ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892324Next >

ಹಕ್ಕರಿಕ್ಕೆ

ಪಕ್ಷರಕ್ಷೆ (ಉರು ಬಾಹುರಕ್ಷೆ ಘನಸೋಳಹಖಂಡದ ಹಕ್ಕರಿಕ್ಕೆ .. .. ಒಪ್ಪುವ ಗಂಧಸಿಂಧುರೋತ್ಕರಮನಡರ್ದು: ತ್ರಿಷಷ್ಟಿಪು, ೨೪. ೨೯೩)

ಹಂಗ

ಶಕುನದ ಹಕ್ಕಿ (ಗಂಡಾದ ಅಕಾರಾಂತ ನಪುಂಸಕಕ್ಕೆ: ಕೋಣಂ ಹಂಗಂ ಹಸುಬಂ ಸರ್ಪಂ ಗರುಡಂ: ಶಬ್ದಮದ, ೧೩೨ ಪ್ರ)

ಹಗರಣ

ನಾಟಕ ಪ್ರಕಾರ (ನಮ್ಮರಸಂ ಪಾಱುವ ಬಹುರೂಪವಿಕೃತಮಂ ಪಲತೆಱದಿಂ ತೋಱುವ ಹಗರಣಂ ಇವರೊಳ್ ಮಾಱಾಂತೊಡನೊಡನಾಡೆ ನಗೆಗೆಡೆಯಕ್ಕುಂ: ಆಚವರ್ಧ, ೭. ೫೭)

ಹಟತ್

ಹೊಳೆಯುವ (ಘಟಾಘಟಿತ ಹಟತ್ ವಿರೋಧಿರುಧಿರಪ್ಲವಲಂಪಟ ಸಂಕಟೋತ್ಕಟಂ: ಪಂಪಭಾ, ೧೧. ೧೪೬)

ಹಟತ್ಕಾರ

ಗರ್ವ (ಕಲಿಯುಂ ಬಲ್ಲಾಳುಂ ಎನ್ನಿಂದೊಳರೆ ಪೆಱರುಂ ಎಮಬೀ ಹಟತ್ಕಾರದಿಂದಂ: ಹರಿವಂಶ, ೧೨. ೪)

ಹಟತ್ಕಿರೀಟ

ಹೊಳೆಯುವ ಕಿರೀಟ (ಕಟಕ ಕಟಿಸೂತ್ರ ಕುಂಡಲ ಹಟತ್ಕಿರೀಟ ಅಂಗದಾದಿ ಮಣಿಭೂಷಣ ಭಾಜಟಿಳಿತ ಮೂರ್ತ್ಯುತ್ಕರ್ಷಂ ಸ್ಫುಟಹರ್ಷಂ ತನ್ನ ವರ್ಷವರ್ಧನ ದಿನದೊಳ್: ಆದಿಪು, ೨. ೨)

ಹಟದ್ರತ್ನ

[ಹಟತ್+ರತ್ನ] ಹೊಳೆಯುವ ಮಣಿ (ವೈದೇಹಿಗೆ ಮಕುಟಹಟದ್ರತ್ನ ದಿಂದರ್ಘ್ಯಮಿತ್ತಂ: ಪಂಪರಾ, ೯. ೮೪)

ಹಟನ್ನೀರೇಜ

ಕಾಂತಿಮಯವಾದ ತಾವರೆ (ಇರ್ದತ್ತು ಹಟನ್ನೀರೇಜನಾಳಂ ನಿಮಿರ್ದುದನಿದಿರೊಳ್ ಪೊತ್ತು ತೋರ್ಪಂದದಿಂದಂ: ಸುಕುಮಾಚ, ೩. ೧೫)

ಹಟ್ಟಿಕಾಳಗ

ಮನೆ ಜಗಳ (ನಾರಕರಂ ಅನ್ಯಜನ್ಮದ ವೈರಮ ಎೞ್ಚಱಸಿದ ಹಟ್ಟಿಕಾಳಗಮಂ ಕಣ್ಣಾರೆ ನಿರೀಕ್ಷಿಪ ತೆಱದಿಂ: ಪಾರ್ಶ್ವನಾಪು, ೧೩. ೭೩)

ಹಡಣ

ಪಡಣ, ಪತನ, ನಾಶ (ವಿದೂಷಕಂ ಈಕೆ ಹುಟ್ಟುಗೆಟ್ಟ ಹುಟ್ಟಗೆಯಂತೆ ಹಡಣಮೊಣಗಿದ ಹೞೆಯ ಸಿದ್ದಿಗೆಯಂತೊಣಕುಟ್ಟದೆ ಪತ್ತಿದ ಹಾೞೂರ ನಾಯಂತೆ ಒಡಲಂ ಪತ್ತಿದ .. .. ನೆವಮಿಕಿದಪಳೆಂದು ನಗಿಸಿದಂ: ಲೀಲಾವತಿ, ೨. ೧೧೬ ವ)

ಹಡಣಿಗಿತ್ತಿ

ಹಾದರಗಿತ್ತಿ, ಸೂಳೆ (ಮತ್ತೊರ್ವಳ್ ನೆರಮನೆಯ ಮಱಸೂಳೇಯ ಸೊಬಂಗಿಂಗೞಲ್ದು ತನ್ನಂತೆ ಪಡವುಡುಗಿ ಗಡಣಕ್ಕೆ ಬಂದ ಹಡಣಗಿತ್ತಿ ಸೂಳೆಗಿಂತೆಂದಳ್: ಅನಂತಪು, ೮. ೧೮ ವ)

ಹಡಪವಳ

ಸೇವಕ (ಹಡಪವಳನ ಹಡಪದೊಳಿರ್ದಡಕೆಗಳಂ ಮಾಡಿಯಾಡೆ ಪಿಕ್ಕೆಗಳಂ ಮತ್ತೆಡೆಯುಗದೆಲೆಗಳಂ ಮೆಳ್ಪಡಲೆಕ್ಕೆಯ ನೀರ್ಳವನೆಲೆಗಳಾಗಳ್: ಪುಣ್ಯಾಸ್ರ, ೮. ೩೬)

ಹಡಲಂ

(ಹಾಗಲ ಹಡಲಂ ಗುಳ್ಳಂ ಕೂಗುರಿ ಕೂಷ್ಮಾಂಡ ಅವರೆ ಬದಣೆಗಳಿಂ ಲೇಸಾಗಿರೆ: ಧರ್ಮಪ, ೨. ೫೮)

ಹಡಹಾಳಿ

ಸಂಪಾದಿಸುವವನು (ಹಡಹಾಳಿ ಸತ್ತ ಮನೆಯಂತೆ: ಧರ್ಮಾಮೃ, ೫. ೮೩ ವ)

ಹಡುಕೆ

ದುರ್ಗಂಧ, ಅಮೇಧ್ಯ (ಹಡುಕೆಯ ಕೆಲದೊಳ್ ಗೋಹಳಿಯೆಡೆಯೊಳ್ .. .. ವಿಪ್ರಜನಂಗಳ್ ಓದುವರೆಂತೋ: ಸಮಯಪ, ೧೧. ೧೪)

ಹಣಾಹಣಿ

ಹಣೆಯಿಂದ ಹಣೆಗೆ ಹೊಡೆದು ಮಾಡುವ ಹೋರಾಟ (ದಂಡಾದಂಡಿ ಕಚಾಕಚಿ ಧಾೞಾಧಾೞ ದೆಖ್ಖಾದೆಖ್ಖಿ ಹಣಾಹಣಿ: ಶಬ್ದಮದ, ೧೯೬ ಪ್ರ)

ಹಣ್ಣು

ಮಾಡು (ಕಿಱಯ ವನಿತೆ .. .. ಬಱಯ ಕಲಹವನೆ ಹಣ್ಣಿ ಕಡುರೋಷದಿದೆ ಬಗ್ಗಿಸಿ ನುಡಿದಳ್: ಧರ್ಮಪ, ೨. ೪೯)

ಹತ

ಭಂಗಗೊಂಡ (ಹತಭುಜಗರ್ವಮಾಗೆ ದೆಸೆಗೆಟ್ಟನಿರುದ್ಧತಳಪ್ರಹಾರದಿಂ: ಜಗನ್ನಾವಿ, ೭. ೧೨೯)

ಹತದೈವ

ದುರದೃಷ್ಟವಂತ (ಹತದೈವಂ ಪ್ರಾರಂಭಂ ಪ್ರತಿಕಾರಂ ದೀರ್ಘಸೂತ್ರ ತತ್ಪ್ರತಿಕಾರಂ ಶತಮಾದೊಡೆ ಅಂತು ಮೋಕ್ಷಂ ಹತೋರುಗೆನಗಾವುದು ಇಂ ಗಡ ಪ್ರತಿಕಾರಂ: ಗದಾಯು, ೯. ೨೫)

ಹತಪ್ರತಿಜ್ಞ

ಪ್ರತಿಜ್ಞಾಭಂಗರಾದವರು (ಆತ್ಮೀಯವಿದ್ಯಾ ಗರ್ವಪರ್ವತಂ ಅವರ ವಚೋನಿರ್ಘಾತದಿಂ ನುಚ್ಚುನುಱಯಾಗಿ ಪೋದೊಡೆ ಹತಪ್ರತಿಜ್ಞರುಂ ಗಳಿತಗರ್ವರುಂ ಆಗಿ: ಆದಿಪು, ೩. ೭೫ ವ)
< previous1234567892324Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App