ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

ಷಟ್ಕರ್ಮ

ವೈದಿಕ ಬ್ರಾಹ್ಮಣನ ಆರು ಕೆಲಸಗಳು: ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ, ಪ್ರತಿಗ್ರಹ; (ಭವಿಷ್ಯದ್ವಿಜನ್ಮವರ್ಣಕ್ಕೆ ಅಧ್ಯಯನ ಅಧ್ಯಾಪನ ದಾನ ಪ್ರತಿಗ್ರಹ ಯಜನ ಯಾಜನ ವಿಶಿಷ್ಟವೃತ್ತಿಯುಮಂ: ಆದಿಪು, ೪. ೭೬ ವ);

ಷಟ್ಕರ್ಮ

ವೈದಿಕ ಬ್ರಾಹ್ಮಣನ ಆರು ಕೆಲಸಗಳು: ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ, ಪ್ರತಿಗ್ರಹ; (ಭವಿಷ್ಯದ್ವಿಜನ್ಮವರ್ಣಕ್ಕೆ ಅಧ್ಯಯನ ಅಧ್ಯಾಪನ ದಾನ ಪ್ರತಿಗ್ರಹ ಯಜನ ಯಾಜನ ವಿಶಿಷ್ಟವೃತ್ತಿಯುಮಂ: ಆದಿಪು, ೪. ೭೬ ವ); ಪ್ರಜೆಗಳು ಅನುಸರಿಸಬಹುದಾದ ಆರು ವರ್ಗಗಳ ವೃತ್ತಿಗಳು: ಅಸಿ, ಮಷಿ, ಕೃಷಿ, ವಾಣಿಜ್ಯ, ವಿದ್ಯೆ ಮತ್ತು ಶಿಲ್ಪ (ಪೂರ್ವಾಪರವಿದೇಹಸ್ಥಿತಿ ಸಮಾನಮಾಗೆ ಷಟ್ಕರ್ಮಂಗಳುಮಂ ವರ್ಣಾಶ್ರಮವಿಭಾಗಂಗಳುಮಂ ಗ್ರಾಮಗೃಹಾದಿಭೇದಂಗಳುಮಂ: ಆದಿಪು, ೮. ೬೨ ವ); [ಜೈನ] ಹೊಸತಾಗಿ ತಾನು ಸೃಷ್ಟಿಸಿದ ಬ್ರಾಹ್ಮಣರಿಗೆ ಭರತನು ನಿಗದಿಗೊಳಿಸಿದ ಆರು ಕರ್ಮಗಳು: ಪೂಜೆ, ವಾರ್ತೆ, ದತ್ತಿ, ಸ್ವಾಧ್ಯಾಯ, ಸಂಯಮ, ತಪಸ್ಸುಗಳು (ಆರ್ಯ ಷಟ್ಕರ್ಮಂಗಳಂ ನಿಮಗಿವು ಕುಲಾಚಾರಂಗಳೆಂದು ಅಱಯೆ ಪೇೞ್ದು ಕೈಕೊಳಿಸಿ: ಆದಿಪು, ೧೫. ೧೩ ವ)

ಷಟ್ಕಷಾಯ

[ಜೈನ] ಹಾಸ್ಯ, ರತಿ, ಶೋಕ, ಭಯ, ಅರತಿ, ಜುಗುಪ್ಸೆ ಎಂಬ ಆರು ದೋಷಗಳು (ಚಿರಂತನ ಷಟ್ಕರ್ಮಂಬೆರಸು ಹಾಸ್ಯ ರತಿ ಶೋಕ ಭಯ ಜುಗುಪ್ಸಾ ಅಭಿಧಾನ ಷಟ್ಕಷಾಯಮುಮಂ ಕಿಡಿಸಿ: ಶಾಂತಿಪು, ೧೧. ೧೧೧ ವ)

ಷಟ್ಖಂಡ

ಜೈನ] ಆರು ಭೂಭಾಗಗಳು, ಹಿಮವತ್ಪರ್ವತದ ದಕ್ಷಿಣದಲ್ಲಿ ಲವಣಸಮುದ್ರದವರೆಗೂ ವ್ಯಾಪಿಸಿರುವುದು ಭರತಕ್ಷೇತ್ರ. ಇದರ ನಡುವೆ ವಿಜಯಾರ್ಧಪರ್ವತದ ಪೂರ್ವಪಶ್ಚಿಮವಾಗಿ ಹಬ್ಬಿ ಈ ಕ್ಷೇತ್ರವನ್ನು ಉತ್ತರ ಭರತ, ದಕ್ಷಿಣ ಭರತ ಎಂದು ಎರಡಾಗಿ ಒಡೆಯುತ್ತದೆ. ಹಿಮವತ್ಪರ್ವತದಲ್ಲಿ ಹುಟ್ಟಿದ ಮಹಾಸಿಂಧು ಮಹಾಗಂಗಾ ಎಂಬೆರಡು ನದಿಗಳು ಉತ್ತರದಿಂದ ದಕ್ಷಿಣಕ್ಕೆ ಹರಿದು ಲವಣ ಸಮುದ್ರವನ್ನು ಸೇರುತ್ತವೆ, ವಿಜಯಾರ್ಧಪರ್ವತ ಮತ್ತು ಗಂಗಾಸಿಂಧೂ ನದಿಗಳಿಂದ ಭರತಕ್ಷೇತ್ರ ಆರು ಖಂಡಗಳಾಗಿ ಭಾಗವಾಗಿದೆ. ಉತ್ತರ ಭರತಕ್ಷೇತ್ರದ ಮೂರು ಖಂಡಗಳ ನಡುವೆ ಆರ್ಯಖಂಡವಿವೆ, ಈ ಎರಡೂ ಕ್ಷೇತ್ರದ ಖಂಡಗಳು ಕೂಡಿ ಷಟ್ಖಂಡವೆನಿಸಿವೆ (ಮಹಿಭರತಂ ಷಟ್ಖಂಡಾವಹಂ : ಸುಕುಮಾಚ, ೧. ೬೮)

ಷಟ್ಚರಣ

ದುಂಬಿ (ದಾನಪ್ರಮೋದ ವಾಚಾಳಷಟ್ಚರಣ ಚಾರಣ ಗಣೋಚ್ಚಾರ ಝಂಕಾರಜಯಾಶೀರ್ಘೋಷ ಮುಮಪ್ಪ ವಿಜಯಗಜದ ಬೆಂಗೆ ವಂದು: ಆದಿಪು, ೧೪. ೯೦ ವ)

ಷಟ್ಛತ

[ಷಟ್+ಶತ] ಆರುನೂರು (ಅನೇಕವರ್ಷಸಹಸ್ರಂ ಸಲೆ ಷಟ್ಛತಕಾಂಡಾಸನೋತ್ಸೇಧಶರೀರನುಂ: ಆದಿಪು, ೬. ೬೦ ವ)

ಷಟ್ತರ್ಕ

ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ವೇದಾಂತ, ಪೂರ್ವ ಮೀಮಾಂಸೆ ಎಂಬ ಆರು ದರ್ಶನಗಳು (ಅಹಿಂಸಾಲಕ್ಷಣೋ ಧರ್ಮಃ ಎಂಬ ವೈಶೇಷಿಕ ನೈಯಾಯಿಕ ಸಾಂಖ್ಯ ಮೀಮಾಂಸ ಷಟ್ತರ್ಕಸಿದ್ಧಾಂತವಾದಿಗಳುಂ: ಪಂಚತಂತ್ರ, ೧೧೭ ವ)

ಷಟ್ತ್ರಿಂಶದ್ಗುಣ

[ಜೈನ] ಮುನಿಗಳಲ್ಲಿರಬೇಕಾದ ಮೂವತ್ತಾರು ಮೂಲೋತ್ತರಗುಣಗಳು, ದ್ವಾದಶ ತಪಸ್ಸುಗಳು, ದಶಧರ್ಮಗಳು, ಪಂಚಾಚಾರಗಳು, ತ್ರಿಗುಪ್ತಿಗಳು; ಅವುಗಳನ್ನು ಪಡೆದವನು (ನುತ ಷಟ್ತ್ರಿಂಶಸದ್ಗುಣಂಗಳ್ ನೆಱೆಯೆ ನಿರುತಂ .. .. ನಿಱಸುಗೆ ಸದ್ಧರ್ಮದೊಳ್: ಕರ್ಣನೇಮಿ, ೧. ೩)

ಷಟ್ಪದ

ದುಂಬಿ (ತಾನಿದು ಮುನ್ನಿನ ಆರ್ಯರ ಅಗ್ಗದ ನಿಧಿ ನೋಳ್ಪೊಡಿಂತಿದು ಮಹಾಮುನಿಚಿತ್ತಸರೋಜಷಟ್ಪದಂ: ರಾಜಶೇವಿ, ೪. ೮೪)

ಷಟ್ವಕ್ರ

ಯೋಗದಲ್ಲಿನ ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧ, ಆಜ್ಞಾ ಎಂಬ ಆರು ಚಕ್ರಗಳು (ತೊಳಗುವ ಷಟ್ಚಕ್ರಾಬ್ಜಂಗಳ ಒಡೆದು ಉಱೆ ನಿಮಿರ್ದ ಬಳ್ಳಿಮಿಂಚಿನ ತೆಱದಿಂ ಒಪ್ಪಿದುದು ಮೂರ್ತಿ ಪಂಪಾಂಬಿಕೆಯಾ: ಉದ್ಭಟಕಾ, ೩. ೩೮)

ಷಂಡ

ಗುಂಪು (ಪಲವುಂ ಭಂಗಿಯಿಂ ಕೂಡೆ ನೀಲೋತ್ಪಲಷಂಡಂ ಪದ್ಮಷಂಡಂ ಲಲಿತವನಲತಾ ಷಂಡಮುಂ ತಂಡತಂಡಂಗಳಿನೀ ಬಂದಪ್ಪುದೆಂಬಂತೆ ಎಸೆದುದು ಭರತಾಂತಃಪುರಸ್ತ್ರೀಸಮೂಹಂ: ಆದಿಪು, ೧೧. ೧೩೯); ನಪುಂಸಕ (ತುಱುಗೋಳೊಳ್ ಪೆಣ್ಬುಯ್ಯಲೊಳ್ ಎಱೆವೆಸದೊಳ್ ನಂಟನ ಎಡಱೊಳ್ ಊರೞುವಿನೊಳಂ ತಱಸಂದು ಗಂಡುತನಮನೆ ನೆಱುಪದವಂ ಗಂಡನಲ್ಲಂ ಎಂತುಂ ಷಂಡಂ: ಗದಾಯು, ೨. ೨೪)

ಷಂಡಕವೇದ

[ಜೈನ] ಒಂದು ಬಗೆಯ ನೋಕಷಾಯ (ದೇವರೊಳಾಗಿರ್ಕುಂ ಪುಂಸ್ತ್ರೀವೇದಂ ನಿರಯಜನಿತ ಸಮ್ಮೂರ್ಛಿತರೊಳ್ ಭಾವಿಸೆ ಷಂಡಕವೇದಂ ತಾವುೞದವರೊಳ್ ತ್ರಿವೇದಮಂ ಪರಿಭವಿಕುಂ: ಸುಕುಮಾಚ, ೮. ೧೩)

ಷಡಕ್ಷರ ಮಂತ್ರ

ಓಂ ನಮಃಶಿವಾಯ ಎಂಬ ಮಂತ್ರ (ಷಡಕ್ಷರ ಮಂತ್ರಘೋಷಮಾಳಾನಕ ಮಂಗಳಧ್ವನಿಗಳುಣ್ಮಿ ಕರಂ ಸ್ಥಿರಮಪ್ಪಿನಂ: ಕುಸುಮಾಕಾ, ೧. ೧೨೨)

ಷಡಂಗಬಲ

ರಥ, ಆನೆ, ತುರಗ, ಪದಾತಿ, ದಿವಿಜ, ಖೇಚರ ಎಂಬ ಆರು ಬಗೆಯ ಸೇನೆಗಳು (ಭುವನತಳಂ ನಡೆವ ಚತುರ್ಬಲಕೆ ದಿವಿಜಖೇಚರಸೈನ್ಯಕ್ಕೆಡೆ ನೆಱೆಯದು ಗಗನಮುಮೆನೆ ಷಡಂಗಬಲಮಿಂತು ತಳರೆ ತಳರ್ದಂ ಭರತಂ: ಆದಿಪು, ೧೧. ೩೪)

ಷಡಂಗಸೇನಾ[ನೆ]

ಷಡಂಗ[ಬಲ] (ಷಡಂಗಸೇನಾ ವಿರಾಜಮಾನನುಂ ಸಪ್ತಾಂಗಸಂಪತ್ಸಮೇತನುಂ: .. .. ಆಗಿ: ಚಂದ್ರಪ್ರಪು, ೭. ೩೫ ವ)

ಷಡಗ್ನಿ

ಯಾಗಕಾಲದ ಆರು ಬಗೆಯ ಅಗ್ನಿಗಳು: ಪವನ, ಪಾವನ, ತ್ರೇತಾ, ಗಾರ್ಹಪತ್ಯ, ಆಹವನೀಯ ಮತ್ತು ಔಪಾಸನ (ಸಪ್ತರಾತ್ರವಿಧಾನಾಂತರದೊಳ್ ಷಡಗ್ನಿ ಪರಿತೋಷಂಬೆತ್ತು ಶಾಸ್ತ್ರಾಗಮೋಕ್ತವಿದಾದತ್ತು ಎನೆ ರಾಜಸೂಯಂ ಬೇಳ್ದಂ ಮಹೀಪಾಲಂ: ಜಗನ್ನಾವಿ, ೧೭. ೧೨)

ಷಡಂತರಂಗತಪ

[ಜೈನ] ಪ್ರಾಯಶ್ಚಿತ್ತ, ವಿನಯ, ವೈಯಾಪೃತ್ಯ, ಸ್ವಾಧ್ಯಾಯ, ವ್ಯುತ್ಸರ್ಗ, ಧ್ಯಾನಗಳೆಂಬ ಆರು ಅಂತರಂಗದ ತಪಸ್ಸುಗಳು (ಅನಶನ ಅವಮೋದರ್ಯಾದಿ ಷಡ್ವಿಧಬಾಹ್ಯತಪಮುಂ ಪ್ರಾಯಶ್ಚಿತ್ತವಿನಯಾದಿ ಷಡಂತರಂಗತಪಮುಂ .. .. ತಮ್ಮೊಳುಂ ಸಚ್ಛನ್ನಮಾಗಿ: ಪುಷ್ಪದಂಪು, ೧೪. ೧೬ ವ)

ಷಡಭಿಜ್ಞ

[ಷಟ್+ಅಭಿಜ್ಞ] ದಿವ್ಯದೃಷ್ಟಿ, ದಿವ್ಯಶ್ರುತಿ, ಪೂರ್ವಾನುಸ್ಮೃತಿ, ಪರೇಂಗಿತಜ್ಞಾನ, ಪರೋಕ್ಷವಿಷಯಜ್ಞಾನ, ಗಗನಗಮನಾದಿ ವಿದ್ಯಾಬುದ್ಧಿ ಈ ಆರು ಶಾಸ್ತ್ರಗಳನ್ನು ಬಲ್ಲವನು, ಬುದ್ಧ (ಬುದ್ಧಂ ಸಮಂತಭದ್ರಂ ಸಿದ್ಧಾರ್ಥಂ ಮುನಿ ತಥಾಗತಂ ಷಡಭಿಜ್ಞಂ ಶೌದ್ಧೋದನಿ: ಅಭಿಧಾವ, ೧. ೧. ೧೦); ಬೌದ್ಧಮತೀಯ (ಷಡಭಿಜ್ಞಂ ಕ್ಷಣಿಕಂ ಜಡಾತ್ಮನೆನಿಪಂ ನೈಯಾಯಿಕಂ .. .. ನಡೆವಂ ಕಾಪಿಳವೃತ್ತಿಯಂ ಬಿಡದೆ ಸಾಂಖ್ಯಂ ನೋೞ್ಪೊಡೆಂದೊಲ್ಲದೊಳ್ಪಡರ್ವನ್ನಂ ಶ್ರುತಕೀರ್ತಿದೇವರೊಳ್ ನಿಂದಳ್ ವಾಣಿ: ಚಂದ್ರಪ್ರಪು, ೧. ೨೫)

ಷಡಯನ

ದುಂಬಿ (ಒಡವೆಳೆದು ಸುರರೊಳಿದಱೊಳ್ ನುಡಿವುದು ಶುಕಸಮಿತಿ ದೇವಭಾಷೆಯನೆ ತೊದಳ್ಗೆಡೆಗುಡದೆ ಪಾಡುವುದು ಸಲೆ ಷಡಯನತತಿ ದೇವಗಾನಮನೆ ನುಣ್ದನಿಯಿಂ: ಚಂದ್ರಪ್ರಪು, ೧೨. ೯೭)

ಷಡಾನನ

ಷಣ್ಮುಖ (ಪಾಡುವ ಆಡುವ ಷಡಾನನಂ ಈ ಕೃತಿಗೆ ಈಗೆ ರಾಗಮಂ: ಗಿರಿಜಾಕ, ೧.೬)
< previous123Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App