರದೆ ತೆಗೆಯಲಾರ್ತರುಮಿಲ್ಲಾ: ಪಂಪಭಾ, ೨. ೫೨)

ಲಂಗಿಗ

[ಲಂಖಿಕ] ದೊಂಬರವನು (ಲಂಗಿಗರ ಮನೆಯೊಳ್ ಪೆಣ್ಗತ್ತೆಯಾಗಿ ಪಿರಿಯ ಪೊಱೆಗಳಂ ಪೊತ್ತು ಪೋಗಿ ಬೆನ್ನೊಳ್ ಕಱುಮೆಯಾಗಿ ನಾಳಿ ಬಿರ್ದು: ವಡ್ಡಾರಾ, ಪು ೧೩, ಸಾ ೪)

ಲಂಗಿಸು

[ಲಂಘಿಸು] ಹಾರು, ನೆಗೆ (ಪೊಗೆ ಪುಗೆ ಕಣ್ಣಂ ಸಿಂಗಂಗಳ್ ಅಳುರೆ ಗರ್ಜಿಸಿ ಲಂಗಿಸಿ ಪುಡಪುಡನೆ ಪುೞ ಸತ್ತುವು ಪಲವುಂ: ಪಂಪಭಾ, ೫. ೯೨)

ಲಗ್ಗೆ

ಮುತಿಗೆ, ದಾಳಿ (ಮೆಯ್ವತ್ತಿ ಲಗ್ಗೆಯಂ ಮುಟ್ಟಾಳ್ಗಳಂ ದುರ್ಗದವರ್ಗಳ್ ನುರ್ಗುಮಾಡೆ ನಾಡೆಯುಂ ಸಿಗ್ಗಾಗಿ: ಪಾರ್ಶ್ವನಾಪು, ೩. ೧೪೧ ವ)

ಲಗ್ನ

ಮದುವೆ (ವಸುಂಧರಾಸೌಂದರಿಯುಂ ತಾನುಂ ಪ್ರಿಯತನಯನ ವಿವಾಹೋತ್ಸವಲಗ್ನಚಿತ್ತರಾಗಿ ಲಗ್ನಮನೆ ಪಾರುತ್ತುಮಿರ್ದರ್: ಆದಿಪು, ೪. ೩೦ ವ); ಅಂಟಿಕೊಂಡ (ನರಕನಗರಲಗ್ನ ಆಕಸ್ಮಿಕಾಗ್ನಿ ಸ್ಫುಲಿಂಗಸ್ಫುರತ್ ಅವಿರಳ ಲಾಕ್ಷಾಗೇಹ ಪೂರೈಕಭಾವ ತ್ವರಿತವಿಚಳತ್ ಅಸ್ಥಿಗ್ರಂಥಿಸಂಸ್ಥಾನಬಂಧರ್: ಆದಿಪು, ೫. ೮೯); ಕೂಡಿದ, ಸೆರಿದ (ತತ್ಕಮಳಕಾನನಕಂಟಕಲಗ್ನಪಾದಮಾದವೊಲ್ ಉಡುಗುತ್ತುಂ ಆತ್ಮಕರಮಂ ರವಿ ಪೊರ್ದಿದಂ ಅಸ್ತಶೈಲಮಂ: ಪಂಪಭಾ, ೪. ೪೬)

ಲಂಘನ

ಉಪವಾಸ ಹಾಗೂ ನೆಗೆಯುವಿಕೆ (ಗಜಮಸ್ತಕ ಮಸ್ತಿಷ್ಕದಿಂ ಅಜೀರ್ಣಮಾಯ್ತೆಂದು ಲಂಘನಂಗೆಯ್ವವೊಲೇಂ ಗಜರಿಪು ಲಂಘಿಸಿದುದೊ ಪವನಜವದೆ ಶಿಖರಕ್ಕೆ ಶಿಖರದಿಂ ಖಗನಗದಾ: ಅಜಿತಪು, ೯. ೨೭)
< previous1234567891516Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App