ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567893334Next >

ಶಕಟ

ಬಂಡಿ, ರಥ (ಅನೇಕಶರಭರಿತ ಶಕಟಸಹಸ್ರಮನೊಂದು ಮಾಡಿ ಗಾಂಗೇಯನ ಪೆಱಗೆ ನಿಲಿಸಿದಾಗಳ್: ಪಂಪಭಾ, ೧೧. ೧೬ ವ); ಒಬ್ಬ ರಾಕ್ಷಸ (ತದಂಘ್ರಿತಳಂ ಮುಟ್ಟೆ ಸಿಡಿಲ್ ಪೊಡೆದ ತೆಱದೆಕೆಡೆದಂ ಸಕಟಂ: ಜಗನ್ನಾವಿ, ೩. ೨೮)

ಶಕಟಪ್ರಸಂಹಾರ

ಶಕಟನನ್ನು ಕೊಂದವನು, ಶ್ರೀಕೃಷ್ಣ (ಶಕಟಪ್ರಸಂಹಾರನಾಡಿದಂ ಯಮಳಾರ್ಜುನ ದ್ರುಮಘಾತಿಯೆಂಬೀ ರವಂ ನೆಗೞಲ್ಕೆ .. .. ಮುರಾರಿ ಕೈಪಱೆಗಾಡಿದಂ: ಜಗನ್ನಾವಿ, ೩. ೫೫)

ಶಕಟವ್ಯೂಹ

ರಥದ ಆಕಾರದಲ್ಲಿ ಸೇನೆಯನ್ನು ನಿಲ್ಲಿಸುವ ಒಂದು ರಚನೆ (ಶಕಟವ್ಯೂಹದ ಪೆಱಗೆ .. .. ಅಧಿಕಬಲರಪ್ಪ ಸೌಬಲ ದುಶ್ಶಾಸನಾದಿ ಪ್ರಧಾನ ವೀರಭಟಕೋಟಿಯ ನಡುವೆ ಸಿಂದುರಾಜನಂ ನಿರಿಸಿ: ಪಂಪಭಾ, ೧೧. ೧೩೨ ವ)

ಶಂಕರ

ಶುಭಕರ (ಪ್ರೀತಿಂಕರ ಶಂಕರ ವಿದ್ಯಾತಿಶಯನಿಧಾನ ನಿನ್ನ ದಯೆವೆರಸಿದತಿಪ್ರೀತಿಯೊಳ್ ಆಂ ಅತ್ಯುತ್ತಮ ಜಾತಿಗಳೊಳ್ ಪುಟ್ಟಿ ಸುಖಮನುಣುತುಂ ಬಂದೆಂ: ಆದಿಪು, ೫. ೭೩)

ಶಕಲ

ಚೂರು, ತುಂಡು (ಇಭಕುಂಭೋನ್ಮುಕ್ತ ಮುಕ್ತಾಶಕಲ ಸಿಕತಿಲಾಶ್ರಾಂತ ಮಜ್ಜತ್ ಪುಳಿಂದೀ ಸುಭಗ ಆಸ್ಯಾಂಭೋಜಭೂಷಂ: ಲೀಲಾವತಿ, ೭. ೧೦೩); ತಲೆಯ ಚಿಪ್ಪು (ಅರುಣೋಜ್ಜೃಂಭಿತ ಚರ್ಮ ಅಸ್ತಿ ಶಕಲಂ ವಾಲಂ ವಿಷಾಣ: ತ್ರಿಷಷ್ಟಿಪು, ೨೭. ೩೩)

ಶಕಳ

ಚೂರು, ತುಂಡು (ಅನೇಕ ನೃಪ ಶಿರಃ ಕಪಾಳ ಶಕಳ ಜರ್ಜರಿತಮುಂ ಪರಸ್ಪರ ಸಮರ ರಭಸಸಮುತ್ಸಾರಿತಮುಂ: ಪಂಪಭಾ, ೧೩. ೫೧ ವ)

ಶಂಕಾಕುಳಿತ

ಸಂಶಯದಿಂದ ಪೀಡಿತವಾದ (ಆ ಶಿಶುವಿನೞ ತೆಕ್ಕನೆ ತೀವಿತ್ತನಿತುಂ ದಿಕ್ತಟಮಂ ಭೋರೆನೆ ಶಂಕಾಕುಳಿತಮಪ್ಪಿನಂ ಭುವನಜನಂ: ಜಗನ್ನಾವಿ, ೩. ೧೨)

ಶಂಕಾಕುಳಿತಚಿತ್ತ

[ಶಂಕಾ+ಆಕುಳಿತಚಿತ್ತ] ಆತಂಕದಿಂದ ವಿಕಲಗೊಂಡ ಮನಸ್ಸು (ಯಮನಂದನನಿರ್ವರ ಬರವುಮಂ ಕಾಣದೆ ಶಂಕಾಕುಳಿತಚಿತ್ತನಾಗಿ: ಪಂಪಭಾ, ೮. ೪೦ ವ)

ಶಂಕಾಂತರ

ಸಂದೇಹ (ಲತೆಗಳ್ ಜಂಗಮರೂಪದಿಂದೆ ನೆರದುವೋ ದಿವ್ಯಾಪ್ಸರೋವೃಂದಂ ಈ ಕ್ಷಿತಿಗೇಂ ಇಂದ್ರನ ಶಾಪದಿಂದ ಇೞದುವೋ ಪೇೞೆಂಬ ಶಂಕಾಂತರಂ ಮತಿಗಂ ಪುಟ್ಟುವಿನೆಗಂ: ಪಂಪಭಾ, ೪. ೩೯)

ಶಂಕಾಪನಯನ

[ಜೈನ] ಸಂದೇಹವಿಲ್ಲದಿರುವುದು (ಜಿನಮತ ಪದಾರ್ಥಶಂಕಾಪನಯನಮುಂ ಭೋಗಾಕಾಂಕ್ಷೆಯೊಳ್ ವಿಮುಖತೆಯುಂ: ಆದಿಪು, ೫. ೫೭)

ಶಂಕಾವಹ

ಸಂದೇಹವುಂಟುಮಾಡುವ (ಆಹವ ಮಹಾಹುಂಕಾರ ಕಾಳಕೂಟವಿಟಪಿಪ್ರದೋಹ ಶಂಕಾವಹ ನಾಭಿಕೂಪಾವಲಂಬಿತ ಕೂರ್ಚಕಳಾಪಂ: ಆದಿಪು, ೧೩. ೪೫ ವ)

ಶಂಕಿಸು

ಹೆದರು, ಹಿಂಜರಿ (ಬೆಸಸೆನೆಯುಂ ನುಡಿಯಲ್ ಶಂಕಿಸಿದಪೆಂ ಆಂ ಎಂದೊಡೆ ಏಕೆ ಶಂಕಿಸಿದಪೈ ನೀಂ ಬೆಸವೇೞ್: ಪಂಪಭಾ, ೧೨. ೯೦)

ಶಂಕು

ಕೊರಡು (ಶಂಕ್ವಾಖ್ಯಂ ತಾಂ ಕೊಱಡು: ಅಭಿಧಾವ, ೧. ೭. ೭)

ಶಕುಂತ

ಶಕುನದ ಹಕ್ಕಿ (ಕಾಲವಿಭಕ್ತ ವಯೋಭಾರನುಮಾಗಿ ಪಂಜರದಿಂದರೆನುಸುಳ್ದ ಶಕುಂತನಂತೆ ಭೂಕಾಂತನಿರ್ಪಿನಂ: ನೇಮಿನಾಪು, ೨. ೪೧ ವ)

ಶಕುಂತಿ

ಪಕ್ಷಿ (ದಿಶಾಂತದೊಳೆ ಶಕುಂತಿಗಳ ಸರಂ ಜನಿಯಿಸಿದವು: ಕರ್ಣನೇಮಿ, ೧೧. ೮೭)

ಶಕುಂತಿಕಾ

ಶಕುಂತ (ನಿಜಗಂಧಲೋಭದಿಂ ಸಂಧ್ಯಾಕುಟ್ಮಳಿತಸರೋಜಂ ತಳೆದುದು ಜಳದೇವತೆಯರ ಶಕುಂತಿಕಾವಿಳಸನಮಂ: ಮಲ್ಲಿನಾಪು, ೭. ೭)

ಶಕುನ

ಹಕ್ಕಿ (ಪಕ್ಷಿ ಶಕುಂತಂ ಶಕುನಂ ವಿಹಗಂ ವಿ ವಿಷ್ಕಿರಂ ಪತ್ರರಥಂ: ಅಭಿಧಾವ, ೧. ೯. ೯); ನಿಮಿತ್ತ (ಶಕುನಂ ನಿಮಿತ್ತಂ ಅಂಬರನಿಕಾಯಮುಂ: ಅಭಿಧಾವ, ೩. ೧. ೪೮)

ಶಕುನಂಗಳಂ ಕ್ರಮಮಂ ಬಗೆ

ಪ್ರಕೃತಿಯ ಕೆಟ್ಟ ಸೂಚನೆಗಳ ಸ್ವರೂಪವನ್ನು ಗಮನಿಸು, ಅರ್ಥಮಾಡಿಕೊ (ಅವರ ಮನದ ಪುಲ್ವಗೆಯಂ ಪೊಲ್ಲಮೆಯುಮಂ ಅಱಯದೆ ಸಮಸ್ತಬಳೋದ್ಯುಕ್ತನಾಗಿ ಶಕುನಂಗಳ ಕ್ರಮಮಂ ಬಗೆಯದೆ: ಪಂಪಭಾ, ೬. ೬೮ ವ)

ಶಕುನದ ನಯ

ಶಕುನಶಾಸ್ತ್ರ (ಬಿಡೆ ತಿರ್ದಿದ ಶಕುನದ ನಯದಡಿವಿಡಿದು ಪುರೋಹಿತಂ ನೃಪಂಗೀ ನುಡಿಯಂ ನುಡಿದಂ: ಆದಿಪು, ೫. ೬)

ಶಕುನಿ

ಗಾಂಧಾರಿಯ ಸೋದರನಾದ ಗಾಂಧಾರರಾಜ ಸೌಬಲನ ಮಗ (ಮದುವೆಯಂ ಮಾಡಲೆಂದು ಧೃತರಾಷ್ಟ್ರಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟು: ಪಂಪಭಾ, ೧, ೮೭, ವ); ಪಕ್ಷಿ (ಸಕಲ ಶಕುನಿಪ್ರಧಾನರೆಲ್ಲರ್ ನೆರೆದು ತಮ್ಮೊಳಿಂತೆಂದರ್: ಪಂಚತಂತ್ರ, ೩೧೩ ವ); ಶಕುಂತ, ಹಾಲಕ್ಕಿ (ಚರಣಾಯುಧಂ ಶಕುನಿ ಕಂಕಂ ತೊಂಡಿಗಂ .. .. ಕಾಕಂ ಚಿಲಕೂಲಿ ರತ್ನಖಗಮಿರ್ಕುಂ ತದ್ವನಾಗೌಘದೊಳ್: ರಾಜಶೇವಿ, ೫. ೫೯)
< previous1234567893334Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App