ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಗೆಯ್

ಅಂಗೈ, ಕರತಲ (ತಾನಂಗೆಯ್ಯ ಪದ್ಮದಿಂ ಚರಣಂಗಳ ಪದ್ಮದಿಂದೆ ಗಿರಿಸುತೆಯೆಸೆದಳ್: ಗಿರಿಜಾಕ, ೩.೫೮)

ಅಂಗೈಸು

ಹವಣಿಸು (ಸುರಿವ ಮುತ್ತುಗಳಂ ಕಾರ ಮುಂಬನಿಯ ತಂದಲೆಂದು ಬಂದು ನುಂಗಲಂಗೈಸುವ ಚಾದಗೆಯ ಮಱಗಳುಮಂ; ಕಬ್ಬಿಗಕಾ, ೧೮೧ ವ)

ಅಂಗೋದ್ಭವ

ಮನ್ಮಥ (ಮಸೆದ ಅಂಗೋದ್ಭವನ ಅಸ್ತ್ರದಂತೆಸೆವ ನಿನ್ನೀ ರೂಪು ವೃದ್ಧತ್ವದೊಳ್ ಪೊಸತೊಂದಾಯ್ತು: ಆದಿಪು, ೨. ೪೭)

ಅಂಗೋದ್ಭೂತ

ಮನ್ಮಥ (ಶೃಂಗಾರಾಮೃತವಾರ್ಧಿಜಾತೆ .. .. ಸಂದ ಅಂಗೋದ್ಭೂತನಗಣ್ಯ ಪುಣ್ಯನಿಧಿ: ಕರ್ಣನೇಮಿ, ೮. ೯೫)

ಅಂಘ್ರಿಪ

ಮರ (ಮೇರುಮಹೀಜಾತಂ ಪಾರಿಜಾತ ಅಂಘ್ರಿಪೋತ್ಕರಂ ಅಶ್ಮಬ್ರಜಂ ಪಯಃಪ್ರಸರಮುಂ ಚಿಂತಾಮಣಿ: ಶಾಂತೀಶ್ವಪು, ೧೪. ೮೯)

ಅಂಚಂ

ಅಂಕೆ, ಭಯ (ಅಂಚಮೆನಲ್ಕಂಜಿಕೆ: ರನ್ನನಿಘಂಟು, ೫)

ಅಂಚಳ

ಅಂಚು, ಸೆರಗು (ತಾಂಬೂಲಾಂಚಳಮುಮಂ ಚರಣಾಗ್ರದಿಂ ನೂಂಕಿ ಚಂದ್ರಾಪೀಡಂ ನೆಲದೊಳ್ ಕುಳ್ಳಿರೆ: ಕಾದಂಸಂ, ೨. ೪೩ ವ)

ಅಂಚಿತ

ಅಲಂಕೃತ (ಮುಂದೊಂದೆಡೆಯೊಳ್ ಇಡಿಕೆಗೊಂಡು ಕಣ್ಗೊಳಿಪ ಪಣ್ಗೊಂಚಲ ಸಂಚಯದಿಂದ ಅಂಚಿತಮಾಗಿರ್ದ ಗೋಸ್ತನೀ ಲತಾಮಂಡಪದ ಸಲ್ಲಲಿತ ಪಲ್ಲವಾಸ್ತರಣದೊಳ್: ಶಾಂತೀಶ್ವಪು, ೧೧. ೬೮ ವ); ಪ್ರಸಿದ್ಧವಾದ (ಅಂಚಿತ ದೇವತಾಭವನಸಂಕುಳದಿಂ ಗಣಿಕಾನಿವಾಸದಿಂ .. .. ಒಪ್ಪುಗುಂ ಕ್ರೌಂಚಪುರಂ: ಪಂಚತಂತ್ರ, ೧೨೪)

ಅಂಚಿರ

ಅಸ್ಥಿರ, ಚಂಚಲ (ಪೊಸನನೆಯೊಳ್ ಪಸುರ್ಪಲರೊಳಂಚಿರಮಲ್ಲದ ಬೆಳ್ಪು: ಆದಿಪು, ೧. ೬೬)

ಅಂಚೆ

ವಸ್ತ್ರ (ಅರುಣಾಂಬುಜದುಳ್ಳಲರೆಸಳ್ಗಳಂಚೆಯೊಳ್ ಸಂಚಲಿಸದೆ: ಮಲ್ಲಿನಾಪು, ೩. ೪೩); ಹಂಸ (ಕಡವಿನ ಕಂಪು ಅಡಂಗಿದುದು ಜಾದಿಯ ಕಂಪು ಒದವಿತ್ತು ಸೋಗೆಯ ಉರ್ಕು ಉಡುಗಿದುದು ಅಂಚೆಯುರ್ಕು ಪೊಸತಾಯ್ತು: ಪಂಪಭಾ, ೭. ೬೯); ಕೊನೆಯ ಭಾಗ (ಮಿಂಚಿನಂಚೆವೆರಸು ಕಾರ್ಮುಗಿಲ ಬಿೞಲು ಕಾಲೂಱದಂತೆ: ಅನಂತಪು, ೨. ೨೯ ವ)

ಅಂಚೆವಱ

ಹಂಸದ ಮರಿ (ಪಾಡುವ ಪಱಮೆಗಳಿಂದೊಲ್ದಾಡುವ ಮುದ್ದಂಚೆವಱಗಳಿಂ: ರಾಜಶೇವಿ, ೧೨. ೨೩)

ಅಂಚೆವಾಳತಿ

ಬಾಣಂತಿ ಹಂಸ (ಮಱಯಂಚೆಯ ಮುದ್ದುಗೆಯ್ತಮುಮನಂಚೆವಾಳತಿಯಾ ಮಱಯೊಳಾದ ಎಱಕಮುಮಂ: ಮಲ್ಲಿನಾಪು, ೪. ೧೩ ವ)

ಅಂಚೆವಿಂಡು

ಹಂಸದ ಹಿಂಡು (ರಮಣಿಯರ ನೂಪುರರಣಿತಕ್ಕೆಳಸಿ ಬರ್ಪ ಅಂಚೆವಿಂಡಿನಿಂಚರದೊಳಂ: ಕಾದಂಬ, ೧. ೫೮ ವ)

ಅಂಜನ

ಕಾಡಿಗೆ (ಆ ರಥದೊಳ್ ಒಡಂಬಡೆ ಪೂಡಿದ ನಾಲ್ನೂಱು ಗೊಂಕುಱುಗೞ್ತೆಯುಂ ಅಂಬರಸ್ಥಲಮನಡರ್ವ ಗೃಧ್ರಧ್ವಜಮುಂ ಅಂಜನಪುಂಜದಂತಾಗಿ: ಪಂಪಭಾ, ೧೨. ೭ ವ); ಲೇಪನ

ಅಂಜನಚೋರ

ಅಂಜನ ಹಚ್ಚಿಕೊಂಡು ಕಳ್ಳತನ ಮಾಡುವವನು (ಅಂಜನಚೋರಂ ಘುಟಿಕಾಪ್ರಯೋಗದಿಂದೃಶ್ಯ ರೂಪದಿಂ ಪೋಗಿ ಕಳ್ದು ತಂದು: ಧರ್ಮಾಮೃ, ೨. ೭೫ ವ)

ಅಂಜನದಿಕ್

ಪಶ್ಚಿಮ (ಅಂತು ಅಂಜನದಿಕ್ ಕುಂಜರದಂತೆ ಬರುತಿರ್ಪುದುಂ: ಪಂಪರಾ, ೮. ೩೮ ವ)

ಅಂಜನಪುಂಜ

ಕಾಡಿಗೆಯ ಮುದ್ದೆ (ಅಂಜನಪುಂಜದಂತಪ್ಪ ಮೆಯ್ಯುಂ ಸಿಡಿಲಂ ಅಡಸಿದಂತಪ್ಪ ದಾಡೆಯುಂ ಉರಿಯ ಉರುಳಿಯಂತಪ್ಪ ಕಣ್ಣುಂ ಕೃತಾಂತನಂತೆ ಆಕಾರಮಾಗಿ: ಪಂಪಭಾ, ೪. ೪೨ ವ)

ಅಂಜನಸಿದ್ಧ

ಅಂಜನ ಹಚ್ಚಿಕೊಂಡು ಅದ್ಭುತ ಕೆಲಸ ಮಾಡುವವನು (ಕೊಂದಂ ಕೊಲ್ವಂತೆ ರಸಮನಂಜನಸಿದ್ಧಂ: ಶಬ್ದಮದ, ೨೪೮ ಪ್ರ)

ಅಂಜನಾತನಯ

ಆಂಜನೇಯ (ಪತಿಹಿತಂ ಅಂಜನಾತನಯಂ ಆ ಪವನಾತ್ಮಜನಿಂ ಖಗೇಶ್ವರಂ ಪತಿಹಿತಂ ಆ ಮರುತ್ತನಯನಿಂ ಖಗರಾಜಂ ಅರ್ಕನಂದನಂ ಪತಿಹಿತಂ: ಪಂಚತಂತ್ರ, ೪೪೭)

ಅಂಜನಿಸು

ತಿರಸ್ಕರಿಸು (ತರಳಮುಕ್ತಾವತಂಸಪ್ರಭಾ ಪಲ್ಲವಮಾಕಾರಂ ಸ್ಮರಾಕಾರಮಂ ಅಂಜನಿಸೆ: ಪಂಪರಾ, ೨. ೩)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App